ಬೆಂಗಳೂರು: ಬೆಂಗಳೂರಿನಲ್ಲಿ ಮಂಡ್ಯ ಮೂಲದ ಯುವಕನ ಮತಾಂತರ ಹಾಗು ಕತ್ನಾ ಮಾಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬನಶಂಕರಿ ಪೊಲೀಸರು ಮತ್ತಿಬ್ಬರನ್ನು ಬಂಧಿಸಿದ್ದಾರೆ.
ನಿನ್ನೆ ರಾತ್ರಿ(ಅ.12) ನಯಾಜ್ ಪಾಷಾ, ಹಾಜಿ ಸಾಬ್ ಬಂಧಿಸಲಾಗಿತ್ತು ಇಂದು (ಅಕ್ಟೋಬರ್. 13) ತಮಿಳುನಾಡಿನಲ್ಲಿ ಮಾಜಿ ಕಾರ್ಪೊರೇಟರ್ ಅನ್ಸರ್ ಪಾಷಾನನ್ನು ಬಂಧಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬನಶಂಕರಿ ಪೊಲೀಸರು ಈ ಹಿಂದೆ ಅತಾವುರ್ ರೆಹಮಾನ್, ಶೊಯೇಬ್ನನ್ನ ಬಂಧಿಸಿದ್ದರು. ಈ ಮೂಲಕ ಇದುವರೆಗೆ ಐವರ ಬಂಧನವಾದಂತಾಗಿದೆ.
ಬೆಂಗಳೂರಲ್ಲಿ ಮಂಡ್ಯ ಮೂಲದ ಯುವಕನ ಶ್ರೀಧರ್ @ಸಲ್ಮಾನ್ ಎಂಬಾತನನ್ನ ಮತಾಂತರ ಹಾಗೂ ಕತ್ನಾ ಮಾಡಲಾಗಿತ್ತು. ಈ ಬಗ್ಗೆ ಹುಬ್ಬಳ್ಳಿ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣ ಬನಶಂಕರಿ ಠಾಣೆಗೆ ವರ್ಗಾವಣೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲಿಗೆ ಅತಾವುರ್ ರೆಹಮಾನ್@ಲಿಂಗರಾಜು ಹಾಗು ಶೊಯೇಬ್ ಎಂಬುವವರನ್ನ ಬಂಧಿಸಲಾಗಿತ್ತು.
ಏನಿದು ಪ್ರಕರಣ?
ಶ್ರೀಧರ್ ತನಗೆ ಹಣಕಾಸಿನ ತೊಂದರೆ ಎದುರಾಗಿದೆ ಎಂಬ ಬಗ್ಗೆ ಎ ಒನ್ ಆರೋಪಿ ಅತ್ತಾವರ ರೆಹಮಾನ್ ಬಳಿ ಹೇಳಿಕೊಂಡಿದ್ದ. ನಂತರ ಆತ ಶ್ರೀಧರ್ ಎಸ್ಸಿ ಎಸ್ಟಿ ಎಂದು ತಿಳಿದು ಎ2 ಆರೋಪಿ ಅಜಿಸಾಬ್ ಎಂಬಾತನನ್ನ ಬನಶಂಕರಿಯ ಮಸೀದಿಗೆ ಕರೆದುಕೊಂಡು ಹೋಗಿ ಪರಿಚಯಿಸಿದ್ದ. ಈ ವೇಳೆ ಅಜಿಸಾಬ್ ಹಿಂದೂ ದೇವರ ಬಗ್ಗೆ ಅವಹೇಳಕಾರಿಯಾಗಿ ಮಾತನಾಡಿ ಇವರನ್ನೆಲ್ಲಾ ದೇವರಾ? ಎಂದು ದೇವರನ್ನು ನಿಂದಿಸಿದ್ದನಂತೆ. ನಂತರ ಇಸ್ಲಾಂ ಧರ್ಮದ ಬಗ್ಗೆ ಭೋದನೆ ಮಾಡಿ ಆ ಧರ್ಮದ ಬಗ್ಗೆ ನಂಬಿಕೆ ಬರುವಂತೆ ಮಾಡಿದ್ದನಂತೆ. ಬಳಿಕ ಅವನ ಮೊಬೈಲನ್ನ ಪಡೆದು ಒಂದು ವಾರಗಳ ಕಾಲ ಅಕ್ರಮ ಬಂಧನದಲ್ಲಿಟ್ಟಿದ್ದರಂತೆ. ಇದೆಲ್ಲ ಆದ ಮೇಲೆ ಬಲವಂತವಾಗಿ ಕತ್ನಾ ಮಾಡಿಸಿದ್ದಾರೆ ಎಂದು ಶ್ರೀಧರ್ ಆರೋಪಿಸಿದ್ದಾರೆ. ಸದ್ಯ ಈ ಸಂಬಂಧ ಹುಬ್ಬಳ್ಳಿಯಲ್ಲಿ ದಾಖಲಾಗಿದ್ದ ದೂರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ. ಸದ್ಯ ಬನಶಂಕರಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