ಬೆಂಗಳೂರು, ಫೆಬ್ರವರಿ 17: ರೌಡಿಶೀಟರ್ (Rowdysheeter) ಮಿಲ್ಟ್ರಿ ಸತೀಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿಶೀಟರ್ ಸತೀಶ್ ಕೊಲೆಗೆ ಜೈಲಿನಿಂದಲೇ ಸುಪಾರಿ ನೀಡಲಾಗಿದೆ. ಲಕ್ಷ ಲಕ್ಷ ಹಣ ನೀಡುವುದಾಗಿ ಜೈಲಿನಿಂದಲೇ ರೌಡಿಶೀಟರ್ ಶಿವಕುಮಾರ್ ಬಬ್ಲಿ ಸುಪಾರಿ ನೀಡಿದ್ದ. ಶಿವಕುಮಾರ್ ಕೊಲೆ ಕೇಸ್ನ ಎ1 ಆರೋಪಿ ಕೂಡ. ಪರಪ್ಪನ ಅಗ್ರಹಾರದಿಂದಲೇ ಮೂರು ತಿಂಗಳಿಂದ ಸ್ಕೆಚ್ ಮಾಡಲಾಗಿದ್ದು, ಬಳಿಕ ಅದರಂತಯೇ ರೌಡಿಶೀಟರ್ ಸತೀಶ್‌ನನ್ನು ಜನವರಿ 30 ರಂದು ವಿವೇಕನಗರದಲ್ಲಿ ಹೆಂಡತಿ ಜೊತೆ ಮಲಗಿದ್ದಾಗಲೇ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಹತ್ಯೆಗೆ ಮೀಸೆ ಚಿಗುರದ ಬಿಸಿ ರಕ್ತದ ಹುಡುಗರನ್ನೇ ಶಿವಕುಮಾರ್ ರೆಡಿ ಮಾಡಿದ್ದ. ಆಡುಗೋಡಿ, ವಿಲ್ಸನ್ ಗಾರ್ಡಸ್ನ ಮೂವರು ಯುವಕರನ್ನು ಗುರುತಿಸಿದ್ದ. ಜೈಲಲ್ಲಿ ಇದ್ದುಕೊಂಡೇ ಶಾರ್ಪ್ ಇರುವ ಹುಡುಗರನ್ನು ಗುರುತಿಸಿ ಮೂರು ಲಕ್ಷ ರೂ. ಅಡ್ವಾನ್ಸ್ ನೀಡಿ, ಮೂರು ತಿಂಗಳು ತರಬೇತಿ ಮಾಡಿಸಿದ್ದ.
ಸೋಮಶೇಖರ್, ವಿಘ್ನೇಶ್ ಹಾಗೂ ಪ್ರವೀಣ್ ಎಂಬ ಹುಡುಗರಿಗೆ ಟ್ರೈನಿಂಗ್ ನೀಡಿದ್ದು, ಮೂವರು ಕೂಡ ಏರಿಯಾದಲ್ಲಿ ಹವಾ ಇಡೋಕೆ ಶುರು ಮಾಡಿದ್ದರು. ಏರಿಯಾದಲ್ಲಿ ಆಗೋ ಗಲಾಟೆಯಲ್ಲಿ ಮೂವರು ಇದ್ದೇ ಇರುತ್ತಿದ್ದರು. ಮೂವರ ಮೇಲೂ ಸುಮಾರು 7-8 ಗಲಾಟೆ ಕೇಸ್ಗಳು ದಾಖಲಾಗಿವೆ. ಹೀಗಾಗಿ ಒಬ್ಬೊಬ್ಬರಿಗೆ 10 ಲಕ್ಷದಂತೆ 30 ಲಕ್ಷಕ್ಕೆ ಸುಪಾರಿ ನೀಡಲಾಗಿತ್ತು. ಜೊತೆಗೆ ಜಾಮೀನಿಂದ ಹಿಡಿದು ಕುಟುಂಬದ ನಿರ್ವಹಣೆಗೂ ಹಣ ಸಹಾಯ ಮಾಡುತ್ತೇವೆ ಅಂದಿದ್ದರು. ಅದರಂತೆ ಮನೆಯಲ್ಲಿ ಮಲಗಿದ್ದಾಗ ಸತೀಶನನ್ನು ಮನಸೋಇಚ್ಛೆ ಕೊಚ್ಚಿ ಕೊಲೆ ಮಾಡಿದ್ದರು.
