AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shraddha Walkar Murder: ಇನ್ನೂ ಪತ್ತೆಯಾಗಿಲ್ಲ ಶ್ರದ್ಧಾಳ ತಲೆ, ಮೊಬೈಲ್; ಅಫ್ತಾಬ್ ವಿರುದ್ಧ ಪೊಲೀಸರಿಗೆ ಸಿಕ್ಕಿರುವ ಸಾಕ್ಷಿಗಳಿವು

Delhi Murder Case: ಶ್ರದ್ಧಾಳನ್ನು ಕೊಂದ ನಂತರ, ಅಫ್ತಾಬ್ ಆಕೆಯ ಬ್ಯಾಂಕ್ ಖಾತೆಯ ಆ್ಯಪ್ ಅನ್ನು ಆಪರೇಟ್ ಮಾಡಿ 54,000 ರೂ. ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದ. ಆ ಹಣದಲ್ಲಿ ಅಫ್ತಾಬ್ ದೊಡ್ಡ ಫ್ರಿಡ್ಜ್ ಖರೀದಿಸಿದ್ದ ಎನ್ನಲಾಗಿದೆ.

Shraddha Walkar Murder: ಇನ್ನೂ ಪತ್ತೆಯಾಗಿಲ್ಲ ಶ್ರದ್ಧಾಳ ತಲೆ, ಮೊಬೈಲ್; ಅಫ್ತಾಬ್ ವಿರುದ್ಧ ಪೊಲೀಸರಿಗೆ ಸಿಕ್ಕಿರುವ ಸಾಕ್ಷಿಗಳಿವು
ಅಫ್ತಾಬ್- ಶ್ರದ್ಧಾ
TV9 Web
| Edited By: |

Updated on: Nov 17, 2022 | 2:25 PM

Share

ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಶ್ರದ್ಧಾ ವಾಕರ್ ಹತ್ಯೆ ನಡೆದು 6 ತಿಂಗಳು ಕಳೆದಿವೆ. ಹೀಗಾಗಿ, ಈ ಪ್ರಕರಣವನ್ನು ಭೇದಿಸುವುದು ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಮೇ 18ರಂದು ನಡೆದ ಜಗಳದ ನಂತರ ಅಫ್ತಾಬ್ ತನ್ನ ಲಿವ್ ಇನ್ ಪಾರ್ಟನರ್ ಶ್ರದ್ಧಾಳ ಕತ್ತು ಹಿಸುಕಿ ಕೊಂದಿದ್ದ. ಇದೀಗ ಪೊಲೀಸರು ಅಫ್ತಾಬ್ ಅಮೀನ್ ಪೂನಾವಾಲಾನ ತನಿಖೆ ನಡೆಸುತ್ತಿದ್ದು, ಆತ ತುಂಡು ಮಾಡಿ ಬಿಸಾಡಿರುವ ಶ್ರದ್ಧಾಳ ದೇಹದ 35 ಭಾಗಗಳ ಪೈಕಿ ಕೆಲವು ಮಾತ್ರ ಪತ್ತೆಯಾಗಿವೆ. ಆಕೆಯ ತಲೆಬುರುಡೆ ಸಿಗದೆ ಈ ಪ್ರಕರಣದ ತನಿಖೆ ಮುಂದುವರೆಯುವುದು ಅಸಾಧ್ಯವಾಗಿರುವುದರಿಂದ ಅಫ್ತಾಬ್ ವಿರುದ್ಧದ ಪ್ರಬಲ ಸಾಕ್ಷಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಲೇ ಇದ್ದಾರೆ. ಅಫ್ತಾಬ್​ನಿಗೆ ಕೊಲೆಗಾರ ಎಂದು ಶಿಕ್ಷೆ ನೀಡಬೇಕಾದರೆ ಶ್ರದ್ಧಾಳ ತಲೆಬುರುಡೆ, ಆಕೆಯ ಮೊಬೈಲ್, ಆಕೆಯನ್ನು ಕೊಂದ ಆಯುಧ ಸಿಗಲೇಬೇಕಾದ ಅನಿವಾರ್ಯತೆಯಿದೆ. ಹಾಗಾದರೆ, ಪೊಲೀಸರಿಗೆ ಅಫ್ತಾಬ್ ವಿರುದ್ಧ ಸಿಕ್ಕಿರುವ ಪ್ರಬಲ ಸಾಕ್ಷಿಗಳು ಯಾವುವು? ಎಂಬ ಮಾಹಿತಿ ಇಲ್ಲಿದೆ.

