ಕೆನಡಾ: ಕಳುವು ಮಾಡಲು ಬಂದ ನರರಾಕ್ಷಸ ಪಾಪಿಗಳು ತಮ್ಮ ತಾಯಿ ವಯಸ್ಸಿನ ಮಹಿಳೆ ಮೇಲೆ ಅತ್ಯಾಚಾರ ನಡೆಸಿ ಭೀಭತ್ಸವಾಗಿ ಕೊಂದುಬಿಟ್ಟರು!
ಆ ಇಬ್ಬರು ಕೊಲೆಗಡುಕರಿಗೆ ಪ್ರಥಮ-ಡಿಗ್ರಿ ಹತ್ಯೆ ಮತ್ತು ಲೈಂಗಿಕ ಅತ್ಯಾಚಾರ ನಡೆಸಿದ ಅಪರಾಧದಲ್ಲಿ ಕೋರ್ಟ್ ಕಳೆದ ತಿಂಗಳು ಶಿಕ್ಷೆಗೆ ಗುರಿಪಡಿಸಿದ ನಂತರ ಮಾತಾಡಿದ ಜಾಜ್ಮಿನ್, ‘ನನ್ನಮ್ಮನ ಮುಖದಲ್ಲಿ ಬರೀ ರಕ್ತ ಮಾತ್ರ ಕಾಣುತ್ತಿದ್ದ ಮಟ್ಟಿಗೆ ಜಜ್ಜಲಾಗಿತ್ತು,’ ಎಂದು ಹೇಳಿದಳು.

ತನ್ನಮ್ಮನನ್ನು ಯಾರೋ ಅಮಾನುಷವಾಗಿ ಕೊಲ್ಲುತ್ತಿದ್ದಾರೆ, ಅವಳು ಸಾಯುವ ಸ್ಥಿತಿಯಲ್ಲಿದ್ದಾಳೆ ಅಂತ ಬೆಳಗಿನ ಜಾವ ತನ್ನಪ್ಪ ಜೆರಾಲ್ಡ್ ಅಕ್ವಿಂಟೀ (Gerald Acquintey) ಆರ್ತನಾಗಿ, ಅಸಹಾಯಕತೆಯಿಂದ ಕೂಗುತ್ತಾ ಪೊಲೀಸರಿಗೆ ಫೋನ್ ಮಾಡುತಿದ್ದುದನ್ನು ಕೇಳಿಸಿಕೊಂಡು ತಡಬಡಾಯಿಸಿ ಹಾಸಿಗೆಯಿಂದ ಎದ್ದ ಜಾಜ್ಮಿನ್ ಅಕ್ವಿಂಟೀ (Jazmine Acquintey) ಆಗ ಕೇವಲ 14-ವರ್ಷದ ಶಾಲಾಬಾಲಕಿ. ಅವಳಮ್ಮ ರೊಡೇರಿ ಎಸ್ಟ್ರಾಡಳನ್ನು (Rhoderie Estrada) ಪಾಶವೀ ರೀತಿಯಲ್ಲಿ ಕೊಲ್ಲುವ ಮೊದಲು ಆ ನರರಾಕ್ಷಸ ಹಂತಕರು ಆಕೆಯ ಮೃತದೇಹದ ಮೇಲೆ ಅತ್ಯಾಚಾರ ನಡೆಸಿದ್ದರು.
ಜಾಜ್ಮಿನ್ ಅಪ್ಪ ಅರಚುತ್ತಲೇ ಇದ್ದ, ‘ಅವಳ ಹಲ್ಲುಗಳು ಸೆಟೆಯುತ್ತಿವೆ,’ ‘ಸಾಕಷ್ಟು ರಕ್ತ ಹರಿದಿದೆ!’
‘ಅವಳ ರೇಪ್ ಮಾಡಲಾಗಿದೆ!’ ಎಂದು ಹೇಳಿದ ಅವನು ಅಂತಿಮವಾಗಿ ‘ಅವಳು ಸತ್ತುಬಿಟ್ಟಳು!’ ಅಂತ ಕ್ಷೀಣ ಧ್ವನಿಯಲ್ಲಿ ಹೇಳಿದ, ಎಂದು ಡೈಲಿ ಸ್ಟಾರ್ ವರದಿ ಮಾಡಿತ್ತು.
