ಬೆಂಗಳೂರು, ಸೆಪ್ಟೆಂಬರ್ 11: ಖಾಸಗಿ ಸಾರಿಗೆ ಒಕ್ಕೂಟ ಪ್ರತಿಭಟನೆ ವೇಳೆ ಹಲವೆಡೆ ಗಲಾಟೆಗಳು ನಡೆದಿದ್ದು, ಕೇಸ್ ದಾಖಲಾಗಿವೆ. ಬೇಕಂತಲೇ ರ‍್ಯಾಪಿಡೋ ಬೈಕ್ ಬುಕ್ ಮಾಡಿ, ಬಂದ ಸವಾರನ ಮೇಲೆ ಹಲ್ಲೆ (Assault) ಮಾಡಿದ್ದ ಮೂವರನ್ನು ಪೊಲೀಸರು ಬಂಧಿಸಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಪುನೀತ್, ಮಣಿ, ಶರಣ್ ಬಂಧಿತರು. ವಿಜಯ್ ಕುಮಾರ್ ಹಲ್ಲೆಗೊಳಗಾದ ರ‍್ಯಾಪಿಡೋ ಬೈಕ್ ಸವಾರ. ಪ್ರತಿಭಟನೆ ವೇಳೆ ಆರೋಪಿಗಳು ರ‍್ಯಾಪಿಡೋ ಬೈಕ್ ಬುಕ್ ಮಾಡಿದ್ದರು. ಬಳಿಕ ಬೈಕ್ ಸವಾರ ವಿಜಯ್ ಕುಮಾರ್ ಮುಖಕ್ಕೆ ಮೊಟ್ಟೆ ಹೊಡೆದು ಬೆದರಿಕೆ ಹಾಕಿದ್ದಾರೆ. ಹಾಗಾಗಿ ಬೆಂಗಳೂರಿನ ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತಿಭಟನೆಗೆ ಸಹಕಾರ ನೀಡದ ಚಾಲಕರ ಮೇಲೆ ಮೊಟ್ಟೆ ಎಸೆದು, ಹಲ್ಲೆ ನಡೆಸಿ ಆಕ್ರೋಶ ವ್ಯಕ್ತಪಸಿದ್ದು, ಮತ್ತೆ ಕೆಲವೆಡೆ ವಾಹನದ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಹಾಗಾಗಿ ನಗರ 8 ಕಾನೂನು ಮತ್ತು ಸುವ್ಯವಸ್ಥೆೆ ವಿಭಾಗ ವಿವಿಧ ಪೊಲೀಸರು ದೌರ್ಜನ್ಯ ಎಸಗಿದವರ ಮೇಲೆ ಪ್ರಕರಣ ದಾಖಲಾಗಿವೆ. ಹಲ್ಲೆ ಮಾಡಿದ 13 ಜನರ ಮೇಲೆ ಪ್ರಕರಣ ದಾಖಲಾಗಿದ್ದು, ಈ ಪೈಕಿ 12 ಮಂದಿಯನ್ನು ಬಂಧಿಸಲಾಗಿದೆ.
ಚಿಕ್ಕಜಾಲದಲ್ಲಿ ಇಂದು ನಸುಕಿನ 3 ಗಂಟೆ ಸುಮಾರಿಗೆ ಏರ್‌ಪೋರ್ಟ್ ಕಡೆಯಿಂದ ಬರುತ್ತಿದ್ದ ಎರಡು ಕ್ಯಾಬ್‌ಗಳನ್ನು ಅಡ್ಡಗಟ್ಟಿ, ಮೂವರು ಕಾರುಗಳ ಗಾಜು ಧ್ವಂಸ ಮಾಡಲಾಗಿದೆ. ಈ ಸಂಬಂಧ ಬೆಂಗಳೂರು ಆಟೋ ಚಾಲಕರ ಸಂಘ ಸದಸ್ಯರಾದ ವಿಜಯಕುಮಾರ್, ನಾಗರಾಜ್, ನಾರಾಯಣಗೌಡ ಎಂಬವರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು ಬಂದ್: ಪ್ರತಿಭಟನಾಕಾರರಿಂದ ರಾಪಿಡೊ ಚಾಲಕರ ಮೇಲೆ ಹಲ್ಲೆ, ರಸ್ತೆಗಿಳಿದ ವಾಹನಗಳ ಟೈಯರ್ ಪಂಚರ್
ಪ್ರತಿಭಟನೆ ಹಿನ್ನೆೆಲೆಯಲ್ಲಿ ನಗರದಲ್ಲಿ ಕೆಲವೆಡೆ ಸಂಚಾರ ದಟ್ಟಣೆ ಉಂಟಾಗಿತ್ತು. ಮೆಜೆಸ್ಟಿಕ್, ಮೇಖ್ರಿ ವೃತ್ತ, ಹೆಬ್ಬಾಳ, ಇಂದಿರಾನಗರ, ಸಂಗೋಳ್ಳಿ ರಾಯಣ್ಣ ಮೇಲು ಸೇತುವೆ ಸೇರಿ ಕೆಲ ಪ್ರಮುಖ ಪ್ರದೇಶಗಳಲ್ಲಿ ಪ್ರತಿಭಟನಾಕಾರರು ರಸ್ತೆೆಗಳಿದು ಹೋರಾಟ ನಡೆಸಿದ ಪರಿಣಾಮ ಸಂಚಾರ ದಟ್ಟಣೆ ಉಂಟಾಗಿತ್ತು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.