AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗದಿಂದ ರಾತ್ರಿ ವೇಳೆ ರೈಲಿನಲ್ಲಿ ಬರುತ್ತಿದ್ದ ಬೆಂಗಳೂರಿನ ಗೃಹಿಣಿ ಸಾವು, ಚಿನ್ನಾಭರಣಕ್ಕಾಗಿ ಕೊಲೆಯಾಗಿರುವ ಶಂಕೆ

ಮೃತಳ‌ ಕುಟುಂಬಸ್ಥರು ಅನ್ನಪೂರ್ಣ ಕೊಲೆಯಾಗಿರಬಹುದೆಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಆಕೆ ಗಟ್ಟಿಗಿತ್ತಿ ಆತ್ಮಹತ್ಯೆ ಮಾಡಿಕೊಳ್ಳುವ ಮಹಿಳೆಯೂ ಅಲ್ಲ. ಯಾವುದೇ ಅನಾರೋಗ್ಯ ಕೂಡ ಇರಲಿಲ್ಲ. ಹೀಗಾಗಿ ಯಾರೋ ದುಷ್ಕರ್ಮಿಗಳು ಅನ್ನಪೂರ್ಣರನ್ನ ಕೊಂದು ರೈಲಿನಿಂದ ತಳ್ಳಿದ್ದಾರೆ.

ಶಿವಮೊಗ್ಗದಿಂದ ರಾತ್ರಿ ವೇಳೆ ರೈಲಿನಲ್ಲಿ ಬರುತ್ತಿದ್ದ ಬೆಂಗಳೂರಿನ ಗೃಹಿಣಿ ಸಾವು, ಚಿನ್ನಾಭರಣಕ್ಕಾಗಿ ಕೊಲೆಯಾಗಿರುವ ಶಂಕೆ
ಶಿವಮೊಗ್ಗದಿಂದ ರಾತ್ರಿ ವೇಳೆ ರೈಲಿನಲ್ಲಿ ಬರುತ್ತಿದ್ದ ಬೆಂಗಳೂರಿನ ಗೃಹಿಣಿ ಹತ್ಯೆ
ಮಹೇಶ್ ಇ, ಭೂಮನಹಳ್ಳಿ
| Edited By: |

Updated on: Feb 01, 2024 | 5:35 PM

Share

ಆಕೆ ಮಂಗಳವಾರ ರಾತ್ರಿ ಶಿವಮೊಗ್ಗದಿಂದ ಮಹಿಳೆಯರಿಗಾಗಿ ಮೀಸಲಿದ್ದ ರೈಲ್ವೆ ಬೋಗಿಯಲ್ಲಿ ಬೆಂಗಳೂರಿನತ್ತ ಹೊರಟಿದ್ದಳು. ಮಹಿಳೆಯರಿಗೆ ಪ್ರತ್ಯೇಕ ಇರುವ ಬೋಗಿಯಲ್ಲಿ ಪ್ರಯಾಣ ಬೆಳೆಸಿದ್ದಳು. ಜೊತೆಗೆ ಸಹೋದರ ಕೂಡ ಬಂದಿದ್ದಾನೆ. ಆದರೆ ಆತ ಬೇರೆ ಬೋಗಿಯಲ್ಲಿದ್ದ. ಅದೇನಾಯ್ತೋ ಗೊತ್ತಿಲ್ಲ ಬೆಂಗಳೂರಿನಲ್ಲಿ ಇಳಿದಿಲ್ಲ. ಆದರೆ ಈ ಮಧ್ಯೆ ಮಾರ್ಗಮಧ್ಯೆ ಶವವಾಗಿ ಪತ್ತೆಯಾಗಿದ್ದಾಳೆ. ಯಾಕೆ, ಏನಿದು ಪ್ರಸಂಗ ಅಂತೀರಾ? ಈ ವರದಿ ನೋಡಿ.

ಫೋಟೊದಲ್ಲಿರುವ ಈ ಮಹಿಳೆಯ ಹೆಸರು ಅನ್ನಪೂರ್ಣ ಅಂತಾ, 50 ವರ್ಷದ ಮಹಿಳೆ. ಬೆಂಗಳೂರಿನ ಅರಣ್ಯ ಭವನದಲ್ಲಿ ಸ್ಟೆನೋ ಆಗಿ ಕೆಲಸ ಮಾಡುತ್ತಿದ್ದರು. ಇವರ ಕುಟುಂಬಸ್ಥರು ಕೂಡ ಒಳ್ಳೆಯ ಕರ್ತವ್ಯದಲ್ಲಿದ್ದಾರೆ. ಬೆಂಗಳೂರಿನಲ್ಲಿ ತನ್ನ ಮಗನ ಜೊತೆ ವಾಸವಿದ್ದ ಅನ್ನಪೂರ್ಣ ಕೆಲಸದ ನಿಮಿತ್ತ ಶಿವಮೊಗ್ಗಕ್ಕೆ ಹೋಗಿದ್ದರಂತೆ. ಶಿವಮೊಗ್ಗದಲ್ಲಿ ತಮ್ಮ ಸಹೋದರರ ಮನೆಗಳಿಗೆ ಭೇಟಿ ‌ನೀಡಿ ಕೆಲಸವೂ ಮುಗಿಸಿ ಮತ್ತೆ ಬೆಂಗಳೂರಿನತ್ತ ಮೊನ್ನೆ ರಾತ್ರಿ ವಾಪಸ್ ಆಗಿದ್ದಾಳೆ‌.

