ಆನೇಕಲ್: ಬೆಂಗಳೂರಲ್ಲಿ ದಿನದಿಂದ ದಿನಕ್ಕೆ ಹನಿಟ್ರ್ಯಾಪ್ ಪ್ರಕರಣಗಳು ಹೆಚ್ಚುತ್ತಿವೆ. ಹನಿಟ್ರ್ಯಾಪ್ (Honeytrap) ಮುಖಾಂತರ ಯುವಕನನ್ನು ಸಲಿಗೆ ಮಾಡಿದ್ದ ಗ್ಯಾಂಗ್ ಅನ್ನು ಬನ್ನೇರುಘಟ್ಟ ಪೊಲೀಸರು (Bannerghatta Police) ಬಂಧಿಸಿದ್ದಾರೆ. ರುತಿಕ್ ಅಲಿಯಾಸ್ ವಿಷ್ಣು, ಮೊ.ಆಸಿಫ್, ಯಾಸೀನ್ ಪಾಷಾ, ಸಮೀರ್, ಶಾಹಿದ್ ಅಲಿ ಬಂಧಿತ ಆರೋಪಿಗಳು. ರುತಿಕ್ ಯುವತಿಯೋರ್ವಳನ್ನು ಪರಿಚಯ ಮಾಡಿಕೊಂಡಿದ್ದಾನೆ. ನಂತರ ಹೇಗೊ ಆಕೆಯ ಇನ್ಸಾಟ್ಗ್ರಾಂ ಐಡಿ, ಪಾಸ್ವರ್ಡ್ ಪಡೆದಿದ್ದಾನೆ.
ನಂತರ ಆಕೆಯ ಐಡಿ ಮುಖಾಂತರ ಶಶಾಂಕ್ ಎಂಬ ಯುವಕನಿಗೆ ಮೆಸೆಜ್ ಮಾಡಿದ್ದಾನೆ. ಹೀಗೆ ಮೆಸೆಜ್ ಮಾಡುತ್ತಾ ದಿನಗಳು ಉರಿಳಿವೆ. ಅದು 2023ರ ಜನವರಿ 12, ರುತಿಕ್ ಭೇಟಿಯಾಗು ಎಂದು ಶಶಾಂಕ್ಗೆ ಮೆಸೆಜ್ ಮಾಡಿದ್ದಾನೆ. ಮೀಟ್ ಆಗಲು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಹಕ್ಕಿಪಿಕ್ಕಿ ಬಂಡೆ ಬಳಿ ಬರುವಂತೆ ಹೇಳಿದ್ದಾನೆ.
ಇದನ್ನೂ ಓದಿ: ಹನಿಟ್ರ್ಯಾಪ್ ಜಾಲದಲ್ಲಿ ಸಿಲುಕಿದ ಉದ್ಯಮಿ, ದೂರು ದಾಖಲು
ಇದರಂತೆ ಶಶಾಂಕ್ ಭೇಟಿಯಾಗಲು ಜೆಪಿ ನಗರದಿಂದ ಬಂದಿದ್ದನು. ಈ ವೇಳೆ ರುತಿಕ್, ಶಶಾಂಕ್ನ್ನು ಭೇಟಿಯಾಗಲು ಯುವತಿಯನ್ನು ಕಳೆಸಿದ್ದಾನೆ. ಇಬ್ಬರೂ ಭೇಟಿಯಾಗುವ ಹೊತ್ತಲ್ಲಿ, ಹಿಂದೆಯೇ ಬಂದ ನಾಲ್ವಾರು ನೀವೇನು ಮಾಡುತ್ತಿದ್ದೀರಾ ಇಲ್ಲಿ ಅಂತ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ. ನಂತರ ಶಶಾಂಕ್ ಬಳಿ ಇದ್ದ ಚಿನ್ನದ ಸರ ಮತ್ತು ಐ ಫೋನ್ ಕಿತ್ತುಕೊಂಡು ಗ್ಯಾಂಗ್ ಪರಾರಿಯಾಗಿದ್ದಾರೆ. ದೂರು ದಾಖಲಿಸಿಕೊಂಡಿದ್ದ ಬನ್ನೇರುಘಟ್ಟ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಗಳಿಂದ ಚಿನ್ನದ ಸರ ಹಾಗೂ ಐ ಫೋನ್ ವಶ ಪಡಿಸಿಕೊಂಡಿದ್ದಾರೆ.
ಇಬ್ಬರು ಮಹಿಳೆಯರು ಸೇರಿ ನಾಲ್ವರು ಕುಖ್ಯಾತ ಹನಿಟ್ರ್ಯಾಪ್ ಗ್ಯಾಂಗ್ನ್ನು ಬೇಗೂರು ಪೊಲೀಸರು ಮಾರ್ಚ್ 9 ರಂದು ಬಂಧಿಸಿದ್ದರು. ಅನಿಲ್ ಕುಮಾರ್, ಶಿವಶಂಕರ್, ಗಿರೀಶ್, ರಾಮಮೂರ್ತಿ ಬಂಧಿತರು. ವೆಬ್ಸೈಟ್ ಮೂಲಕ ಯುವತಿಯರ ಅರೆನಗ್ನ ಫೋಟೋ ಕಳಿಸಿ ಗ್ರಾಹಕರನ್ನು ಬಲೆಗೆ ಬೀಳಿಸುತ್ತಿದ್ದರು. ಬಳಿಕ ಬೇಗೂರಿನ ಬಾಡಿಗೆ ಕೋಣೆಗೆ ಕರೆಸಿಕೊಳ್ಳುತ್ತಿದ್ದರು. ಅರೆನಗ್ನಗೊಳಿಸಿ ವಿಡಿಯೋ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ದೂರುದಾರ ವ್ಯಕ್ತಿಗೆ 10 ಲಕ್ಷ ಹಣಕ್ಕೆ ಗ್ಯಾಂಗ್ ಬೇಡಿಕೆಯಿಟ್ಟಿದ್ದು, 3 ಲಕ್ಷ ರೂ. ನೀಡಲು ಮುಂದಾಗಿದ್ದ ವ್ಯಕ್ತಿ ಟ್ರ್ಯಾಪ್ ಆಗಿದ್ದನು. ವ್ಯಕ್ತಿ ಓರ್ವನ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು. ಈ ಹಿನ್ನೆಲೆ ಬೇಗೂರು ಪೊಲೀಸ್ ಠಾಣೆಗೆ ಸಂತ್ರಸ್ತ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