ದೆಹಲಿ ಶ್ರದ್ಧಾ ಕೊಲೆ ಪ್ರಕರಣ: ಆರೋಪಿ ಆಫ್ತಾಬ್ ಗೆ ನಾರ್ಕೋ ಪರೀಕ್ಷೆಗೆ ಕೋರ್ಟ್ ಅನುಮತಿ
ದೆಹಲಿಯ ಶ್ರದ್ಧಾ ವಾಕರ್ ಕೊಲೆ ಪ್ರಕರಣದ ಆರೋಪಿ ಅಫ್ತಾಬ್‌ಗೆ 5 ದಿನ ಪೊಲೀಸ್ ಕಸ್ಟಡಿ ವಿಸ್ತರಣೆಯಾಗಿದ್ದು, ಜೊತೆಗೆ ನಾರ್ಕೋ ಟೆಸ್ಟ್ಗೆ ಕೋರ್ಟ್ ಅನುಮತಿ ಕೊಟ್ಟಿದೆ.
ನವದೆಹಲಿ: ಇಡೀ ದೇಶವೇ ಬಿಚ್ಚಿಬೀಳಿಸಿದ ದೆಹಲಿಯ ಶ್ರದ್ಧಾ ವಾಕರ್ (Shraddha Walkar) ಕೊಲೆ ಪ್ರಕರಣದ ಆರೋಪಿ ಅಫ್ತಾಬ್‌ಗೆ ಕೋರ್ಟ್ 5 ದಿನ ಪೊಲೀಸ್ ಕಸ್ಟಡಿ ವಿಧಿಸಿದೆ. ಬಂಧಿತ ಪ್ರಿಯಕರ ಅಫ್ತಾಬ್‌ಗೆ 5 ದಿನ ಪೊಲೀಸ್ ಕಸ್ಟಡಿಗೆ ನೀಡಿ ನವದೆಹಲಿಯ ಸಾಕೇತ್ ಕೋರ್ಟ್ ಇಂದು(ನವೆಂಬರ್ 17) ಆದೇಶ ಹೊರಡಿಸಿದೆ. ಅಲ್ಲದೇ ಆರೋಪಿಯನ್ನು ಮಾದಕ ದ್ರವ್ಯ ಸೇವನೆ (ನಾರ್ಕೋ) ಪರೀಕ್ಷೆಗೆ ಒಳಪಡಿಸಲು ಅವಕಾಶ ನೀಡಿದೆ.
ಶ್ರದ್ಧಾ ವಾಕರ್ ಪ್ರಿಯಕರ ಅಫ್ತಾಬ್ನನ್ನು ಪೊಲೀಸರು ವರ್ಚುವಲ್ ಮೂಲಕ ಕೋರ್ಟ್‌ಗೆ ಹಾಜರುಪಡಿಸಿದ್ದ. ವಿಚಾರಣೆ ವೇಳೆ ಅಫ್ತಾಬ್ ಕೊಲೆ ಬಗ್ಗೆ ಒಂದೊಂದೇ ರಹಸ್ಯ ಬಾಯ್ಬಿಡುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಇನ್ನಷ್ಟು ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಕೋರ್ಟ್‌ಗೆ ಮನವಿ ಮಾಡಿದ್ದರು. ಅದರಂತೆ ಸಾಕೇತ್ ಕೋರ್ಟ್, ಅಫ್ತಾಬ್‌ಗೆ ಐದು ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.
Delhi Murder Case: ದೆಹಲಿ ಕೊಲೆ ಪ್ರಕರಣ; ಶ್ರದ್ಧಾಳ ದೇಹದ 13 ಭಾಗ ಪತ್ತೆ; ತಲೆ, ಹತ್ಯೆಯ ಆಯುಧಕ್ಕಾಗಿ ಹುಡುಕಾಟ
ಘಟನೆ ಹಿನ್ನೆಲೆ
ದೆಹಲಿಯ ಅಪಾರ್ಟ್ಮೆಂಟ್ನಲ್ಲಿ ತನ್ನೊಂದಿಗೆ ವಾಸವಾಗಿದ್ದ ಲಿವ್-ಇನ್ ಪಾರ್ಟನರ್ ಶ್ರದ್ಧಾ ವಾಕರ್ ಎಂಬ 26 ವರ್ಷದ ಯುವತಿಯನ್ನು ಅಫ್ತಾಬ್ ಎಂಬ ಯುವಕ ಕತ್ತು ಹಿಸುಕಿ ಕೊಂದು, ಆಕೆಯ ದೇಹವನ್ನು 35 ಭಾಗಗಳಾಗಿ ತುಂಡು ಮಾಡಿ, ದೆಹಲಿ ಹಾಗೂ ಸುತ್ತಮುತ್ತ ಬಿಸಾಡಿದ್ದ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. 6 ತಿಂಗಳ ಹಿಂದೆ ಅಂದರೆ ಕಳೆದ ಮೇನಲ್ಲಿ ನಡೆದ ಕೊಲೆ (Murder) ವಿಷಯ ಇದೀಗ ಬೆಳಕಿಗೆ ಬಂದಿದ್ದು, ಅಫ್ತಾಬ್ ತಾನು ಮಾಡಿದ ಕೃತ್ಯವನ್ನು ಒಪ್ಪಿಕೊಂಡ ಬಳಿಕ ಪೊಲೀಸರು ಶ್ರದ್ಧಾಳ ಶವದ (Shraddha Murder) 35 ಭಾಗಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ಈಗಾಗಲೇ ಆಕೆಯ ದೇಹದ 13 ಭಾಗಗಳು ಪತ್ತೆಯಾಗಿವೆ.
Published On - 6:08 pm, Thu, 17 November 22