AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅದು ನನ್ನ ವೈಯಕ್ತಿಕ ವಿಚಾರ, ನೀವು ಹಾಗೆಲ್ಲ ನೋಡುವಂತಿಲ್ಲ -CCB ತಂಡಕ್ಕೆ ಖನ್ನಾ ಆವಾಜ್​

ಬೆಂಗಳೂರು: ಜಟ್ಟಿ ಬಿದ್ರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ತಾನು ಅರೆಸ್ಟ್​ ಆಗಿದ್ರೂ A3 ಆರೋಪಿ ವಿರೇನ್​ ಖನ್ನಾಗೆ ದುಡ್ಡಿನ ದರ್ಪ ಇನ್ನೂ ಇಳಿದಿಲ್ಲ ಅನ್ನಿಸುತ್ತೆ. ಇದೀಗ, CCB ಅಧಿಕಾರಿಗಳಿಗೆ A3 ವಿರೇನ್ ಖನ್ನಾ ಕಿರಿಕ್ ಕೊಡ್ತಿದ್ದಾನಂತೆ. ಬಂಧನವಾಗಿ ಇಷ್ಟು ದಿನವಾದರೂ ಖನ್ನಾ ತನ್ನ ಮೊಬೈಲ್​ ಅನ್​ಲಾಕ್​ ಮಾಡಿಕೊಡುತ್ತಿರಲಿಲ್ಲ ಎಂದು ತಿಳಿದುಬಂದಿದೆ. ಅದು ನನ್ನ ವೈಯಕ್ತಿಕ ವಿಚಾರ. ನೀವು ಹಾಗೆಲ್ಲ ನೋಡುವಂತಿಲ್ಲವೆಂದು ಅಧಿಕಾರಿಗಳಿಗೆ ಕಿರಿಕ್​ ಕೊಡುತ್ತಿದ್ದನಂತೆ. CCB ಪೊಲೀಸರ ಸೂಚನೆಗೆ ಕೇರ್​ ಮಾಡದ ಖನ್ನಾ ಎಷ್ಟೇ ಮನವಿ ಮಾಡಿದ್ರು […]

ಅದು ನನ್ನ ವೈಯಕ್ತಿಕ ವಿಚಾರ, ನೀವು ಹಾಗೆಲ್ಲ ನೋಡುವಂತಿಲ್ಲ -CCB ತಂಡಕ್ಕೆ ಖನ್ನಾ ಆವಾಜ್​
KUSHAL V
|

Updated on: Sep 15, 2020 | 6:24 PM

Share

ಬೆಂಗಳೂರು: ಜಟ್ಟಿ ಬಿದ್ರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ತಾನು ಅರೆಸ್ಟ್​ ಆಗಿದ್ರೂ A3 ಆರೋಪಿ ವಿರೇನ್​ ಖನ್ನಾಗೆ ದುಡ್ಡಿನ ದರ್ಪ ಇನ್ನೂ ಇಳಿದಿಲ್ಲ ಅನ್ನಿಸುತ್ತೆ. ಇದೀಗ, CCB ಅಧಿಕಾರಿಗಳಿಗೆ A3 ವಿರೇನ್ ಖನ್ನಾ ಕಿರಿಕ್ ಕೊಡ್ತಿದ್ದಾನಂತೆ. ಬಂಧನವಾಗಿ ಇಷ್ಟು ದಿನವಾದರೂ ಖನ್ನಾ ತನ್ನ ಮೊಬೈಲ್​ ಅನ್​ಲಾಕ್​ ಮಾಡಿಕೊಡುತ್ತಿರಲಿಲ್ಲ ಎಂದು ತಿಳಿದುಬಂದಿದೆ. ಅದು ನನ್ನ ವೈಯಕ್ತಿಕ ವಿಚಾರ. ನೀವು ಹಾಗೆಲ್ಲ ನೋಡುವಂತಿಲ್ಲವೆಂದು ಅಧಿಕಾರಿಗಳಿಗೆ ಕಿರಿಕ್​ ಕೊಡುತ್ತಿದ್ದನಂತೆ. CCB ಪೊಲೀಸರ ಸೂಚನೆಗೆ ಕೇರ್​ ಮಾಡದ ಖನ್ನಾ ಎಷ್ಟೇ ಮನವಿ ಮಾಡಿದ್ರು ತನಿಖಾಧಿಕಾರಿಗೆ ಸಹಕರಿಸುತ್ತಿರಲಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಇದರಿಂದ ವಿರೇನ್​ ಖನ್ನಾ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಬಿಟ್ಟಿದ್ದ.

