AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಆನ್​ಲೈನ್​ ​​​ಲೂಡೋಗೇಮ್​​​ ಆಡಿ​​ 4.6 ಲಕ್ಷ ರೂ. ಕಳೆದುಕೊಂಡ ಮಹಿಳೆ; ಮಕ್ಕಳೊಂದಿಗೆ ಪರಾರಿ

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್​​ನ 26 ವರ್ಷದ ಮಹಿಳೆಯೊಬ್ಬಳು ಆನ್​ಲೈನ್​ ಲೂಡೋ​​​ಗೇಮ್​​ ಆಡಿ 4.6 ಲಕ್ಷ ರೂ. ಕಳೆದುಕೊಂಡಿದ್ದಲ್ಲದೇ, ಇದರಿಂದ ಹತಾಶೆಗೆ ಒಳಗಾಗಿ ಎರಡು ಮಕ್ಕಳೊಂದಿಗೆ ಮನೆ ಬಿಟ್ಟು ಹೋಗಿದ್ದಾಳೆ.

ಬೆಂಗಳೂರು: ಆನ್​ಲೈನ್​ ​​​ಲೂಡೋಗೇಮ್​​​ ಆಡಿ​​ 4.6 ಲಕ್ಷ ರೂ. ಕಳೆದುಕೊಂಡ ಮಹಿಳೆ; ಮಕ್ಕಳೊಂದಿಗೆ ಪರಾರಿ
ಸಾಂದರ್ಭಿಕ ಚಿತ್ರ
Follow us
ವಿವೇಕ ಬಿರಾದಾರ
|

Updated on:Aug 14, 2023 | 8:04 AM

ಬೆಂಗಳೂರು: ಈಚಿನ ದಿನಗಳಲ್ಲಿ ಆನ್​​ಲೈನ್​ ಗೇಮಿಂಗ್​ (Online Gaming) ಕ್ರೇಜ್​ ಹೆಚ್ಚಾಗಿದೆ. ಈ ಆನ್​​ಲೈನ್​ ಗೇಮಿಂಗ್​​ನ ಹುಚ್ಚು ಹಿಡಿಸಿಕೊಂಡು ಅದೇಷ್ಟೋ ಜನರು ಹಣ ಕಳೆದುಕೊಂಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಚೀನಾದ 13 ವರ್ಷದ ಬಾಲಕಿಯೊಬ್ಬಳು ಆನ್​​ಲೈನ್​ ಗೇಮ್​ ಆಡಿ ಪೋಷಕರ 52 ಲಕ್ಷ ರೂ. ಹಣ ಕಳೆದಿದ್ದಳು. ಅದರಂತೆ ಇದೀಗ ಬೆಂಗಳೂರಿನ (Bengaluru) ಮಹಾಲಕ್ಷ್ಮಿ ಲೇಔಟ್​​ನ 26 ವರ್ಷದ ಮಹಿಳೆಯೊಬ್ಬಳು ಆನ್​ಲೈನ್​ ಲೂಡೋ​​​ಗೇಮ್ (Ludo Game)​​ ಆಡಿ 4.6 ಲಕ್ಷ ರೂ. ಕಳೆದುಕೊಂಡಿದ್ದಲ್ಲದೇ, ಇದರಿಂದ ಹತಾಶೆಗೆ ಒಳಗಾಗಿ ಎರಡು ಮಕ್ಕಳೊಂದಿಗೆ ಮನೆ ಬಿಟ್ಟು ಹೋಗಿದ್ದಾಳೆ. ಪತ್ನಿ ಹಾಗೂ ಒಂದು ಮತ್ತು ಏಳು ವರ್ಷದ ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಪತಿ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಮೂವರಿಗಾಗಿ ಶೋಧಕಾರ್ಯ ನಡೆಸಿದ್ದಾರೆ.

