ಬೆಂಗಳೂರು: ಆನ್‌ಲೈನ್ ಪೇಮೆಂಟ್ (Online Payment) ಆ್ಯಪ್‌ನಲ್ಲಿ ನಿಮಗೆ ಕ್ಯಾಶ್ ಬ್ಯಾಕ್ (Cash Back) ಬರುತ್ತದೆ ಎಂದು ಹೇಳಿ ವ್ಯಕ್ತಿಯೊಬ್ಬರ ಅಕೌಂಟ್ನಿಂದ (Account) ಖದೀಮರು ಸಾವಿರಾರು ರೂಪಾಯಿ ದೋಚಿದ್ದಾರೆ. ನಗರದ ದಯಾನಂದ ಲೇಔಟ್‌ನ ರಾಮಮೂರ್ತಿನಗರದ ಬಿರಿಯಾನಿ ಹೋಟೆಲ್ ಮಾಲೀಕ ಪ್ಯಾರುಲ್ ಷಾ ವಂಚನೆಗೆ ಒಳಗಾದ ವ್ಯಕ್ತಿ. ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಪ್ಯಾರುಲ್ ಷಾ ತಮ್ಮ ಹೊಟೇಲ್ ಕೆಲಸದಲ್ಲಿ ಬ್ಯೂಸಿಯಾಗಿದ್ದರು. ಈ ವೇಳೆ ಹೋಟೆಲ್ಗೆ ಬಂದ ಇಬ್ಬರು ಅಪರಿಚಿತರು ತಾವು ಬ್ಯಾಂಕ್ ಎಕ್ಸಿಕ್ಯೂಟಿವ್ ಸಿಬ್ಬಂದಿ ಎಂದು ಪರಿಚಯಿಸಿಕೊಂಡಿದ್ದಾರೆ.
ನಂತರ ಪ್ಯಾರುಲ್ ಷಾ ಅವರಿಗೆ ನೀವು ಈ ಆ್ಯಪ್ ಮೂಲಕ ಆನ್‌ಲೈನ್ ಪೇಮೆಂಟ್ ಮಾಡಿದರೇ ಪ್ರತಿದಿನ 300 ರೂ. ಕ್ಯಾಶ್‌ಬ್ಯಾಕ್ ಬರುತ್ತದೆ ಎಂದು ಹೇಳಿದ್ದಾರೆ. ಇದರಿಂದ ಉತ್ಸುಕರಾದ ಪ್ಯಾರುಲ್ ಷಾ ಅವರು ಅಪರಿಚಿತ ವ್ಯಕ್ತಿಗೆ ತಮ್ಮ ಮೊಬೈಲ್ ನೀಡಿದ್ದಾರೆ. ನಂತರ ಬ್ಯಾಂಕ್ ಖಾತೆಯ ವಿವರಗಳನ್ನೂ ಸಹ ಅವರಿಗೆ ಹೇಳಿದ್ದಾರೆ ನಂತರ ಈ ಇಬ್ಬರು ಕೆಲ ಕಾಲ ಮೊಬೈಲ್ ಬಳಸಿ ಆ್ಯಪ್ ಇನ್ಸ್ಟಾಲ್ ಆಗಿದೆ ಎಂದು ಹೇಳಿ ಮೊಬೈಲ್ ಮರುಕಳಿಸಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಆನ್‌ಲೈನ್ ಲೂಡೋಗೇಮ್ ಆಡಿ 4.6 ಲಕ್ಷ ರೂ. ಕಳೆದುಕೊಂಡ ಮಹಿಳೆ; ಮಕ್ಕಳೊಂದಿಗೆ ಪರಾರಿ
ನಂತರ ಪಾರುಲ್ ಷಾ ಅವರು ತಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ತಮ್ಮ ಖಾತೆಯಿಂದ 52 ಸಾವಿರ ರೂ. ವರ್ಗಾವಣೆಗೊಂಡಿರುವುದು ತಿಳಿದಿದೆ. ಇದರಿಂದ ಗಾಬರಿಗೊಂಡ ಮಾಣಿಕ್ ಷಾ ಅವರು ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:47 am, Wed, 16 August 23