ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ ಫಾಲೋವರ್ಸ್‌ಗಾಗಿ ಡೆಡ್ಲಿ ವ್ಹೀಲಿಂಗ್; ಬೆಚ್ಚಿ ಬೀಳುತ್ತಿರುವ ವಾಹನ ಸವಾರರು

ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಬೇಕು ಎನ್ನುವ ಹುಚ್ಚು ನೆತ್ತಿಗೆ ಏರಿದರೆ ಮನುಷ್ಯ ಏನು ಬೇಕಾದರೂ ಮಾಡಲು ಸಿದ್ಧನಿರುತ್ತಾರೆ ಎಂಬುದಕ್ಕೆ ಯುವಕರ ಈ ಡೆಡ್ಲಿ ವ್ಹೀಲಿಂಗ್ ಸಾಕ್ಷಿ. ಯುವಕರ ಈ ಹುಚ್ಚಾಟಕ್ಕೆ ವಾಹನ ಸವಾರರು ಬೆಚ್ಚಿಬಿದ್ದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ ಫಾಲೋವರ್ಸ್‌ಗಾಗಿ ಡೆಡ್ಲಿ ವ್ಹೀಲಿಂಗ್; ಬೆಚ್ಚಿ ಬೀಳುತ್ತಿರುವ ವಾಹನ ಸವಾರರು
ಡೆಡ್ಲಿ ವ್ಹೀಲಿಂಗ್
Follow us
TV9 Web
| Updated By: Rakesh Nayak Manchi

Updated on:Oct 25, 2022 | 9:22 AM

ನೆಲಮಂಗಳ: ರಾಷ್ಟ್ರೀಯ ಹೆದ್ದಾರಿಯಲ್ಲಿ ಪುಂಡರು ತಮ್ಮ ವಾಹನಗಳೊಂದಿಗೆ ದುಸ್ಸಾಹಸ ನಡೆಸಿ ಅಟ್ಟಹಾಸ ಮರೆಯುತ್ತಿದ್ದು, ಇತರೆ ವಾಹನ ಸವಾರರು ಬೆಚ್ಚಿಬಿದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಬೇಕು ಎನ್ನುವ ಹುಚ್ಚು ನೆತ್ತಿಗೆ ಏರಿದರೆ ಮನುಷ್ಯ ಏನು ಬೇಕಾದರೂ ಮಾಡಲು ಸಿದ್ಧನಿರುತ್ತಾರೆ ಎಂಬುದಕ್ಕೆ ಯುವಕರ ಈ ಡೆಡ್ಲಿ ವ್ಹೀಲಿಂಗ್ ಸಾಕ್ಷಿಯಾಗಿದೆ. ಎಗ್ಗಿಲ್ಲದೇ ಬೈಕ್​ಗಳಲ್ಲಿ ವ್ಹಿಲಿಂಗ್ ಮಾಡುತ್ತಾ ವಾಹನ ಸವಾರರಿಗೆ ತೊಂದರೆ ನೀಡಲಾಗುತ್ತಿದೆ. ಇಷ್ಟಿದ್ದರೂ ವ್ಹಿಲಿಂಗ್ ಮಾಡುವ ಯುವಕರ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಅಸಮಾಧಾನ ಹೊರಹಾಕುತ್ತಿರುವ ಸಾರ್ವಜನಿಕರು, ವ್ಹಿಲಿಂಗ್ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ.

ತಮ್ಮ ಜೀವವನ್ನು ಲೆಕ್ಕಿಸದೆ ಯುವಕರು ಹೆದ್ದಾರಿಯಲ್ಲಿ ವ್ಹೀಲಿಂಗ್ ಸಾಹಸ ಮಾಡುತ್ತಿದ್ದಾಗ ಇತರೆ ವಾಹನ ಸವಾರರು ಕೂಡ ಯಾವಾಗ ನಮಗೆ ಗುದ್ದಿ ಬಿಡುತ್ತಾರೋ ಎಂದು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗುತ್ತಿದ್ದಾರೆ. ಕೇವಲ ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ ಫಾಲೋವರ್ಸ್‌ ಜಾಸ್ತಿ ಮಾಡಿಕೊಳ್ಳಲು ಇವರೆಲ್ಲ ವ್ಹೀಲಿಂಗ್ ಮಾಡುವುದರಲ್ಲಿ ತೊಡಗಿದ್ದಾರೆ. ವ್ಹೀಲಿಂಗ್ ಮಾಡುವುದರಿಂದ ಹೆದ್ದಾರಿಯಲ್ಲಿ ಹೋಗುವ ಇತರೆ ವಾಹನ ಸವಾರರಿಗೂ ಜೀವ ಭಯ ಕಾಡುತ್ತಿದೆ. ಹೆಚ್ಚು ಕಡಿಮೆಯಾಗಿ ಅವರೇನಾದರೂ ತಮಗೆ ಡಿಕ್ಕಿ ಹೊಡೆದು ಅವರೊಂದಿಗೆ ನಮ್ಮ ಜೀವವೂ ಬಲಿಯಾಗಬಹುದು ಎಂಬ ಭೀತಿ ವಾಹನ ಸವಾರರಲ್ಲಿ ಕಾಡುತ್ತಿದೆ.

ವಾರಾಂತ್ಯದಲ್ಲಂತೂ ವ್ಹೀಲಿಂಗ್ ಮಾಡುವವರಿಗೆ ನವಯುಗ ಟೋಲ್ ಕಾರಿಡಾರ್ ರಸ್ತೆ ಹೇಳಿ ಮಾಡಿಸಿದ ಹಾಗೆ ಇದೆ.‌ ಈ ರಸ್ತೆ ಮಾತ್ರವಲ್ಲ, ಹೆಸರಘಟ್ಟ ರಸ್ತೆ, ನೈಸ್ ರಸ್ತೆ ಸೇರಿದಂತೆ ಬೆಂಗಳೂರು ಹೊರಹೊಲಯದಲ್ಲಿ ಇರುವ ಸರ್ವಿಸ್ ರಸ್ತೆಗಳಲ್ಲಿಯೂ ಅತೀ ಹೆಚ್ಚು ವ್ಹೀಲಿಂಗ್, ಭಯಾನಕ ವ್ಹೀಲಿಂಗ್‌ಗೆ ನಡೆಯುತ್ತಿದೆ. ಈ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸರು ಕ್ರಮಕ್ಕೆ ಮುಂದಾಗಬೇಕು ಅಂತ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ವರದಿ: ವಿನಾಯಕ್ ಗುರವ್, ಟಿವಿ9 ನೆಲಮಂಗಲ

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:22 am, Tue, 25 October 22