ಬೆಂಗಳೂರಿನಲ್ಲಿ ಶವಪತ್ತೆ ಪ್ರಕರಣ: ಸಿಡಿಆರ್​ ಪರಿಶೀಲಿಸಿದಾಗ ಸ್ಫೋಟಕ ಮಾಹಿತಿ ಬಹಿರಂಗ

| Updated By: Rakesh Nayak Manchi

Updated on: Nov 18, 2022 | 9:02 AM

ಬೆಂಗಳೂರಿನಲ್ಲಿ ಬಾಲಸುಬ್ರಮಣ್ಯನ್ ಶವ ಪತ್ತೆ ಪ್ರಕರಣ ಸಂಬಂಧ ಪುಟ್ಟೇನಹಳ್ಳಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದು, ಸಿಡಿಆರ್​ ಪರಿಶೀಲಿಸಿದಾಗ ಸ್ಫೋಟಕ ಮಾಹಿತಿ ತಿಳಿದುಬಂದಿದೆ.

ಬೆಂಗಳೂರಿನಲ್ಲಿ ಶವಪತ್ತೆ ಪ್ರಕರಣ: ಸಿಡಿಆರ್​ ಪರಿಶೀಲಿಸಿದಾಗ ಸ್ಫೋಟಕ ಮಾಹಿತಿ ಬಹಿರಂಗ
ಬೆಂಗಳೂರಿನಲ್ಲಿ ಶವಪತ್ತೆ ಪ್ರಕರಣ: ಸಿಡಿಆರ್​ ಪರಿಶೀಲಿಸಿದಾಗ ಮಹಿಳೆ ಜತೆ ನಿರಂತರ ಸಂಪರ್ಕದಲ್ಲಿರುವ ವಿಚಾರ ಬಹಿರಂಗ
Follow us on

ಬೆಂಗಳೂರು: ನಗರದಲ್ಲಿ ಬಾಲಸುಬ್ರಮಣ್ಯನ್(67) ಎಂಬವರ ಶವ ಪತ್ತೆ ಪ್ರಕರಣ ಸಂಬಂಧ ಪುಟ್ಟೇನಹಳ್ಳಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದು, ಸಿಡಿಆರ್​ ಪರಿಶೀಲಿಸಿದಾಗ ಸ್ಫೋಟಕ ಮಾಹಿತಿ ತಿಳಿದುಬಂದಿದೆ. ಮೃತ ಬಾಲಸುಬ್ರಮಣ್ಯನ್ ದೂರವಾಣಿ ಕರೆಗಳನ್ನು ಪರಿಶೀಲಿಸಿದಾಗ ಮಹಿಳೆಯೊಬ್ಬಳ ಜೊತೆ ನಿರಂತರ ಸಂಪರ್ಕದಲ್ಲಿರುವ ವಿಚಾರ ತಿಳಿದುಬಂದಿದ್ದು, ಕನಕಪುರ ರಸ್ತೆಯ ಸಾರಕ್ಕಿ ಸಿಗ್ನಲ್​ ಬಳಿ ಕೊನೆಯ​ ಲೊಕೇಷನ್​ ತೋರಿಸುತ್ತಿದೆ. ಹೀಗಾಗಿ ಬಾಲಸುಬ್ರಮಣ್ಯನ್ ಸಂಪರ್ಕದಲ್ಲಿದ್ದ ಆ ಮಹಿಳೆ ಯಾರು ಎನ್ನುವ ಬಗ್ಗೆ ಪೊಲೀಸರಿಂದ ತನಿಖೆ ಆರಂಭಗೊಂಡಿದೆ.

ಏನಿದು ಪ್ರಕರಣ?

