ರಾಮನಗರ: ಪೊಲೀಸ್ ಪಬ್ಲಿಕ್ ಐ ಅಪ್ಲಿಕೇಶನ್ ಜಾರಿಗೆ ತಂದಾಗ ಜನ ಅದರಲ್ಲೂ ವಾಹನ ಸವಾರರು ಅದರ ಬಗ್ಗೆ ತುಸು ಜಾಗ್ರತೆ ವಹಿಸಿದರು. ಆದರೆ ಈಗ ಆ ಪೊಲೀಸ್ ಪಬ್ಲಿಕ್ ಐ ಗೆ ದೃಷ್ಟಿ ತಾಕಿದೆ. ಖುದ್ದು ಆ ಅಪ್ಲಿಕೇಶನ್ ದುರುಪಯೋಗವಾಗ್ತಿದೆ. ಹಾಗಾಗಿ ಜನ ಈಗ ಅದರ ಬಗ್ಗೆ ಎಚ್ಚರವಹಿಸುತ್ತಿದ್ದಾರೆ. ಅದೇನು ಮಾಡುತ್ತಿದೆ ಎಂದು ಅದರ ಮೇಲೆಯೇ ಒಂದು ಕಣ್ ಇಡುವಂತೆ ಆಗಿದೆ. ಅಂದಹಾಗೆ, ಟ್ರಾಫಿಕ್ ವಯಲೇಷನ್ (Traffic Violation) ತಪ್ಪಿಸಲು ಸಾರ್ವಜನಿಕರೇ ದಂಡ ಹಾಕುವ ಅಸ್ತ್ರವೇ ಪಬ್ಲಿಕ್ ಐ ಆ್ಯಪ್ (Bangalore Police Public Eye app). ಊರಿನವರ ದ್ವೇಷ ಭುಗಿಲೆದ್ದಿದ್ದು ಜನೋಪಯೋಗಿ ಪೊಲೀಸ್ ಪಬ್ಲಿಕ್ ಐ ಸಾಧನದಿಂದ ಸಿಕ್ಕ ಸಿಕ್ಕವರ ಮೇಲೆ ದಂಡ ಪ್ರಯೋಗ ಆಗುತ್ತಿದೆ. ಊರಿಗೆ ನೀರು ಬಿಡುವವನಿಗೆ 45 ಸಾವಿರ ಬಿಲ್ ಹಾಕಲಾಗಿದೆ. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ (Kanakapura Police) ಕೆರಳಾಳು ಸಂದ್ರದಲ್ಲಿ ಈ ಘಟನೆ ನಡೆದಿದೆ. ಲೋಕೇಶ್ ಎಂಬುವವನಿಂದ 5 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಗ್ರಾಮಸ್ಥರು ಹೆಲ್ಮೆಟ್ ಇಲ್ಲದೇ ತಿರುಗಾಡುವ ದೃಶ್ಯ ಸೆರೆ ಹಿಡಿದು ಅದನ್ನು ಪೊಲೀಸ್ ಪಬ್ಲಿಕ್ ಐ ಅಪ್ಲಿಕೇಶನ್ ಗೆ ಅಪ್ಲೋಡ್ ಮಾಡುವುದು. ಕೇವಲ ನಾಲ್ಕೇ ತಿಂಗಳಲ್ಲಿ ಬರೊಬ್ಬರಿ ಐದು ಲಕ್ಷ ರೂಪಾಯಿಯಷ್ಟು ದಂಡ ಹಾಕಿದ್ದಾನೆ ಭೂಪ ಲೋಕೇಶ್.
ವಾಹನದ ಮೇಲೆ ಕುಳಿತು ಮೊಬೈಲ್ ಮಾತನಾಡಿದ್ದಕ್ಕೂ ದಂಡ ಹಾಕಲಾಗಿದೆ. ಶಾಲಾ ಮಕ್ಕಳು ತಂದೆಯೊಂದಿಗೆ ವಾಹನದಲ್ಲಿ ಎಲ್ಲ ಎಚ್ಚರಿಕೆ ವಹಿಸಿ ಶಾಲೆಗೆ ಹೋಗುತ್ತಿದ್ದರೂ ದಂಡ ಪ್ರಯೋಗ ಮಾಡಲಾಗಿದೆ.
