ಡ್ರಗ್ಸ್ ಅಮಲಿನಲ್ಲಿದ್ದ ಬ್ರೆಜಿಲ್ ಮಾಡೆಲ್ ಪ್ರಿಯಕರನ ಕಣ್ಣಿಗೆ ಗುಂಡು ಹಾರಿಸಿ ಅರಬೆತ್ತಲೆ ಸ್ಥಿತಿಯಲ್ಲಿ ಹೋಟೆಲ್​ನಿಂದ ಹೊರಗೋಡಿದಳು!

ಲೊಂಬಾರ್ಡಿಯ ದೇಹ ಪತ್ತೆಯಾದಾಗ ಅದರ ಮೇಲೆ ಗಾಯಗಳಿದ್ದವು ಮತ್ತು ಕಣ್ಣು ಗುಂಡೇಟಿನಿಂದ ಛಿದ್ರಗೊಂಡಿತ್ತು. ಮರ್ಸೆಲ್ಲಳನ್ನು ಕೊಲೆ, ಬೆದರಿಕೆ, ಕಾರು ಕಳುವು ಅರೋಪಗಳಲ್ಲಿ ಬಂಧಿಸಲಾಯಿತು.

ಡ್ರಗ್ಸ್ ಅಮಲಿನಲ್ಲಿದ್ದ ಬ್ರೆಜಿಲ್ ಮಾಡೆಲ್ ಪ್ರಿಯಕರನ ಕಣ್ಣಿಗೆ ಗುಂಡು ಹಾರಿಸಿ ಅರಬೆತ್ತಲೆ ಸ್ಥಿತಿಯಲ್ಲಿ ಹೋಟೆಲ್​ನಿಂದ ಹೊರಗೋಡಿದಳು!
ಮರ್ಸಿಲ್ಲ ಎಲೆನ್ ಪೈವಾ ಮಾರ್ಟಿನ್ಸ್ ಮತ್ತು ಜೋರ್ಡನ್ ಲೊಂಬಾರ್ಡಿ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 18, 2022 | 8:08 AM

ಪ್ರಿಯಕರನ ಕಣ್ಣಿಗೆ ಗುಂಡು ಹಾರಿಸಿ ಕೊಂದು ಅರೆಬೆತ್ತಲೆ ಸ್ಥಿತಿಯಲ್ಲಿ ಘಟನಾ ಸ್ಥಳದಿಂದ ಪರಾರಿಯಾಗಿದ್ದ್ದ ಮಾಡೆಲ್ ಳನ್ನು ಜೈಲಿಗೆ ಹಾಕಿದ ದಿನವೇ ಸಹಕೈದಿಗಳು ಥಳಿಸಿದ್ದರಿಂದ ಬೇರೆ ಕಾರಾಗೃಹಕ್ಕೆ ಸ್ಥಳಾಂತರಿ ಪ್ರತ್ಯೇಕವಾದ ಸೆಲ್ನಲ್ಲಿ ಇರಿಸಲಾಗಿದೆ. ಬ್ರೆಜಿಲ್ ನ ಮರ್ಸಿಲ್ಲ ಎಲೆನ್ ಪೈವಾ ಮಾರ್ಟಿನ್ಸ್ (Marcella Ellen Paiva Martins) ತನ್ನ 40-ವರ್ಷ-ವಯಸ್ಸಿನ ಸಂಗಾತಿ ಜೋರ್ಡನ್ ಲೊಂಬಾರ್ಡಿಯನ್ನು (Jordan Lombardi) ಬ್ರಾಸಿಲಿಯಾದ (Brasilia) ಪಾರ್ಕ್ ವೇ ಹೋಟೆಲ್ ನಲ್ಲಿ ಕೊಂದ ಆರೋಪ ಎದುರಿಸುತ್ತಿದ್ದಾಳೆ. ನವೆಂಬರ್ 9 ರಂದು ಕೊಕೇನ್, ಗಾಂಜಾ, ಎಕ್ಟೇಸಿ ಮೊದಲಾದ ಡ್ರಗ್ಸ್ ಸೇವನೆ ನಂತರ ಅವಳು ಕೊಲೆ ನಡೆಸಿದಳೆಂದು ಆರೋಪಿಸಲಾಗಿದೆ. ಅವತ್ತು ಬೆಳಗಿನ ಜಾವದಲ್ಲಿ ಅವರಿಬ್ಬರ ನಡುವೆ ಜಗಳ ಹುಟ್ಟಿಕೊಂಡ ಬಳಿಕ ಲೊಂಬಾರ್ಡಿಯ ಬಳಿಯಿದ್ದ ಹ್ಯಾಂಡ್ ಗನ್ ಕಸಿದುಕೊಂಡು ಅವನ ಮೇಲೆ ಗುಂಡು ಹಾರಿಸಿದ್ದಾಳೆ.

ಆಮೇಲೆ ಅವಳು ಮೈಮೇಲೆ ತುಂಡು ಬಟ್ಟೆಯನ್ನು ಹೊದ್ದು ಲೊಂಬಾರ್ಡಿಯ ಆಡಿ ಕ್ಯೂ7 ಕಾರಲ್ಲಿ ಪರಾರಿಯಾಗುವ ಪ್ರಯತ್ನ ಮಾಡುತ್ತಿದ್ದಾಗ ವಾಹನವನನ್ನು ಹೋಟೆಲ್ ನ ಗೇಟ್ ಗೆ ಗುದ್ದಿದ್ದಾಳೆ.