ಇದನ್ನೂ ಓದಿ: ಬೆಂಗಳೂರು: ರೌಡಿಶೀಟರ್ ಮಿಲ್ಟ್ರಿ ಸತೀಶ್ ಹತ್ಯೆ ಪ್ರಕರಣ; ನಾಲ್ವರು ಅರೆಸ್ಟ್
ಆರೋಪಿಗಳ ಹೇಳಿಕೆ ಹಿನ್ನಲೆ ಜೈಲಿನಲ್ಲಿದ್ದ ಶಿವಕುಮಾರ್ನ ಬಾಡಿವಾರೆಂಟ್ನ್ನು ಸಿಸಿಬಿ ವಶಕ್ಕೆ ಪಡೆದಿದೆ. ವಿಚಾರಣೆ ವೇಳೆ ಜೈಲಿನಿಂದಲೇ ಕರೆ ಮಾಡಿ ಸುಫಾರಿ ನೀಡಿದ್ದೇ ಎಂದು ಒಪ್ಪಿಕೊಂಡಿದ್ದಾನೆ. ಸಿಸಿಬಿ ವಾರೆಂಟ್ ತಗೊಂಡು ಜೈಲಿಗೆ ಹೋಗಿ ಬ್ಯಾಂಕ್ ಪರಿಶೀಲನೆ ಮಾಡಿದ್ದು, ಆದರೆ ಯಾವುದೇ ಮೊಬೈಲ್ ಪತ್ತೆಯಾಗಿಲ್ಲ. ಸದ್ಯ ಜೈಲಾಧಿಕಾರಿಗಳಿಗೆ ಸಿಸಿಬಿ ಪತ್ರ ಬರೆಯಲು ಮುಂದಾಗಿದೆ. ಹೇಗೆ ಜೈಲಿನಲ್ಲಿ ಮೊಬೈಲ್ ಬಂತು, ದಾಳಿ ವೇಳೆ ಮೊಬೈಲ್ ಪತ್ತೆಯಾಗಿಲ್ಲ. ಹೀಗಾಗಿ ಇದರ ಬಗ್ಗೆ ಮಾಹಿತಿ ನೀಡುವಂತೆ ಪತ್ರ ಬರೆಯಲು ಸಿಸಿಬಿ ಮುಂದಾಗಿದೆ.
ಇದನ್ನೂ ಓದಿ: ಕಲಬುರಗಿ: ಸಾಲ ಕೊಟ್ಟ ಹಣ ವಾಪಸ್ ಕೇಳಿದಕ್ಕೆ ಸ್ನೇಹಿತನ ಕೊಲೆ; ಮೂವರ ಬಂಧನ
ಸತೀಶ್ ಒಬ್ಬ ರೌಡಿ ಶೀಟರ್ ಆಗಿದ್ದು, ಆತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಸತೀಶ್‌ನನ್ನು ಕೊಲೆ ಮಾಡಿದ ಆರೋಪಿಗಳು ಇತರ ಅಪರಾಧಗಳಲ್ಲಿ ಭಾಗಿಯಾಗಿದ್ದರು ಎಂದು ಬೆಂಗಳೂರು ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತ ಶೇಖರ್ ಹೆಚ್ ತೆಕ್ಕನವರ್ ಈ ಹಿಂದೆ ಹೇಳಿದ್ದರು.
ಸತೀಶ್ ತನ್ನ ಮನೆಯಲ್ಲಿ ಕೊಲೆಯಾದ ನಂತರ ಪತ್ನಿ, ವಿವೇಕನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.