ಕೋಲಾರ: ಹಳೆ ದ್ವೇಷದ ಹಿನ್ನೆಲೆ ಮಾಜಿ ಪುರಸಭಾ ಸದಸ್ಯ ಪಚ್ಚಪ್ಪನ ಮೇಲೆ ಹಲ್ಲೆ ನಡೆಸಿರುವ ಘಟನೆ ಕೋಲಾರ ಜಿಲ್ಲೆ ಮಾಲೂರು ಪಟ್ಟಣದಲ್ಲಿ ನಡೆದಿದೆ. ಇಂದಿರಾ ನಗರ ನಿವಾಸಿ ಮುನಿರಾಜು ಹಲ್ಲೆ ನಡೆಸಿದ ವ್ಯಕ್ತಿ. ಮಕ್ಕಳನ್ನು ಶಾಲೆಗೆ ಬಿಟ್ಟು ವಾಪಸ್ಸಾಗುವ ವೇಳೆ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಹಲ್ಲೆ ಮಾಡಿದ್ದಾರೆ.
ಜನವರಿ7ರಂದು ಒಂಟಿ ಯುವತಿ ಇದ್ದ ಮನೆಯನ್ನ ಧ್ವಂಸ ಮಾಡಿದ್ದ ಹಿನ್ನಲೆ ಮುನಿರಾಜು ಎಂಬಾತನ ಮೇಲೆ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಯುವತಿಗೆ ಮಾಜಿ ಪುರಸಭೆ ಸದಸ್ಯ ಪಚ್ಚಪ್ಪ ಸಹಾಯ ಮಾಡಿದ್ದರು. ಈ ಹಿನ್ನೆಲೆ ಮುನಿರಾಜು ಹಾಗೂ ಸಹಚರರು ಸೇರಿ ಹಲ್ಲೆ ಮಾಡಿದ್ದಾರೆ. ಗಾಯಾಳು ಪಚ್ಚಪ್ಪ ಮಾಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ಮಾಡಿದ ಆರೋಪಿ ಮುನಿರಾಜುನನ್ನು ಮಾಲೂರು ಪೊಲೀಸರು ಬಂಧಿಸಿದ್ದಾರೆ.