ಇನ್ನು ಗ್ರಾಮಸ್ಥರು ತಮ್ಮ ಹೆಸರಿಗೆ ಬಿಲ್ ಬಂದಾಗ ಶಾಕ್ ಆಗಿದ್ದಾರೆ. ತಾವು ಯಾವತ್ತೂ ಸಿಟಿಗೆ ಹೋಗೇ ಇಲ್ಲ, ಟ್ರಾಫಿಕ್ ರೂಲ್ಸ್ ಮುರಿದೇ ಇಲ್ಲ ಅಂತ ಗ್ರಾಮಸ್ಥರು ಆಕ್ರೋಶಭರಿತರಾಗಿ ವಾದ ಮಂಡಿಸುತ್ತಿದ್ದಾರೆ. ಹೇಗೆ ದಂಡ ಬಿತ್ತು ಅಂತ ನೋಡಿದಾಗ ಲೊಕೇಶನ್ ಲೊಕೇಶನ ಕಡೆಗೆ ಸಾಗಿದೆ. ಅವನ ಕುತಂತ್ರ ಬೆಳಕಿಗೆ ಬಂದಿದೆ. ಮನೆ ಮುಂದೆ ಸಿಸಿಟಿವಿ ಹಾಕಿಸಿರುವ ಲೊಕೇಶ, ಮನೆ ಮುಂದಿನಿಂದ ತೆರಳವು ಗ್ರಾಮಸ್ಥರಿಗೆ ದಂಡ ನಿರಂತರವಾಗಿ ದಂಡ ಹಾಕುವುದದನ್ನೆ ಕಾಯಕವಾಗಿಸಿಕೊಂಡಿದ್ದಾನೆ.
ಬೈಕ್, ಕಾರು, ಆಟೋದಲ್ಲಿ ತೆರಳಿದರೂ ಟ್ರಾಫಿಕ್ ವಯಲೇಷನ್ ಅಂತ ಫೊಟೊ ಅಪ್ಲೋಡ್ ಮಾಡಿಬಿಡುತ್ತಿದ್ದಾನೆ ಈ ಆಸಾಮಿ. ವಾಹನವೇ 20 ಸಾವಿರ ರೂಪಾಯಿ ಬಾಳಲ್ಲ, ಅದಕ್ಕೂ 40 ಸಾವಿರ ದಂಡ ಅಂದ್ರೆ ಹೇಗೆ ಎಂದು ಜನ ತಮ್ಮ ತಲೆ ಮೇಲೆ ಕೈ ಹೊತ್ತು ಕುಳಿತುಬಿಟ್ಟಿದ್ದಾರೆ. ಕೊನೆಗೆ ಎಚ್ಚೆತ್ತು ಲೊಕೇಶನ ವಿರುದ್ದ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯ ಮಾಡುತ್ತಿದ್ದಾರೆ. ಇದೆ ವೇಳೆ ಪಬ್ಲಿಕ್ ಐ ಆ್ಯಪ್ ಅನ್ನೂ ಬಂದ್ ಮಾಡುವಂತೆ ತಾಕೀತು ಮಾಡಿದ್ದಾರೆ.
2017 ರಲ್ಲಿ ಬೆಂಗಳೂರು ನಗರಕ್ಕೆ ಜಾರಿಗೆ ಬಂದಿರುವ ಪಬ್ಲಿಕ್ ಐ ಆ್ಯಪ್, ಈವರೆಗೂ 18 ಲಕ್ಷಕ್ಕೂ ಅಧಿಕ ಪ್ರಕರಣಗಳು ಪಬ್ಲಿಕ್ ಐ ಮುಖಾಂತರ ದಾಖಲುಗೊಂಡಿವೆ. ಅದರಲ್ಲಿ 13 ಲಕ್ಷ 50 ಸಾವಿರದಷ್ಟು ಪ್ರಕರಣಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ.
ದಾಖಲಾದ ಒಟ್ಟು ಪ್ರಕರಣಗಳ ಪೈಕಿ ಶೇ 74 ದೂರು ದಾಖಲು ಮಾಆಡಿಕೊಳ್ಳಲಾಗಿದೆ. ಆದರೆ ವ್ಯಕ್ತಿಗತ ಕಾರಣಕ್ಕೆ ದಂಡ ಹಾಕಲಾಗುತ್ತಿರುವ ಬಗ್ಗೆ ಸಾಕಷ್ಟು ಆಕ್ಷೇಪಣೆಗಳು ಸಾರ್ವಜನಿಕರಿಂದ ಪಬ್ಲಿಕ್ ಐ ವಿರುದ್ಧ ಕೇಳಿಬಂದಿದೆ. ಈ ಬಗ್ಗೆ ಗ್ರಾಮಸ್ಥರಿಂದ ಮನವಿ ಸ್ವೀಕರಿಸಿರುವ ಕನಕಪುರ ಪೊಲೀಸರು, ಕೂಡಲೇ ಅದರ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತರ ಗಮನಕ್ಕೆ ತರೋದಾಗಿ ಭರವಸೆ ನೀಡಿದ್ದಾರೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