ಕೊನೆಗೆ, ಕೋರ್ಟ್ ಮೂಲಕ ಸೂಚನೆ ನೀಡಿಸಿದ CCB ಪೊಲೀಸರು ಆತನಿಗೆ ಮೊಬೈಲ್​ ಫೋನ್​ ಅನ್​ಲಾಕ್​ ಮಾಡುವಂತೆ ಹೇಳಿದ್ದಾರೆ. ಇದಕ್ಕೆ ಒಪ್ಪಿದ ಖನ್ನಾ ಮೊಬೈಲ್​ ಅನ್​ಲಾಕ್​ ಮಾಡಿಕೊಟ್ಟಿದ್ದು ಸದ್ಯ FSL ತಜ್ಞರಿಂದ ವಿರೇನ್ ಖನ್ನಾ​ ಮೊಬೈಲ್ ಪರಿಶೀಲನೆ ನಡೆಸಲಾಗುತ್ತಿದೆ.

ಇದೀಗ, ಕಳೆದ ಎರಡು ದಿ‌ನಗಳಿಂದ ಪರಿಶೀಲನೆ ನಡೆಸಲಾಗುತ್ತಿದ್ದು ಖನ್ನಾ ಮೊಬೈಲ್​ನಲ್ಲಿ ಪ್ರಮುಖ ಮಾಹಿತಿಗಳು, ದೊಡ್ಡ ದೊಡ್ಡವರ ಫೋನ್ ನಂಬರ್​ಗಳು ಪತ್ತೆಯಾಗಿದೆ. ಜೊತೆಗೆ, WhatsApp ಚಾಟ್ ಕೂಡ ರಿಟ್ರೀವ್ ಮಾಡುತ್ತಿರುವ ತಜ್ಞರಿಗೆ ಖನ್ನಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಪರ್ಕ ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಈ ಮಾಹಿತಿಯನ್ನು ಇಟ್ಟುಕೊಂಡು ಅಧಿಕಾರಿಗಳು ತನಿಖೆಯನ್ನ ಮತ್ತಷ್ಟು ಚುರುಕುಗೊಳಿಸಲಿದ್ದಾರೆ ಎಂದು ಹೇಳಲಾಗಿದೆ.

Follow Us
ಮೈಸೂರು ರಸ್ತೆ To ಮಾಗಡಿ ರಸ್ತೆ ಕೇವಲ 15 ನಿಮಿಷ: ಹೇಗಿದೆ ನೋಡಿ ಕೃಷ್ಣ ಪಥ
ಮೈಸೂರು ರಸ್ತೆ To ಮಾಗಡಿ ರಸ್ತೆ ಕೇವಲ 15 ನಿಮಿಷ: ಹೇಗಿದೆ ನೋಡಿ ಕೃಷ್ಣ ಪಥ
ಒಂದೇ ದಿನ 15 ಲಕ್ಷ ಸಸಿನೆಟ್ಟು ಗಿನ್ನಿಸ್​​ ದಾಖಲೆ ಬರೆಯಲು ಮುಂದಾದ ಬಿಡಿಎ
ಒಂದೇ ದಿನ 15 ಲಕ್ಷ ಸಸಿನೆಟ್ಟು ಗಿನ್ನಿಸ್​​ ದಾಖಲೆ ಬರೆಯಲು ಮುಂದಾದ ಬಿಡಿಎ
‘ಮೀಸಲಾತಿ ನಂಬಿದ್ರೆ ಶಾಸಕನೇ ಆಗ್ತಿರಲಿಲ್ಲ
‘ಮೀಸಲಾತಿ ನಂಬಿದ್ರೆ ಶಾಸಕನೇ ಆಗ್ತಿರಲಿಲ್ಲ
5 ಜನ ಜಲಸಮಾಧಿ:ಕಾವೇರಿ ನದಿ ದಡದಲ್ಲಿ ಬ್ಯಾರಿಕೇಡ್ ಅಳವಡಿಕೆಗೆ ಸೂಚನೆ
5 ಜನ ಜಲಸಮಾಧಿ:ಕಾವೇರಿ ನದಿ ದಡದಲ್ಲಿ ಬ್ಯಾರಿಕೇಡ್ ಅಳವಡಿಕೆಗೆ ಸೂಚನೆ
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ
ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​​ನ್ಯೂಸ್​​ ಕೊಟ್ಟ ರಾಜ್ಯ ಸರ್ಕಾರ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​​ನ್ಯೂಸ್​​ ಕೊಟ್ಟ ರಾಜ್ಯ ಸರ್ಕಾರ
ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ
ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