ಬಗೆದಷ್ಟೂ ಸಿಗ್ತಿದೆ Drugs ಹುಳಗಳ ದೊರೆ ವಿರೇನ್ ಖನ್ನಾನ 13 ದೇಶಗಳ ಆಸ್ತಿಪಾಸ್ತಿಯ ನಂಟು!
ಬೆಂಗಳೂರು: ಡ್ರಗ್ಸ್ ದಂಧೆ ಕೇಸ್ ತನಿಖೆಯ ಹಾದಿಯಲ್ಲಿ.. ಮಾದಕ ವಸ್ತುಗಳ ಮಾರಾಟ ಹಾಗೂ ಡ್ರಗ್ಸ್ ಪಾರ್ಟಿಗಳ ಆಯೋಜನೆಯಿಂದ ಬೇನಾಮಿ ಆಸ್ತಿ ಸಂಪಾದಿಸಿರೋ ಆರೋಪಿಗಳಿಗೆ ಗುನ್ನಾ ಬೀಳುವ ಸಾಧ್ಯತೆಯಿದೆ. ಈ ಕುರಿತು ರೋಚಕ ಸಂಗತಿಗಳ ಕಂಪ್ಲೀಟ್ ಡಿಟೇಲ್ಸ್ ಟಿವಿ 9ಗೆ ಲಭ್ಯವಾಗಿದೆ. ಹೌದು, CCB ಆಯ್ತು, ED ಬಂದು ಹೋಯ್ತು ಇದೀಗ ಮತ್ತೊಂದು ಕೇಂದ್ರ ಸಂಸ್ಥೆ ತನಿಖೆಗೆ ಸಿದ್ಧತೆ ನಡೆಸಿದೆ. ಯಸ್, CCB, ED ಬಳಿಕ ಇದೀಗ ಕೇಸ್ನ ತನಿಖೆಗೆ ಆದಾಯ ತೆರಿಗೆ ಅಥವಾ IT ಇಲಾಖೆಯು ಸಹ […]
ಬೆಂಗಳೂರು: ಡ್ರಗ್ಸ್ ದಂಧೆ ಕೇಸ್ ತನಿಖೆಯ ಹಾದಿಯಲ್ಲಿ.. ಮಾದಕ ವಸ್ತುಗಳ ಮಾರಾಟ ಹಾಗೂ ಡ್ರಗ್ಸ್ ಪಾರ್ಟಿಗಳ ಆಯೋಜನೆಯಿಂದ ಬೇನಾಮಿ ಆಸ್ತಿ ಸಂಪಾದಿಸಿರೋ ಆರೋಪಿಗಳಿಗೆ ಗುನ್ನಾ ಬೀಳುವ ಸಾಧ್ಯತೆಯಿದೆ. ಈ ಕುರಿತು ರೋಚಕ ಸಂಗತಿಗಳ ಕಂಪ್ಲೀಟ್ ಡಿಟೇಲ್ಸ್ ಟಿವಿ 9ಗೆ ಲಭ್ಯವಾಗಿದೆ. ಹೌದು, CCB ಆಯ್ತು, ED ಬಂದು ಹೋಯ್ತು ಇದೀಗ ಮತ್ತೊಂದು ಕೇಂದ್ರ ಸಂಸ್ಥೆ ತನಿಖೆಗೆ ಸಿದ್ಧತೆ ನಡೆಸಿದೆ. ಯಸ್, CCB, ED ಬಳಿಕ ಇದೀಗ ಕೇಸ್ನ ತನಿಖೆಗೆ ಆದಾಯ ತೆರಿಗೆ ಅಥವಾ IT ಇಲಾಖೆಯು ಸಹ ಎಂಟ್ರಿ ಕೊಟ್ಟಿದೆ. ಆರೋಪಿಗಳ ಆದಾಯದ ಮೇಲೆ ಹದ್ದಿನ ಕಣ್ಣಿಟ್ಟಿರೋ ಇಲಾಖೆಗೆ ಅವರು ಆದಾಯಕ್ಕಿಂತ ಹೆಚ್ಚು ಆಸ್ತಿ ಮಾಡಿರೋದು ಕಂಡುಬಂದಿದೆ. ಹೀಗಾಗಿ, ಬಂಧಿತ ಆರೋಪಿಗಳ ಆದಾಯದ ಬಗ್ಗೆ IT ಟೀಂ ಪರಿಶೀಲನೆ ನಡೆಸಿದೆ.
ದೇಶ, ವಿದೇಶಗಳಲ್ಲಿದೆ ವಿರೇನ್ ಖನ್ನಾ ಅಪಾರ ಸಂಪತ್ತು! ವಿದೇಶಿ ಪಾರ್ಟಿ ಕಿಂಗ್ಪಿನ್ ವಿರೇನ್ ಖನ್ನಾ ಮಾಡಿರೋ ಆಸ್ತಿಪಾಸ್ತಿ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ. ವಿರೇನ್ ಖನ್ನಾ ಸುಮಾರು 250ಕ್ಕೂ ಹೆಚ್ಚು ಆಸ್ತಿ ಹೊಂದಿದ್ದಾನೆ. ಪ್ರತಿ ವರ್ಷ 2 ಕೋಟಿ 50 ಲಕ್ಷ ರೂಪಾಯಿ ಆದಾಯ ತೆರಿಗೆ ಪಾವತಿ ಸಹ ಮಾಡ್ತಾನೆ ಎಂದು ತಿಳದುಬಂದಿದೆ.
ಒಂದಲ್ಲ, ಎರಡಲ್ಲ ಬರೋಬ್ಬರಿ 13 ದೇಶಗಳಲ್ಲಿ ವಿರೇನ್ ಕುಟುಂಬ ಆಸ್ತಿ ಹೊಂದಿದೆ. ಜೊತೆಗೆ, ದೆಹಲಿ, ಮುಂಬೈ, ಹಾಗೂ ಬೆಂಗಳೂರಿನಲ್ಲಿ ಫ್ಲ್ಯಾಟ್ ಹೊಂದಿರೋ ವಿರೇನ್ ಮಹಾರಾಷ್ಟ್ರದ ಪುಣೆ ಬಳಿ ಖನ್ನಾ ಹೆಸರಿನಲ್ಲಿ ಫಾರ್ಮ್ಹೌಸ್ ಸಹ ಖರೀದಿಸಿದ್ದಾನೆ.
ಮೂರು ಇವೆಂಟ್ ಕಂಪನಿಗಳನ್ನ ಹೊಂದಿರೋ ಡ್ರಗ್ಸ್ ಕೇಸ್ನ A3 ಆರೋಪಿ ವಿರೇನ್ 4-5 ಐಷಾರಾಮಿ ಕಾರುಗಳನ್ನ ಸಹ ಖರೀದಿಸಿದ್ದಾನೆ. ಜೊತೆಗೆ, ಡ್ರಗ್ ಪೆಡ್ಲರ್ಗಳ ಜೊತೆ ವಿರೇನ್ ಖನ್ನಾ ನೇರ ಸಂಪರ್ಕ ಹೊಂದಿರೋದು ಕೂಡ ಪತ್ತೆಯಾಗಿದ್ದು Drugs ಪಾರ್ಟಿಗಳ ಅನಭಿಷಿಕ್ತ ದೊರೆ ವಿರೇನ್ ಖನ್ನಾನ ಸಂಪತ್ತನ್ನು ಮೊಗೆದಷ್ಟು ಮತ್ತಷ್ಟು, ಮಗದಷ್ಟೂ ಸಿಗುತ್ತಿದೆ..
Published On - 12:47 pm, Tue, 15 September 20