ದಾವಣಗೆರೆ: ಹಳೆ ದ್ವೇಷ; ಕೋಲಿನಿಂದ ಹೊಡೆದು ಯುವಕನ ಬರ್ಬರ ಕೊಲೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 08, 2023 | 11:40 AM

ಹಳೆ ದ್ವೇಷದ ಹಿನ್ನೆಲೆ ಕೋಲಿನಿಂದ ಹೊಡೆದು ಯುವಕನನ್ನ ಕೊಲೆ ಮಾಡಿದ ಘಟನೆ ದಾವಣಗೆರೆ ತಾಲೂಕಿನ ಮಲ್ಲಶೆಟ್ಟಿಹಳ್ಳಿಯ ಕ್ರಾಸ್ ಬಳಿ ನಡೆದಿದೆ. ದಾವಣಗೆರೆ ತಾಲೂಕಿನ ರಾಮನಗರ ನಿವಾಸಿ ನರಸಿಂಹ(26) ಕೊಲೆಯಾದ ವ್ಯಕ್ತಿ.

ದಾವಣಗೆರೆ: ಹಳೆ ದ್ವೇಷ; ಕೋಲಿನಿಂದ ಹೊಡೆದು ಯುವಕನ ಬರ್ಬರ ಕೊಲೆ
ಕೊಲೆಯಾದ ವ್ಯಕ್ತಿ, ಆರೋಪಿ
Follow us on

ದಾವಣಗೆರೆ, ಆ.8: ಹಳೆ ದ್ವೇಷದ ಹಿನ್ನೆಲೆ ಕೋಲಿನಿಂದ ಹೊಡೆದು ಯುವಕನನ್ನ ಕೊಲೆ(Murder) ಮಾಡಿದ ಘಟನೆ ದಾವಣಗೆರೆ(Davanagere) ತಾಲೂಕಿನ ಮಲ್ಲಶೆಟ್ಟಿಹಳ್ಳಿಯ ಕ್ರಾಸ್ ಬಳಿ ನಡೆದಿದೆ. ತಾಲೂಕಿನ ರಾಮನಗರ ನಿವಾಸಿ ನರಸಿಂಹ(26) ಕೊಲೆಯಾದ ವ್ಯಕ್ತಿ. ಇನ್ನು ನರಸಿಂಹ ಹಾಗೂ ಇದೇ ರಾಮನಗರದ ನಿವಾಸಿ ಆರೋಪಿ ಶಿವಯೋಗೀಶ್ ಮಧ್ಯೆ ಹಣಕಾಸು ವಿಚಾರವಾಗಿ ಜಗಳವಾಗಿತ್ತು. ಈ ಹಿಂದೆ ಆರೋಪಿ ಶಿವಯೋಗೀಶನ ಮೇಲೆ ಮೃತ ನರಸಿಂಹ ಮಚ್ಚಿನಿಂದ ದಾಳಿ ಮಾಡಿ ಜೈಲು ಸೇರಿದ್ದ. ಇದೀಗ ಜೈಲಿನಿಂದ ಬಿಡುಗಡೆಯಾದ ಕೆಲ ದಿನಗಳಲ್ಲಿಯೇ ನರಸಿಂಹನನ್ನ ಕೊಲೆ ಮಾಡಿದ್ದಾನೆ. ಈ ಕುರಿತು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೋಳಗಳ ಹಿಂಡು ದಾಳಿ 9 ಕುರಿ ಮರಿಗಳು ಸಾವು

ಧಾರವಾಡ: ಹೊಲದಲ್ಲಿ ತೋಳಗಳ ಹಿಂಡು ದಾಳಿ ಮಾಡಿದ್ದು, ಬರೊಬ್ಬರಿ 9 ಕುರಿ ಮರಿಗಳು ಸಾವನ್ನಪ್ಪಿದ್ದ ಘಟನೆ ಕುಂದಗೋಳ ತಾಲೂಕಿನ ಚಾಕಲಬ್ಬಿ ಗ್ರಾಮದಲ್ಲಿ ನಡೆದಿದೆ. ಎಲ್ಲಪ್ಪ ಭಾಗಣ್ಣವರ್ ಎಂಬುವರಿಗೆ ಸೇರಿದ ಕುರಿ ಮರಿಗಳು ಇದಾಗಿದ್ದು, ಇನ್ನು ವಿಷಯ ತಿಳಿದು ಗ್ರಾಮ ಲೆಕ್ಕಾಧಿಕಾರಿ, ಗ್ರಾ.ಪಂಚಾಯತಿ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸೂಕ್ತ ಪರಿಹಾರ ನೀಡುವಂತೆ ರೈತ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಗದಗ: ಕೌಟುಂಬಿಕ ಕಲಹದಲ್ಲಿ ಮಹಿಳೆ ಹತ್ಯೆ‌ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಕೊಲೆಗೆ ಕಾರಣವಾಯ್ತಾ ಒಂದು ಫೋನ್ ಕಾಲ್?

ಬೀದಿ ನಾಯಿ ದಾಳಿ; ಬಾಲಕಿಗೆ ಗಾಯ

ಮೈಸೂರು: ಜಿಲ್ಲೆಯ ಹುಣಸೂರು ನಗರದಲ್ಲಿ ಬಾಲಕಿ ಮೇಲೆ ಬೀದಿ ನಾಯಿ ದಾಳಿ ಮಾಡಿ ಬಾಲಕಿಯ ಕಿವಿಗೆ ಗಾಯ ಕಚ್ಚಿದೆ. ಕೂಡಲೇ ಬಾಲಕಿಯನ್ನ ಆಸ್ಪತ್ರೆಗೆ ಸೇರಿಸಿದ್ದು, ಬಾಲಕಿ ಚಿಕಿತ್ಸೆಗೆ ಮಾಜಿ ಶಾಸಕ ಹೆಚ್ ಪಿ ಮಂಜುನಾಥ್ ಅಭಿಮಾನಿಗಳು ನೆರವಾಗಿದ್ದಾರೆ. ಹೌದು, ಬಾಲಕಿಯ ಮನೆಗೆ ತೆರಳಿ 10 ಸಾವಿರ ಹಣ‌ ನೀಡಿದ್ದಾರೆ. ಇನ್ನು ಹುಣಸೂರು ನಗರದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ನಾಯಿಗಳ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