  1. ಪೋಲೀಸರಿಗೆ ಶ್ರದ್ಧಾಳ ದೇಹವನ್ನು ಬಿಸಾಡಿದ್ದ ಕಾಡಿನಲ್ಲಿ 10-13 ಮೂಳೆಗಳು ಸಿಕ್ಕಿವೆ. ಶ್ರದ್ಧಾಳನ್ನು ಕೊಂದ ನಂತರ ಅಫ್ತಾಬ್ ಆಕೆಯ ದೇಹದ 35 ತುಂಡುಗಳನ್ನು ವಿಲೇವಾರಿ ಮಾಡಿದ್ದಾಗಿ ಹೇಳಿದ್ದಾನೆ. ಆದರೆ, ಆಕೆಯ ತಲೆ ಇನ್ನೂ ಪತ್ತೆಯಾಗಿಲ್ಲ.
  2. ಕಾಡಿನಲ್ಲಿ ಸಿಕ್ಕಿರುವ ಮೂಳೆಗಳು ಮನುಷ್ಯರದ್ದೇ ಎನ್ನಲಾಗಿದ್ದು, ಈ ಕುರಿತು ನಿಖರತೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
  3. ಛತ್ತರ್​ಪುರ್ ಪ್ರದೇಶದಲ್ಲಿ ಅಫ್ತಾಬ್- ಶ್ರದ್ಧಾ ವಾಸವಾಗಿದ್ದ ಫ್ಲಾಟ್​ನ ಅಡುಗೆ ಮನೆಯಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ. ಅದರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
  4. ಮನೆಯಲ್ಲಿ ಸಿಕ್ಕ ರಕ್ತ ಮತ್ತು ಕಾಡಿನಲ್ಲಿ ಸಿಕ್ಕ ದೇಹದ ಭಾಗಗಳು ಯಾರದೆಂದು ಪತ್ತೆ ಮಾಡಲು ಶ್ರದ್ಧಾಳ ತಂದೆಯ DNA ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ.
  5. ಇದನ್ನೂ ಓದಿ
    Image
    Delhi Murder ಶ್ರದ್ಧಾಳನ್ನು ಹತ್ಯೆ ಮಾಡಿದ ಅಫ್ತಾಬ್ ಪೂನಾವಾಲಾ ಈ ಒಂದು ಸುಳ್ಳಿನಿಂದ ಸಿಕ್ಕಿಬಿದ್ದ
    Image
    Shraddha Walkar Murder: ಶ್ರದ್ಧಾ ಕೊಲೆ ಪ್ರಕರಣ; ಆರೋಪಿ ಅಫ್ತಾಬ್​ಗೆ ಮಂಪರು ಪರೀಕ್ಷೆ ಸಾಧ್ಯತೆ
    Image
    Delhi Murder Case: ದೆಹಲಿ ಕೊಲೆ ಪ್ರಕರಣ; ಶ್ರದ್ಧಾಳ ದೇಹದ 13 ಭಾಗ ಪತ್ತೆ; ತಲೆ, ಹತ್ಯೆಯ ಆಯುಧಕ್ಕಾಗಿ ಹುಡುಕಾಟ
    Image
    Shraddha Murder: ದೆಹಲಿಯನ್ನು ಬೆಚ್ಚಿ ಬೀಳಿಸಿದ ಶ್ರದ್ಧಾ ಕೊಲೆ ಪ್ರಕರಣ; ಆ ನಿಗೂಢ ರಾತ್ರಿ ನಡೆದಿದ್ದೇನು?
  6. ಅಫ್ತಾಬ್‌ನ ಫ್ಲಾಟ್‌ನಲ್ಲಿ ವಿಪರೀತ ನೀರಿನ ಬಿಲ್ ಬಂದಿರುವುದು ಪೊಲೀಸರಲ್ಲಿ ಅನುಮಾನ ಹುಟ್ಟಿಸಿದೆ. ಬಹುಶಃ ಶ್ರದ್ಧಾಳನ್ನು ಕೊಂದ ಬಳಿಕ ಮನೆಯನ್ನು ಕ್ಲೀನ್ ಮಾಡಲು ಅಫ್ತಾಬ್ ಅಪಾರ ಪ್ರಮಾಣದ ನೀರನ್ನು ಬಳಸಿದ್ದಾನೆ ಎಂದು ಊಹಿಸಲಾಗಿದೆ.