ನಾಪತ್ತೆಯಾಗಿದ್ದ ಟ್ರಾನ್ಸ್‌ಪೋರ್ಟ್‌ ಉದ್ಯಮ ಹೊಂದಿದ್ದ ಬಾಲಸುಬ್ರಮಣ್ಯನ್ ಮೃತದೇಹ ಬೆಂಗಳೂರಿನ ಜೆ.ಪಿ ನಗರ 6ನೇ ಹಂತದ ಸಮೀಪ ಪತ್ತೆಯಾಗಿತ್ತು. ನವೆಂಬರ್ 16ರಂದು ಮೊಮ್ಮಗನನ್ನು ಬ್ಯಾಡ್ಮಿಂಟನ್ ಕ್ಲಾಸ್​ಗೆ ಕರೆದುಕೊಂಡು ಹೋಗಿದ್ದ ಬಾಲಸುಬ್ರಮಣ್ಯನ್ ಮನೆಗೆ ವಾಪಸ್ ಆಗದೇ ನಾಪತ್ತೆಯಾಗಿದ್ದರು. ಆದರೆ ನವೆಂಬರ್ 17ರಂದು ಬಾಲ ಸುಬ್ರಮಣಿಯನ್ ಅವರ ಮೃತ ದೇಹ ಪತ್ತೆಯಾಗಿದ್ದು, ಈ ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡಿತ್ತು.

ಇದನ್ನೂ ಓದಿ: ಡ್ರಗ್ಸ್ ಅಮಲಿನಲ್ಲಿದ್ದ ಬ್ರೆಜಿಲ್ ಮಾಡೆಲ್ ಪ್ರಿಯಕರನ ಕಣ್ಣಿಗೆ ಗುಂಡು ಹಾರಿಸಿ ಅರಬೆತ್ತಲೆ ಸ್ಥಿತಿಯಲ್ಲಿ ಹೋಟೆಲ್​ನಿಂದ ಹೊರಗೋಡಿದಳು!

ಮೊಮ್ಮಗನ್ನ ಬ್ಯಾಡ್ಮಿಂಟನ್ ಕ್ಲಾಸ್​ಗೆ ಕರೆದುಕೊಂಡು ಹೋಗಿದ್ದ ಬಾಲ ಸುಬ್ರಮಣಿಯನ್, ಅಂದೇ ಸಂಜೆ 04-55 ಕ್ಕೆ ತನ್ನ ಸೊಸೆಗೆ ಕರೆ ಮಾಡಿ ಹೊರಗಡೆ ಕೆಲಸವಿದೆ ಎಂದು ತಿಳಿಸಿದ್ದರು. ಅನಂತರ ಕರೆ ಮಾಡಿದರೆ ಅವರ ನಂಬರ್ ಸ್ವೀಚ್ ಆಫ್ ಬಂದಿದೆ. ಇದರಿಂದ ಆತಂಕಗೊಂಡಿದ್ದ ಮಗ, ತಕ್ಷಣವೇ ಸುಬ್ರಮಣ್ಯಪುರ ಪೊಲೀಸ್ ಠಾಣೆಗೆ ತೆರಳಿ ಮಿಸ್ಸಿಂಗ್ ಕಂಪ್ಲೆಂಟ್ ದೂರು ದಾಖಲಿಸಿದ್ದರು.

ನಿನ್ನೆ ಜೆ.ಪಿ ನಗರ 6ನೇ ಹಂತದ ಸಮೀಪ ಮೃತ ದೇಹ ಪತ್ತೆಯಾಗಿದ್ದ ಬಗ್ಗೆ ಮಗನಿಗೆ ಪೊಲೀಸರಿಂದ ಮಾಹಿತಿ ಹೋಗಿದೆ. ತಕ್ಷಣ ಸ್ಥಳಕ್ಕೆ ಬಂದು ನೋಡಿದಾಗ ತಂದೆಯ ಮೃತ ದೇಹದ ಗುರುತು ಪತ್ತೆಯಾಗಿತ್ತು. ಮೃತ ದೇಹದ ಮೇಲೆ ಯಾವುದೇ ಗಾಯಗಳು ಕಂಡು ಬಂದಿಲ್ಲ. ಆದರೆ ಪ್ಲಾಸ್ಟಿಕ್ ಚೀಲಗಳಿಂದ ಮುಖ ಹಾಗೂ ಕಾಲುಗಳನ್ನು ಮುಚ್ಚಲಾಗಿತ್ತು. ಈ ಸಾವಿನ ಬಗ್ಗೆ ಸಂಶಯವಿರುವುದರಿಂದ ಸೂಕ್ತ ತನಿಖೆ ನಡೆಸುವಂತೆ ಪುತ್ರ ಪುಟ್ಟೇನಹಳ್ಳಿ ಪೊಲೀಸ್​ ಠಾಣೆಗೆ ದೂರು ನೀಡಿದ್ದು, ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:02 am, Fri, 18 November 22