2018ರಲ್ಲಿ ಕೆನಾಡಾದ ಟೊರೊಂಟೊದಲ್ಲಿದ್ದ ತನ್ನ ಮನೆಯಲ್ಲಿ 41-ವರ್ಷ-ವಯಸ್ಸಿನ ನರ್ಸ್ ರೊಡೀರಿ ಮೂರು ಮಕ್ಕಳೊಂದಿಗೆ ಮಲಗಿದ್ದಾಗ ಯೊಸ್ಟಿನ್ ಮುರಿಲ್ಲೋ 22, ಮತ್ತು 23-ವರ್ಷ-ವಯಸ್ಸಿನ ಡೇವಿಡ್ ಬೀಕ್ ಅವಳ ಮನೆಯೊಳಗೆ ನುಗ್ಗಿದರು.
ಆ ದುಷ್ಟ ಯುವಕರ ಉದ್ದೇಶ ಕಳ್ಳತನ ಮಾಡುವುದಾಗಿತ್ತು ಅದರೆ ಕಳುವು ಮಾಡುವ ಭರದಲ್ಲಿ ರೊಡೀರಿಯನ್ನು ಕೊಂದೇ ಬಿಟ್ಟರು. ಮೊಳೆಗಳನ್ನು ಗೋಡೆಯಿಂದ ಕೀಳಲು ಉಪಯೋಗಿಸುವ ಕ್ರೋ ಬಾರ್ ಸಲಕರಣೆಯಿಂದ ಅವರು ಆಕೆಯ ಮುಖದ ಮೇಲೆ ಬಲವಾಗಿ 8 ಬಾರಿ ಹೊಡೆದರು. ಅವಳ ಮುಖದಲ್ಲಿದ್ದ ಮೂಳೆಗಳೆಲ್ಲ ಮುರಿದುಬಿಟ್ಟಿದ್ದವು.
ಅವತ್ತು ಮೇ 26. ಜೆರಾಲ್ಡ್ ತನ್ನ ನೈಟ್ ಡ್ಯೂಟಿ ಮುಗಿಸಿಕೊಂಡು ಬೆಳಗಿನ ಜಾವ ಮನೆಗೆ ಬಂದಿದ್ದ. ಅವನು ಮನೆ ಪ್ರವೇಶಿಸಿದಾಗ ಹೆಂಡತಿ ರೊಡೀರಿ ಮಂಚದಿಂದ ಕೆಳಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದಳು.
ಆ ಇಬ್ಬರು ಕೊಲೆಗಡುಕರಿಗೆ ಪ್ರಥಮ-ಡಿಗ್ರಿ ಹತ್ಯೆ ಮತ್ತು ಲೈಂಗಿಕ ಅತ್ಯಾಚಾರ ನಡೆಸಿದ ಅಪರಾಧದಲ್ಲಿ ಕೋರ್ಟ್ ಕಳೆದ ತಿಂಗಳು ಶಿಕ್ಷೆಗೆ ಗುರಿಪಡಿಸಿದ ನಂತರ ಮಾತಾಡಿದ ಜಾಜ್ಮಿನ್, ‘ನನ್ನಮ್ಮನ ಮುಖದಲ್ಲಿ ಬರೀ ರಕ್ತ ಮಾತ್ರ ಕಾಣುತ್ತಿದ್ದ ಮಟ್ಟಿಗೆ ಜಜ್ಜಲಾಗಿತ್ತು,’ ಎಂದು ಹೇಳಿದಳು. ಅವಳಿಗೆ ಈಗ 18 ರ ಪ್ರಾಯ.

ಜಾಜ್ಮಿನ್ ಅಕ್ವಿಂಟೀ ಈಗ
‘ಅವಳ ಹಲ್ಲುಗಳು ಉದುರಿ ಬಾಯಲ್ಲೇ ಸಿಕ್ಕಿಕೊಂಡಿದ್ದವು ಮತ್ತು ಬಾಯಿ ತೆರದೇ ಇತ್ತು’ ಎಂದು ಅವಳು ಹೇಳಿದಳು.