ಮರ್ಸಿಲ್ಲಳ ವಕೀಲ ನೀಡಿರುವ ಹೇಳಿಕೆಯ ಪ್ರಕಾರ, ಅವಳು ಅಲ್ಲಿಂದ ಓಡಿಹೋಗುವ ಪ್ರಯತ್ನದಲ್ಲಿದ್ದಾಗ ಶಾಲಾ ಬಸ್ಸೊಂದನ್ನು ಅಡ್ಡಗಟ್ಟಿ ಅದರ ಚಾಲಕನಿಗೆ ಗನ್ ನಿಂದ ಹೆದರಿಸಿದ್ದಾಳೆ.

ಲೊಂಬಾರ್ಡಿಯ ದೇಹ ಪತ್ತೆಯಾದಾಗ ಅದರ ಮೇಲೆ ಗಾಯಗಳಿದ್ದವು ಮತ್ತು ಕಣ್ಣು ಗುಂಡೇಟಿನಿಂದ ಛಿದ್ರಗೊಂಡಿತ್ತು. ಮರ್ಸೆಲ್ಲಳನ್ನು ಕೊಲೆ, ಬೆದರಿಕೆ, ಕಾರು ಕಳುವು ಅರೋಪಗಳಲ್ಲಿ ಬಂಧಿಸಲಾಯಿತು.

ಲೊಂಬಾರ್ಡಿಯ ಮತ್ತು ಮರ್ಸಿಲ್ಲ ಜನವರಿ 2023 ರಲ್ಲಿ ಮದುವೆಯಾಗುವ ಯೋಜನೆ ಹಾಕಿಕೊಂಡಿದ್ದರು.

ಮರ್ಸಿಲ್ಲಳನ್ನು ಸದ್ಯ ಬಾರೋ ಅಲ್ಟೋ ಕಾರಾಗೃಹದ ಪ್ರತ್ಯೇಕ ವಾರ್ಡ್ನಲ್ಲಿ ಇರಿಸಲಾಗಿದೆ. ಅದಕ್ಕೂ ಮೊದಲು ಅವಳಿಗೆ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು.

ಬಾರೋ ಅಲ್ಟೋ ಕಾರಾಗೃಹಕ್ಕೆ ಅವಳನ್ನು ನವೆಂಬರ್ 11 ರಂದು ಶಿಫ್ಟ್ ಮಾಡಲಾಗಿದೆ. ಜನರಲ್ ಡೈರೆಕ್ಟೋರೇಟ್ ಆಫ್ ಪೆನಿಟೆಂಟಿಯರಿ ಅಡ್ಮಿನಿಸ್ಟ್ರೇಶನ್ (ಡಿಜಿಎಪಿ) ಅವಳ ಬಗ್ಗೆ ನೀಡಿದ ರಿಪೋರ್ಟ್ ಹೀಗಿದೆ: ತನಗೆ ಹುಷಾರಿಲ್ಲ ಅಂತ ಅವಳು ಕ್ರಿಮಿನಲ್ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ಹೇಳಿದ್ದಳು. ಕೂಡಲೇ ಅವಳನ್ನು ಮುನಿಸಿಪಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿನ ವೈದ್ಯರು ಅವಳಿಗೆ ಪ್ಯಾನಿಕ್ ಅಟ್ಯಾಕ್ ಆಗಿದೆ ಎಂದು ಹೇಳಿದರು. ಅಲ್ಲೇ ಅವಳ ಔಷಧೋಪಚಾರ ನಡೆಸಲಾಯಿತು.

ಮರ್ಸೆಲ್ಲಳ ಮಾನಸಿಕ ಹಾಗೂ ದೈಹಿಕ ಸ್ವಾಸ್ಥ್ಯಕ್ಕೆ ತೊಂದರೆಯಾಗದಿರಲೆಂದು ಅವಳನ್ನೀಗ ಇತರ ಕೈದಿಗಳಿಗಿಂತ ದೂರ ಪ್ರತ್ಯೇಕವಾದ ವಾರ್ಡ್ ನಲ್ಲಿ ಇರಿಸಲಾಗಿದೆ, ಎಂದು ಡಿಜಿಎಪಿ ರಿಪೋರ್ಟ್ ಹೇಳಿದೆ.

ಅವಳು ಬ್ರೇನ್ ಟ್ಯೂಮರ್ ನಿಂದ ಬಳಲುತ್ತಿರುವುದು ಹಲವಾರು ತಿಂಗಳುಗಳ ಹಿಂದೆಯೇ ಪತ್ತೆಯಾಗಿತ್ತು. ಅದರೆ ಅದರ ಚಿಕಿತ್ಸೆ ಇನ್ನೂ ಶುರುವಾಗಿಲ್ಲ ಎಂದು ಅವಳ ವಕೀಲ ಜಾನಿ ಕ್ಲೀಕ್ ಹೇಳಿದ್ದಾರೆ.

‘ಟ್ಯೂಮರ್ ರಿಪೋರ್ಟ್ ಗಾಗಿ ನಾನು ಕಾಯುತ್ತಿದ್ದೇನೆ. ರಿಪೋರ್ಟ್ ಸಿಕ್ಕ ಮೇಲೆ ಅದರ ಆಧಾರದ ಮೇಲೆ ಅವಳ ತಾತ್ಕಾಲಿಕ ಬಿಡುಗಡೆಗೆ ಮನವಿ ಸಲ್ಲಿಸುತ್ತೇನೆ,’ ಎಂದು ಅವರು ಹೇಳಿದ್ದಾರೆ.

ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು