ಶಾಸಕ ರಿಜ್ವಾನ್​ಗೆ ಶುಭ ಕೋರಿ ವಾಪಸಾಗುತ್ತಿದ್ದ ಬೆಂಬಲಿಗನ​ ಮೇಲೆ ಅಟ್ಯಾಕ್

ಬೆಂಗಳೂರು: ನಗರದಲ್ಲಿ ಸೈಯದ್ ರಿಯಾಜ್ ಎಂಬ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಲಾಂಗು, ಮಚ್ಚುಗಳಿಂದ ಹಲ್ಲೆ ನಡೆದಿದೆ. ಸೋಮೇಶ್ವರನಗರದಲ್ಲಿರುವ ರಿಯಾಜ್​​ ಮನೆ ಬಳಿಯೇ 2 ದ್ವಿಚಕ್ರ ವಾಹನಗಳಲ್ಲಿ ಬಂದಿದ್ದ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ರಿಯಾಜ್​ನ ತಲೆ, ಬೆನ್ನು, ಕುತ್ತಿಗೆ, ಕಾಲುಗಳ ಮೇಲೆ ಹಲ್ಲೆ ಆಗಿದ್ದು, ಗಾಯಾಳು ರಿಯಾಜ್​ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಿಯಾಜ್ ಕಳೆದ 10 ವರ್ಷಗಳಿಂದ ಎಸ್​ಡಿಪಿಐನಲ್ಲಿದ್ದರು. 2 ವರ್ಷದ ಹಿಂದೆ ಕಾಂಗ್ರೆಸ್​ಗೆ ಸೇರಿದ್ದರು. ಬೆಂಗಳೂರು ದಕ್ಷಿಣ ವಿಭಾಗದ ಕಾರ್ಯದರ್ಶಿಯಾಗಿದ್ದಾರೆ. ಬೆಳಗ್ಗೆ ಶಿವಾಜಿನಗರಕ್ಕೆ ತೆರಳಿದ್ದ […]

ಶಾಸಕ ರಿಜ್ವಾನ್​ಗೆ ಶುಭ ಕೋರಿ ವಾಪಸಾಗುತ್ತಿದ್ದ ಬೆಂಬಲಿಗನ​ ಮೇಲೆ ಅಟ್ಯಾಕ್
Follow us
ಸಾಧು ಶ್ರೀನಾಥ್​
| Updated By: Digi Tech Desk

Updated on:Mar 07, 2023 | 12:20 PM

ಬೆಂಗಳೂರು: ನಗರದಲ್ಲಿ ಸೈಯದ್ ರಿಯಾಜ್ ಎಂಬ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಲಾಂಗು, ಮಚ್ಚುಗಳಿಂದ ಹಲ್ಲೆ ನಡೆದಿದೆ. ಸೋಮೇಶ್ವರನಗರದಲ್ಲಿರುವ ರಿಯಾಜ್​​ ಮನೆ ಬಳಿಯೇ 2 ದ್ವಿಚಕ್ರ ವಾಹನಗಳಲ್ಲಿ ಬಂದಿದ್ದ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ರಿಯಾಜ್​ನ ತಲೆ, ಬೆನ್ನು, ಕುತ್ತಿಗೆ, ಕಾಲುಗಳ ಮೇಲೆ ಹಲ್ಲೆ ಆಗಿದ್ದು, ಗಾಯಾಳು ರಿಯಾಜ್​ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಿಯಾಜ್ ಕಳೆದ 10 ವರ್ಷಗಳಿಂದ ಎಸ್​ಡಿಪಿಐನಲ್ಲಿದ್ದರು. 2 ವರ್ಷದ ಹಿಂದೆ ಕಾಂಗ್ರೆಸ್​ಗೆ ಸೇರಿದ್ದರು. ಬೆಂಗಳೂರು ದಕ್ಷಿಣ ವಿಭಾಗದ ಕಾರ್ಯದರ್ಶಿಯಾಗಿದ್ದಾರೆ.

ಬೆಳಗ್ಗೆ ಶಿವಾಜಿನಗರಕ್ಕೆ ತೆರಳಿದ್ದ ಸೈಯದ್ ರಿಯಾಜ್​ ಉಪಚುನಾವಣೆಯಲ್ಲಿ ಗೆದ್ದ ಶಾಸಕ ರಿಜ್ವಾನ್​ ಅರ್ಷದ್​ಗೆ ಶುಭಾಶಯ ಕೋರಿ ಮನೆಗೆ ಹಿಂದಿರುಗಿದ ವೇಳೆ ರಿಯಾಜ್​ ಮೇಲೆ ದುಷ್ಕರ್ಮಿಗಳ ದಾಳಿ ಆಗಿದೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 7:08 am, Tue, 10 December 19