AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tamil Nadu: ದೇವಾಲಯದಲ್ಲಿ ಬಾಲ್ಯ ವಿವಾಹ ನಡೆಸಿದ ಮೂವರು ಅರ್ಚಕರ ಬಂಧನ

ತಮಿಳುನಾಡಿನ ಚಿದಂಬರಂನಲ್ಲಿರುವ ನಟರಾಜ ದೇವಸ್ಥಾನದ ಮೂವರು ಅರ್ಚಕರು ಅಕ್ಟೋಬರ್ 15ರಂದು ಬಾಲ್ಯ ವಿವಾಹ ನಡೆಸಿದ್ದರೆ, ಇದೀಗ ಈ ಆರೋಪ ಮೇಲೆ ಅವರನ್ನು ಬಂಧನ ಮಾಡಲಾಗಿದೆ.

Tamil Nadu: ದೇವಾಲಯದಲ್ಲಿ ಬಾಲ್ಯ ವಿವಾಹ ನಡೆಸಿದ ಮೂವರು ಅರ್ಚಕರ ಬಂಧನ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Oct 17, 2022 | 9:53 AM

ಚೆನ್ನೈ: ತಮಿಳುನಾಡಿನ ಚಿದಂಬರಂನಲ್ಲಿರುವ ನಟರಾಜ ದೇವಸ್ಥಾನದ ಮೂವರು ಅರ್ಚಕರು ಅಕ್ಟೋಬರ್ 15ರಂದು ಬಾಲ್ಯ ವಿವಾಹ ನಡೆಸಿದ್ದರೆ, ಇದೀಗ ಈ ಆರೋಪ ಮೇಲೆ ಅವರನ್ನು ಬಂಧನ ಮಾಡಲಾಗಿದೆ. ಈ ಮೂರು ಅರ್ಚಕರ ಬಂಧನದ ವಿರುದ್ಧ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು ಆದರೆ ನಂತರ ಪ್ರತಿಭಟನೆಯನ್ನು ಹಿಂಪಡೆದಿದ್ದರೆ.

ತಮಿಳುನಾಡಿನ ಕಡಲೂರು ಜಿಲ್ಲೆಯ ಚಿದಂಬರಂ ನಟರಾಜ ದೇಗುಲದ ಅರ್ಚಕರು ಮತ್ತು ಆ ದೇವಾಲಯದ ಕಾರ್ಯದರ್ಶಿ ಹೇಮಸಾಬೇಶ ಮತ್ತು ವಿಜಯಬಾಲ ಅವರನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ. ಇದರ ಜೊತೆಗೆ ಈ ಆರೋಪದಲ್ಲಿ ವಿಜಯಬಾಲಾ ಅವರ ಪುತ್ರ ಜ್ಞಾನಶೇಖರನ್‌ ಕೂಡ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸಮಾಜ ಕಲ್ಯಾಣ ಇಲಾಖೆಯು ಕಡಲೂರು ಪೊಲೀಸರಿಗೆ ದೂರು ನೀಡಿದ್ದು, ಹೇಮಸಾಬೇಶ ಅರ್ಚಕರು ತನ್ನ 13 ವರ್ಷದ ಮಗಳನ್ನು ವಿಜಯಬಾಲಾ ಅರ್ಚಕರ 17 ವರ್ಷ ಮಗ ಜ್ಞಾನಶೇಖರನ್‌ಗೆ ಮದುವೆ ಮಾಡಿಕೊಟ್ಟಿದ್ದಾರೆ.

ಇದನ್ನು ಓದಿ; ಆಂಧ್ರಪ್ರದೇಶದಲ್ಲಿ ವಿಷದ ಇಂಜೆಕ್ಷನ್ ಚುಚ್ಚಿ 18 ನಾಯಿಗಳ ಹತ್ಯೆ

ಈ ವಿಚಾರವಾಗಿ ಅರ್ಚಕರ ಬೆಂಬಲಿಗರು ಬಂಧನವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು, ನಂತರದಲ್ಲಿ ಈ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು. ಅರ್ಚಕರು ನಮ್ಮ ಜಾತಿಯವರಿಗೆ ನಾವು ನಮ್ಮ ಮಕ್ಕಳನ್ನು ಮದುವೆ ಮಾಡಿಲೊಟ್ಟಿದ್ದೇವೆ ಎಂದು ಹೇಳಿದ್ದಾರೆ. ಈ ಇಬ್ಬರು ಅರ್ಚಕರು ಚಿದಂಬರಂ ನಟರಾಜರ ದೇವಸ್ಥಾನವನ್ನು ನಿರ್ವಹಿಸುತ್ತಿದ್ದರೆ. ಇತ್ತೀಚೆಗೆ, ಹಿಂದೂ ಧರ್ಮದಾಯ ಮತ್ತು ದತ್ತಿ ಇಲಾಖೆಯು ದೇವಾಲಯದ ಸಮಸ್ಯೆಗಳ ಬಗ್ಗೆ ಸಲಹೆಗಳನ್ನು ಕೇಳಿದೆ. ಈ ವಿಚಾರವಾಗಿ ಸ್ಥಳೀಯರ ಅಕ್ರೋಶ ಕೂಡ ಇತ್ತು. ದೇವಸ್ಥಾನದಲ್ಲಿ ಬಾಲ್ಯವಿವಾಹ ನಡೆಸಲಾಗುತ್ತಿದೆ ಎಂಬ ಆರೋಪ ಸೇರಿದಂತೆ ದೇವಸ್ಥಾನದಲ್ಲಿನ ಅವ್ಯವಹಾರದ ಬಗ್ಗೆ ಸುಮಾರು 19,000 ಅರ್ಜಿಗಳನ್ನು ಸ್ವೀಕರಿಸಿದರು ಎಂದು ಹೇಳಿದ್ದಾರೆ.

Published On - 9:53 am, Mon, 17 October 22