ಮಹಿಳೆ ಕಳೆದ ವರ್ಷದಿಂದ ಆನ್​ಲೈನ್​ ಲೂಡೋ ಆಡಲು ಶುರುಮಾಡಿದ್ದಾಳೆ. ದಿನಗಳು ಕಳೆದಂತೆ ಮಹಿಳೆಗೆ ಇದು ಚಟವಾಗಿ ಪರಿಣಮಿಸಿತು. ಇದರಿಂದ ಮಹಿಳೆ ಸಾಕಷ್ಟು ಹಣ ಕಳೆದುಕೊಂಡಳು. ಆದರು ಆಡುವುದನ್ನು ಬಿಡದೆ, ತನ್ನ ಚಿನ್ನಾಭರಣಗಳನ್ನು ಗಿರವಿ ಇಟ್ಟು 50,000 ರೂ. ಪಡೆದು ಆನ್​​ಲೈನ್​ ಲೂಡೋ ಆಡಿದಳು. ಅಲ್ಲದೇ ಆನ್‌ಲೈನ್ ಲುಡೋ ಗೇಮ್‌ಗಳನ್ನು ಆಡಲು ಸಂಬಂಧಿಕರಿಂದ 1.7 ಲಕ್ಷ ರೂಪಾಯಿ ಸಾಲ ಪಡೆದಿದ್ದಾಳೆ. ಇಷ್ಟಕ್ಕೆ ಸುಮ್ಮನಾಗದ ಮಹಿಳೆ ಮತ್ತೆ ಬೇರೆಡೆಯಿಂದ ಬರೊಬ್ಬರಿ 3.4 ಲಕ್ಷ ರೂ. ಸಾಲ ಮಾಡಿ ತನ್ನ ಆಟವನ್ನು ಮುಂದುವರೆಸಿ ಕೈ ಸುಟ್ಟುಕೊಂಡಿದ್ದಾಳೆ.

ಇದನ್ನೂ ಓದಿ: Crime News: ಆನ್​ಲೈನ್​ ಗೇಮ್​ನಲ್ಲಿ 40,000 ರೂ. ಕಳೆದುಕೊಂಡ 13 ವರ್ಷದ ಬಾಲಕ; ಅಮ್ಮ ಬೈದಿದ್ದಕ್ಕೆ ಬೇಸರಗೊಂಡು ಆತ್ಮಹತ್ಯೆ

ಇದನ್ನು ತಿಳಿದು ಗಾಬರಿಗೊಂಡ ಗಾಬರಿಗೊಂಡ ಪತಿ ಆನ್​ಲೈನ್​ ಗೇಮಿಂಗ್ ಆಡುವುದನ್ನು ನಿಲ್ಲಿಸುವಂತೆ ಹೇಳಿದ್ದಾನೆ. ಆದರೂ ಬಿಡದೆ ತನ್ನ ಆಟವನ್ನು ಮುಂದುವರೆಸಿದ್ದು, ಇದಕ್ಕಾಗಿ ಆಗಸ್ಟ್ ತಿಂಗಳಲ್ಲಿ ಮತ್ತೆ ತನ್ನ ಚಿನ್ನಾಭರಣಗಳನ್ನು ಗಿರವಿ ಇಟ್ಟು 1.2 ಲಕ್ಷ ರೂ. ಹಣ ಪಣಕ್ಕಿಟ್ಟು ಆಡಿ ಸೋತಿದ್ದಾಳೆ. ಈ ಮೂಲಕ ಮಹಿಳೆ ಬರೊಬ್ಬರಿ ಟ್ಟು 4.6 ಲಕ್ಷ ರೂ. ಹಣ ಕಳೆದುಕೊಂಡಿದ್ದಾಳೆ.

ಈ ವಿಚಾರ ಅರಿತ ಮಹಿಳೆಯ ಪತಿ ಆಕೆಯ ತವರು ಮನೆಯವರಿಗೆ ವಿಷಯ ತಿಳಿಸಿದ್ದಾನೆ. ಇಷ್ಟೊಂದು ಹಣ ಕಳೆದುಕೊಂಡ ನಂತರ ಮಹಿಳೆ ಹತಾಶೆಯಿಂದ ಇಬ್ಬರು ಮಕ್ಕಳೊಂದಿಗೆ ಮನೆಬಿಟ್ಟು ಹೋಗಿದ್ದಾಳೆ. ಹೀಗೆ ಹೋಗುವಾಗ “ನಾನು ದೊಡ್ಡ ತಪ್ಪನ್ನು ಮಾಡಿದ್ದೇನೆ ಮತ್ತು ಅಪಾರ ನಷ್ಟವನ್ನು ಅನುಭವಿಸಿದ್ದೇನೆ, ದಯವಿಟ್ಟು ನನ್ನನ್ನು ಕ್ಷಮಿಸಿ” ಎಂದು ಪ್ರತ್ರ ಬರೆದಿಟ್ಟು ಹೋಗಿದ್ದಾಳೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:55 am, Mon, 14 August 23