ಬಾಗಲಕೋಟೆ: ಗಿರಿಸಾಗರ ಗ್ರಾಮದಿಂದ ನಾಪತ್ತೆಯಾಗಿದ್ದ ಬಾಲಕಿ ಶವವಾಗಿ ಪತ್ತೆ
ಮಾರ್ಚ್ 15 ಬೆಳಿಗ್ಗೆ ಸುಮಾರು 10 ಗಂಟೆಯಿಂದ ನಾಪತ್ತೆಯಾಗಿದ್ದ ರೇಖಾ ಸಂಗಪ್ಪ ಯಂಕಂಚಿ(11) ಎಂಬ ಬಾಲಕಿ, ಎರಡು ದಿನಗಳ ಬಳಿಕ ಶವವಾಗಿ ಪತ್ತೆಯಾಗಿದ್ದಾಳೆ. ದುಷ್ಕರ್ಮಿಗಳು ಬಾಲಕಿಯನ್ನ ಕೊಲೆ ಮಾಡಿ, ಚೀಲದಲ್ಲಿ ಶವ ಹಾಕಿ ಬಾವಿಗೆ ಎಸೆದಿದ್ದಾರೆ.
ಬಾಗಲಕೋಟೆ: ಜಿಲ್ಲೆಯ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದ ರೇಖಾ ಸಂಗಪ್ಪ ಯಂಕಂಚಿ(11) ಎಂಬ ಬಾಲಕಿ ಮಾರ್ಚ್ 15 ಬೆಳಿಗ್ಗೆ ಸುಮಾರು 10 ಗಂಟೆಯಿಂದ ನಾಪತ್ತೆಯಾಗಿದ್ದಳು. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಬಾವಿಯಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ದುಷ್ಕರ್ಮಿಗಳು ರೇಖಾ ಸಂಗಪ್ಪ ಯಂಕಂಚಿ ಎಂಬ 11 ವರ್ಷದ ಬಾಲಕಿಯನ್ನ ಕೊಲೆ ಮಾಡಿ, ಚೀಲದಲ್ಲಿ ಶವ ಹಾಕಿ ಬಾವಿಗೆ ಎಸೆದಿದ್ದಾರೆ. ಸ್ಥಳಕ್ಕೆ ಬೀಳಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಲೆ ಆರೋಪಿಗಳ ಪತ್ತೆಗಾಗಿ ಬಲೆ ಬಿಸಿದ್ದಾರೆ.
ಮರಕ್ಕೆ ನೇಣು ಬಿಗಿದು ಕಾರ್ಮಿಕ ಆತ್ಮಹತ್ಯೆ
ದಕ್ಷಿಣ ಕನ್ನಡ: ಮರಕ್ಕೆ ನೇಣು ಬಿಗಿದು ಕಾರ್ಮಿಕ ದಿವಾಕರ ಗೌಡ (44) ಎಂಬಾತ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ತಾಲೂಕಿನ ರಾಯಿ ಗ್ರಾಮದ ಮುದ್ದಾಜೆ ಎಂಬಲ್ಲಿ ನಡೆದಿದೆ. ಅವಿವಾಹಿತರಾಗಿದ್ದ ಮೃತ ದಿವಾಕರ ಗೌಡ ಕೃಷಿ ಕಾರ್ಮಿಕನಾಗಿ ದುಡಿಯುತ್ತಿದ್ದರು. ಮನೆ ಸಮೀಪದ ಮರವೊಂದಕ್ಕೆ ಚೂಡಿದಾರ ಶಾಲು ಬಳಸಿ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಇನ್ನು ಈ ಕುರಿತು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿವಾಹಿತ ಮಹಿಳೆಮೇಲೆ ಅತ್ಯಾಚಾರ; ಆರೋಪಿ ಬಂಧನ
ಕೊಡಗು: ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ ಮಾಡಿದ ಆರೋಪಿ ಮಣಿಕಂಠ (38) ಎಂಬಾತನನ್ನ ಇದೀಗ ಪೊಲೀಸರು ಬಂಧಿಸಿದ್ದಾರೆ. ನಿನ್ನೆ(ಮಾ.16) ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಮಹಿಳೆ ಮೇಲೆ ಮಣಿಕಂಠ ಈ ಕೃತ್ಯ ಎಸಗಿದ್ದಾನೆ. ಅತ್ಯಾಚಾರ ಸಂದರ್ಭ ಮಹಿಳೆಯ ದೇಹಕ್ಕೆ ಕಚ್ಚಿ ಹಲ್ಲೆ ಮಾಡಿದ್ದು, ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಆರೋಪಿ ಮಣಿಕಂಠನನ್ನ ಪೊಲೀಸರು ಬಂಧಿಸಿದ್ದಾರೆ.
ವಿಷ್ಣು ಸ್ವರೂಪದ ಅದೃಷ್ಟದ ಕಲ್ಲು ಎಂದು ನಂಬಿಸಿ ಮಾರಾಟ ಯತ್ನ; ಇಬ್ಬರು ಅರೋಪಿಗಳು ಅರೆಸ್ಟ್
ಬೆಂಗಳೂರು: ಸಾಲಿಗ್ರಾಮದ ಕಲ್ಲನ್ನು ವಿಷ್ಣು ಸ್ವರೂಪದ ಅದೃಷ್ಟದ ಕಲ್ಲು ಎಂದು ನಂಬಿಸಿ ಮಾರಾಟ ಮಾಡಿ ಮೋಸ ಮಾಡಲು ಯತ್ನಿಸುತ್ತಿದ್ದ ಮನೋಜ್ ಮತ್ತು ಆದಿತ್ಯಾ ಸಾಗರ್ ಎಂಬಿಬ್ಬರನ್ನ ಇದೀಗ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರಾಜಾಜಿನಗರದ ಪ್ರತಿಷ್ಠಿತ ಹೋಟೆಲ್ನಲ್ಲಿ ಎರಡು ಕೋಟಿಗೆ ಎರಡು ಕಲ್ಲನ್ನು ಮಾರಾಟ ಮಾಡಲು ಹೊರಟಿದ್ದರು. ಈ ಕಲ್ಲು ಅದೃಷ್ಟದ ಕಲ್ಲುಗಳು ವಿಷ್ಟು ದೇವರ ಸ್ವರೂಪ, ಇದನ್ನು ಗುಜರಾತಿನ ಗೋಮಾತಿ ನದಿಯಿಂದ ತಂದಿದ್ದೆವೆ. ಈ ಕಲ್ಲುಗಳು ಜೊತೆಗಿದ್ದರೆ ಏನು ಆಗುವುದಿಲ್ಲ ಎಂದು ನಂಬಿಸಿ ಮಾರಾಟ ಮಾಡಲು ಯತ್ನಿಸಿದ್ದರು. ಕಲ್ಲನ್ನು ಕೈನಲ್ಲಿ ಇಟ್ಟುಕೊಂಡು ಸೂಜಿ ಹಾಗು ಇತರ ಚೂಪಾದ ವಸ್ತುವಿನಿಂದ ಚುಚ್ಚಿಕೊಳ್ಳುವುದು ಮಾಡಿದ್ದರು. ಇಷ್ಟೆಲ್ಲ ಮಾಡಿದ್ರು ಏನು ಅಗುವುದಿಲ್ಲ ಎಂದು ನಂಬಿಸಿ ವಂಚಿಸಲು ಪ್ಲಾನ್ ಮಾಡಿದ್ದ ಅರೋಪಿಗಳು ಸಿಸಿಬಿ ಬಲೆಗೆ ಬಿದ್ದಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:57 pm, Fri, 17 March 23