  7. ತನಿಖಾಧಿಕಾರಿಗಳು ಅಫ್ತಾಬ್ ವಾಸವಾಗಿದ್ದ ಫ್ಲಾಟ್​ನ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪಡೆದಿದ್ದಾರೆ. ಹೆಚ್ಚಿನ ಸಿಸಿಟಿವಿಗಳು 15 ದಿನಗಳ ದಾಖಲೆಗಳನ್ನು ಸೆರೆಹಿಡಿಯುವುದರಿಂದ 6 ತಿಂಗಳ ಹಿಂದಿನ ದೃಶ್ಯಾವಳಿಗಳನ್ನು ಕಲೆಹಾಕುವುದು ಪೊಲೀಸರಿಗೆ ಸವಾಲಾಗಿದೆ.
  8. ಶ್ರದ್ಧಾ ಅವರ ವಸ್ತುಗಳಿದ್ದ ಬ್ಯಾಗ್ ಪತ್ತೆಯಾಗಿದೆ. ಆದರೆ ಅದನ್ನು ಕುಟುಂಬದವರು ಇನ್ನೂ ಗುರುತಿಸಿಲ್ಲ.
  9. ದೆಹಲಿ ಪೊಲೀಸರು ಅಫ್ತಾಬ್‌ನ ಮಂಪರು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರು. ಆತ ಸತ್ಯವನ್ನು ಹೇಳುತ್ತಿದ್ದಾನೆಯೇ ಅಥವಾ ತನಿಖೆಯ ದಾರಿ ತಪ್ಪಿಸುತ್ತಿದ್ದಾರೆಯೇ ಎಂಬುದನ್ನು ಸಾಬೀತುಪಡಿಸಲು ಈ ಪರೀಕ್ಷೆಗೆ ಅವಕಾಶ ಕೇಳಲಾಗಿದೆ.
  10. ಶ್ರದ್ಧಾಳ ದೇಹವನ್ನು ಪೀಸ್ ಮಾಡಿದ ನಂತರ ಅಫ್ತಾಬ್​ನ ಕೈಗೂ ಚಾಕುವಿನಿಂದ ಗಾಯಗಳಾಗಿತ್ತು. ಆ ಗಾಯದ ಚಿಕಿತ್ಸೆಗಾಗಿ ಅಫ್ತಾಬ್ ಮೇ ತಿಂಗಳಲ್ಲಿ ವೈದ್ಯರನ್ನು ಭೇಟಿ ಮಾಡಿದ್ದ. ವೈದ್ಯರು ಅಫ್ತಾಬ್ ಬಹಳ ಚಡಪಡಿಸುತ್ತಿದ್ದ, ಹಣ್ಣುಗಳನ್ನು ಕತ್ತರಿಸುವಾಗ ಕೈಗೆ ಗಾಯವಾಗಿತ್ತು ಎಂದು ಹೇಳಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ.
  11. ಶ್ರದ್ಧಾಳನ್ನು ಕೊಂದ ನಂತರ, ಅಫ್ತಾಬ್ ಆಕೆಯ ಬ್ಯಾಂಕ್ ಖಾತೆಯ ಆ್ಯಪ್ ಅನ್ನು ಆಪರೇಟ್ ಮಾಡಿ 54,000 ರೂ. ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದ. ಆ ಹಣದಲ್ಲಿ ಅಫ್ತಾಬ್ ದೊಡ್ಡ ಫ್ರಿಡ್ಜ್ ಖರೀದಿಸಿದ್ದ ಎನ್ನಲಾಗಿದೆ. ಆ ಫ್ರಿಡ್ಜ್​ನ ಬಿಲ್ ಕೂಡ ಪತ್ತೆಯಾಗಿದೆ.

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