ಕೊಲೆ ನಡೆದ ದಿನದ ಬಗ್ಗೆ ಮಾತಾಡಿದ ಜಾಜ್ಮಿನ್, ’ನನ್ನಪ್ಪ ಜೋರಾಗಿ ಅರಚುತ್ತಿದ್ದರು ಮತ್ತು ಸ್ವಲ್ಪ ಹೊತ್ತಿನಲ್ಲೇ ಪೊಲೀಸರು ನಮ್ಮ ಮನೆಗೆ ಧಾವಿಸಿದರು,’ ಎಂದು ಹೇಳಿದಳು.
ಕಣ್ಣೀರು ಸುರಿಸುತ್ತ್ತಾ ಗದ್ಗದಿತವಾದ ಧ್ವನಿಯಲ್ಲಿ ಜೆರಾಲ್ಡ್ ಕೊರ್ಟಿನಲ್ಲಿದ್ದ ಕೊಲೆಗಡುಕರೆಡೆ ನೋಡುತ್ತಾ, ‘ಆಕೆ ನಮ್ಮ ಕುಟುಂಬದ ಜೀವವಾಗಿದ್ದಳು,’ ಅಂತ ಹೇಳಿದನೆಂದು ಟೊರೊಂಟೊ ಸನ್ ವರದಿ ಮಾಡಿದೆ.
‘ಅವಳಿಲ್ಲದ ನಮ್ಮ ಬದುಕಿಗೆ ಯಾವುದೇ ಗೊತ್ತು ಗುರಿಯಿಲ್ಲ, ನಾನು ತಾಯಿಯಲ್ಲ ಮತ್ತು ಯಾವತ್ತೂ ಅಗಲಾರೆ,’ ಎಂದು ಅವನು ಹೇಳಿದ.
‘ಅವಳ ಮುಖ ಗುರುತು ಹಿಡಿಯುವುದಕ್ಕೆ ನನಗೆ ಸಾಧ್ಯವಾಗಲೇ ಇಲ್ಲ. ರೋಡೀರಿ ಮುಖ ಸಂಪೂರ್ಣವಾಗಿ ರಕ್ತಸಿಕ್ತವಾಗಿತ್ತು ಮತ್ತು ಊದಿಕೊಂಡಿತ್ತು.’
‘ಇದನ್ನೆಲ್ಲ ಯಾಕೆ ಮಾಡಿದಿರಿ? ಕಳುವು ಮಾಡಲು ಬಂದವರು ಮನೆಯಲ್ಲಿ ಜನ ಇದ್ದಾರೆ ಅಂತ ಗೊತ್ತಾದ ಮೇಲೆ ವಾಪಸ್ಸು ಹೋಗಬೇಕಿತ್ತು,’ ಎಂದು ಜೆರಾಲ್ಡ್ ಕೋರ್ಟ್ನಲ್ಲಿ ಹೇಳಿದ.
ಯಾವುದೇ ಪರೋಲ್ ಇಲ್ಲದ 25-ವರ್ಷಗಳ ಜೈಲು ಶಿಕ್ಷೆಗೆ ಮುರಿಲ್ಲೋ ಮತ್ತು ಬೀಕ್ ನನ್ನು ನ್ಯಾಯಾಧೀಶ ಇಯಾನ್ ಮ್ಯಾಕ್ಡೊನಾಲ್ಡ್ ಗುರಿಪಡಿಸಿದ್ದಾರೆ.
ತನ್ನನ್ನು ಮಹಿಳೆಯರ ಜೈಲಿಗೆ ವರ್ಗಾಯಿಸಬೇಕೆಂದು ಮುರಿಲ್ಲೋ ಕೋರ್ಟ್ ಗೆ ಮನವಿ ಮಾಡಿರುವುದು ವಿವಾದ ಸೃಷ್ಟಿಸಿದೆ.
ಆದರೆ ಕೆಲವು ಸಾಮಾಜಿಕ ಹೋರಾಟದ ಗುಂಪುಗಳು ಅವನ ಮನವಿಯನ್ನು ಪುರಸ್ಕರಿಸಬೇಕು ಅಂತ ವಾದಿಸುತ್ತಿವೆ.