ತನ್ನ ಸಹೋದರ ಬ್ರಹ್ಮಾನಂದ ಜೊತೆ ಒಟ್ಟಾಗಿ ಬೆಂಗಳೂರಿಗೆ ರಾತ್ರಿ 12.15 ರ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದಾರೆ‌. ಅನ್ನಪೂರ್ಣ ಮಹಿಳೆಯರ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರೆ ಸಹೋದರ ಬೇರೆ ಬೋಗಿಯಲ್ಲಿ ಬಂದನಂತೆ. ಬೆಳಗಿನ ಜಾವ 5 ಗಂಟೆಗೆ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣಕ್ಕೆ ಬಂದಾಗ ಸಹೋದರ ಬ್ರಹ್ಮಾನಂದ ರಾನಡೆ ಅನ್ನಪೂರ್ಣಗೆ ಕಾಲ್ ಮಾಡಿದಾಗ ರಿಸಿವ್ ಮಾಡಿಲ್ಲವಂತೆ.

ಎಲ್ಲೋ ಕೆಲಸಕ್ಕೆ ತಡವಾಗುತ್ತೆ ಅಂತಾ ಬೇಗನೆ ಇಳಿದು ಹೋಗಿರಬಹುದು ಅಂತಾ ಸಹೋದರ ಸೀದಾ ಮತ್ತೊಬ್ಬ ಸಹೋದರಿ ಮನೆಗೆ ಹೋಗಿದ್ದಾ‌ನೆ. ಆದರೆ ಇತ್ತ ಎಷ್ಟೊತ್ತು ಕಳೆದರೂ ಮನೆಗೆ ಅನ್ನಪೂರ್ಣ ಬಾರದ ಇದ್ದಾಗ ಅನ್ನಪೂರ್ಣ ಪುತ್ರ ಸಂಬಂಧಿಕರಿಗೆ ಕರೆ ಮಾಡಿ ತಿಳಿಸಿದ್ದಾನೆ.

ಆಗ ಕೂಡಲೇ ಸಂಬಂಧಿಕರು ಯಶವಂತಪುರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಪೊಲೀಸರು ತುಮಕೂರಿನ ಹಿರೇಹಳ್ಳಿ ಬಳಿ ಒಂದು ಮಹಿಳೆ ಶವ ಸಿಕ್ಕಿದೆ ಅಂತಾ ಫೋಟೋ ತೋರಿಸಿದಾಗ ಅನ್ನಪೂರ್ಣ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಇನ್ನು ಮೃತಳ‌ ಕುಟುಂಬಸ್ಥರು ಅನ್ನಪೂರ್ಣ ಕೊಲೆಯಾಗಿರಬಹುದೆಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಆಕೆ ಗಟ್ಟಿಗಿತ್ತಿ ಆತ್ಮಹತ್ಯೆ ಮಾಡಿಕೊಳ್ಳುವ ಮಹಿಳೆಯೂ ಅಲ್ಲ. ಯಾವುದೇ ಅನಾರೋಗ್ಯ ಕೂಡ ಇರಲಿಲ್ಲ. ಹೀಗಾಗಿ ಯಾರೋ ದುಷ್ಕರ್ಮಿಗಳು ಅನ್ನಪೂರ್ಣರನ್ನ ಕೊಂದಿದ್ದಾರೆ. ರೈಲಿನಿಂದ ತಳ್ಳಿದ್ದಾರೆ.

ಅನ್ನಪೂರ್ಣಾಗೆ ಕುತ್ತಿಗೆ ಭಾಗ ಹಾಗೂ ತಲೆ ಭಾಗಕ್ಕೆ ಗಂಭೀರ ಗಾಯಗಳಾಗಿದೆ. ಅಲ್ಲದೇ ಫೋನ್ ಕೂಡ ಆನ್ ನಲ್ಲಿದ್ದು, ಸುಮಾರು 20 ಕಿಲೋ ಮೀಟರ್ ದೂರದಲ್ಲಿ ಎರಡು ಲಗೇಜ್ ಬ್ಯಾಗ್ ಗಳು ಸಿಕ್ಕಿವೆ. ಇನ್ನೆರಡು ಬ್ಯಾಗ್ ಗಳು ಪತ್ತೆಯಾಗಿಲ್ಲ. ಅಲ್ಲದೇ ಮೈ ಮೇಲೆ ಒಡವೆಗಳಿದ್ದವು. ಅವು ಕಾಣ್ತಿಲ್ಲ. ಹೀಗಾಗಿ ಯಾರೋ ಒಡವೆಗಳಿಗೆ ಕೊಲೆಗೈದಿರಬಹುದು ಅಂತಾ ಸಂಶಯ ವ್ಯಕ್ತಪಡಿಸಿದ್ದಾರೆ ಮೃತರ ಸಂಬಂಧಿ ಡಾ. ಶಿಶಿರಾ.

ಯಶವಂತಪುರ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ. ಮೇಲ್ನೋಟಕ್ಕೆ ಕೊಲೆ ಎಂದು ತಿಳಿದುಬಂದಿದ್ದು, ಪೊಲೀಸರ ತನಿಖೆ ಬಳಿಕ ಸತ್ಯ ತಿಳಿಯಲಿದೆ.