Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಮೊಮ್ಮಗನನ್ನ ಬ್ಯಾಡ್ಮಿಂಟನ್ ಕ್ಲಾಸ್​ಗೆ ಕರೆದುಕೊಂಡು ಹೋಗಿದ್ದ ವ್ಯಕ್ತಿ ನಾಪತ್ತೆ, ಇಂದು ಶವವಾಗಿ ಪತ್ತೆ

ಮೊಮ್ಮಗನನ್ನ ಬ್ಯಾಡ್ಮಿಂಟನ್ ಕ್ಲಾಸ್​ಗೆ ಬಿಟ್ಟು ಬರಲು ಹೋಗಿ ನಾಪತ್ತೆಯಾಗಿದ್ದ ಬೆಂಗಳೂರಿನ 67 ವರ್ಷದ ವ್ಯಕ್ತಿ ಶವ ಪತ್ತೆಯಾಗಿದೆ.

ಬೆಂಗಳೂರು: ಮೊಮ್ಮಗನನ್ನ ಬ್ಯಾಡ್ಮಿಂಟನ್ ಕ್ಲಾಸ್​ಗೆ ಕರೆದುಕೊಂಡು ಹೋಗಿದ್ದ ವ್ಯಕ್ತಿ ನಾಪತ್ತೆ, ಇಂದು ಶವವಾಗಿ ಪತ್ತೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Nov 17, 2022 | 10:29 PM

ಬೆಂಗಳೂರು: ನಾಪತ್ತೆಯಾಗಿದ್ದ 67 ವರ್ಷದ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ.  ಟ್ರಾನ್ಸ್‌ಪೋರ್ಟ್‌ ಉದ್ಯಮ ಹೊಂದಿದ್ದ ಬಾಲಸುಬ್ರಮಣ್ಯನ್ ಮೃತ ದೇಹ ಬೆಂಗಳೂರಿನ ಜೆ.ಪಿ ನಗರ 6ನೇ ಹಂತದ ಸಮೀಪ ಪತ್ತೆಯಾಗಿದೆ.  ನವೆಂಬರ್ 16ರಂದು ಮೊಮ್ಮಗನನ್ನು ಬ್ಯಾಡ್ಮಿಂಟನ್ ಕ್ಲಾಸ್ ಗೆ ಕರೆದುಕೊಂಡು ಹೋಗಿದ್ದ  ಬಾಲಸುಬ್ರಮಣ್ಯನ್ ಮನೆಗೆ ವಾಪಸ್ ಆಗದೇ ನಾಪತ್ತೆಯಾಗಿದ್ದರು. ಆದ್ರೆ, ಇಂದು(ನವೆಂಬರ್ 17) ಬಾಲ ಸುಬ್ರಮಣಿಯನ್ ಅವರ ಮೃತ ದೇಹ ಪತ್ತೆಯಾಗಿದ್ದು, ಈ ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡಿವೆ.

ನವೆಂಬರ್ 16ರಂದು ಮೊಮ್ಮಗನ್ನ ಬ್ಯಾಡ್ಮಿಂಟನ್ ಕ್ಲಾಸ್ ಗೆ ಕರೆದುಕೊಂಡು ಹೋಗಿದ್ದ ಬಾಲ ಸುಬ್ರಮಣಿಯನ್, ಅಂದೇ ಸಂಜೆ 04-55 ಕ್ಕೆ ತನ್ನ ಸೊಸೆಗೆ ಕರೆ ಮಾಡಿ ಹೊರಗಡೆ ಕೆಲಸವಿದೆ ಎಂದು ತಿಳಿಸಿದ್ದರು. ಅನಂತರ ಕರೆ ಮಾಡಿದ್ರೆ ಅವರ ನಂಬರ್ ಸ್ವೀಚ್ ಆಫ್ ಬಂದಿದೆ. ಇದರಿಂದ ಆತಂಕಗೊಂಡಿದ್ದ ಮಗ, ತಕ್ಷಣವೇ ಸುಬ್ರಮಣ್ಯಪುರ ಪೊಲೀಸ್ ಠಾಣೆಗೆ ತೆರಳಿ ಮಿಸ್ಸಿಂಗ್ ಕಂಪ್ಲೆಂಟ್ ದೂರು ದಾಖಲಿಸಿದ್ದರು.

ಇಂದು ಜೆ.ಪಿ ನಗರ 6ನೇ ಹಂತದ ಸಮೀಪ ಮೃತ ದೇಹ ಪತ್ತೆಯಾಗಿದ್ದ ಬಗ್ಗೆ ಮಗನಿಗೆ ಪೊಲೀಸರಿಂದ ಮಾಹಿತಿ ಹೋಗಿದೆ. ತಕ್ಷಣ ಸ್ಥಳಕ್ಕೆ ಬಂದು ನೋಡಿದಾಗ ತಂದೆಯ ಮೃತ ದೇಹದ ಗುರುತು ಪತ್ತೆಯಾಗಿದೆ. ಮೃತ ದೇಹದ ಮೇಲೆ ಯಾವುದೇ ಗಾಯಗಳು ಕಂಡು ಬಂದಿಲ್ಲ. ಆದ್ರೆ, ಪ್ಲಾಸ್ಟಿಕ್ ಚೀಲಗಳಿಂದ ಮುಖ ಹಾಗೂ ಕಾಲುಗಳನ್ನು ಮುಚ್ಚಲಾಗಿದೆ. ಈ ಸಾವಿನ ಬಗ್ಗೆ ಸಂಶಯವಿರುವುದರಿಂದ ಸೂಕ್ತ ತನಿಖೆ ನಡೆಸುವಂತೆ ಪುತ್ರ ಪುಟ್ಟೇನಹಳ್ಳಿ ಪೊಲೀಸ್​ ಠಾಣೆಗೆ ದೂರು ನೀಡಿದ್ದು, ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಟ್ರಾನ್ಸ್‌ಪೋರ್ಟ್‌ ಉದ್ಯಮ ಹೊಂದಿದ್ದ ಮೃತ ಬಾಲಸುಬ್ರಮಣ್ಯನ್, ಇತ್ತೀಚೆಗೆ ಉದ್ಯಮವನ್ನು ಮಗನಿಗೆ ನೀಡಿದ್ದರು. ಇದೀಗ ಮೃತ ಬಾಲಸುಬ್ರಮಣ್ಯನ್ ಪುತ್ರ ಲಾರಿ ಸಂಘದ ಕಾರ್ಯದರ್ಶಿಯಾಗಿದ್ದಾರೆ.

ಇದು ಕೊಲೆಯೋ ಏನೋ ಎನ್ನುವುದು ಮರಣೋತ್ತರ ಪರೀಕ್ಷೆ ವರದಿ ಬಳಿಕ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಕಿಕ್ಕಿಸಿ

Published On - 10:12 pm, Thu, 17 November 22