AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಲೆ ಯತ್ನ ಪ್ರಕರಣ ಆರೋಪಿ ಪ್ರೈವೇಟ್ ಜೆಟ್​ ಮೂಲಕ ಎಸ್ಕೇಪ್, ಬೆಂಗಳೂರು ಪೊಲೀಸರು ಬರಿಗೈನಲ್ಲಿ ವಾಪಸ್

ಆರೋಪಿಗಳು ಬೈಕ್​ ಇಲ್ಲ ಕಾರು ಎಸ್ಕೇಪ್​ ಆಗುವುದನ್ನು ಕೇಳಿದ್ದೇವೆ. ಆದ್ರೆ, ಇಲ್ಲೋರವ ಆರೋಪಿ ಜೆಟ್​ ವಿಮಾನದ ಮೂಲಕ ಪೊಲೀಸರಿಂದ ತಲೆಮರಿಸಿಕೊಂಡಿದ್ದಾನೆ,. ಇದರಿಂದ ಬೆಂಗಳೂರು ಪೊಲೀಸರು ಮುಂಬೈನಿಂದ ಬರಿಗೈನಲ್ಲಿ ವಾಪಸ್ ಆಗಿದ್ದಾರೆ.

ಕೊಲೆ ಯತ್ನ ಪ್ರಕರಣ ಆರೋಪಿ ಪ್ರೈವೇಟ್ ಜೆಟ್​ ಮೂಲಕ ಎಸ್ಕೇಪ್, ಬೆಂಗಳೂರು ಪೊಲೀಸರು ಬರಿಗೈನಲ್ಲಿ ವಾಪಸ್
ಸಾಂದರ್ಭಿಕ ಚಿತ್ರ
ರಮೇಶ್ ಬಿ. ಜವಳಗೇರಾ
|

Updated on: Jun 22, 2023 | 11:52 AM

Share

ಬೆಂಗಳೂರು:  ಕೊಲೆ, ಹಲ್ಲೆ, ಕಳ್ಳತನ ಮಾಡಿ ಕಾರು ಇಲ್ಲ ಬೈಕ್​ ಅತ್ತಿಕೊಂಡು ತಲೆಮರೆಸಿಕೊಳ್ಳುವುದು ಕೇಳಿದ್ದೇವೆ. ಆದ್ರೆ, ಇಲ್ಲೋರ್ವ ಆರೋಪಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರೈವೇಟ್ ಜೆಟ್(private jet)​ ಮೂಲಕ ನೆರೆ ರಾಷ್ಟ್ರಕ್ಕೆ ಎಸ್ಕೇಪ್ ಆಗಿದ್ದಾನೆ. ಬೆಂಗಳೂರಿನ(Bengaluru) ಆರ್​ಟಿ ನಗರ ಠಾಣಾ ವ್ಯಾಪ್ತಿಯ ಖಾಸಗಿ ಹೋಟೆಲ್​​ನಲ್ಲಿ ನಡೆದಿದ್ದ ಉದ್ಯಮಿಗಳ ಪುತ್ರರ(business man children) ಗಲಾಟೆ ಪ್ರಕರಣ ಯಾವ ಕ್ರೈಂ ಥ್ರಿಲ್ಲರ್ ಸಿನಿಮಾಗೂ ಕಮ್ಮಿ‌ಇಲ್ಲ. ಕೊಲೆ ಯತ್ನದ ಪ್ರಕರಣದಡಿಯಲ್ಲಿ ಪೊಲೀಸರು ಹುಡುಕುತ್ತಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆಯೇ ಆರೋಪಿ ಪ್ರೈವೇಟ್ ಜೆಟ್​ ಮೂಲಕ ಎಸ್ಕೇಪ್ ಆಗಿದ್ದಾನೆ. ಹೀಗಾಗಿ ಆರೋಪಿ ಬಂಧನಕ್ಕಾಗಿ ಮುಂಬೈಗೆ ತೆರಳಿದ್ದ ಆರ್​ ಟಿ ನಗರ ಪೊಲೀಸರು ಬರಿಗೈನಲ್ಲಿ ವಾಪಾಸ್ ಆಗಿದ್ದಾರೆ.

ಇದನ್ನೂ ಓದಿ: Bengaluru: ಪ್ರತಿಷ್ಠಿತ ಹೋಟೆಲ್​ನಲ್ಲಿ ಉದ್ಯಮಿಗಳ ಮಕ್ಕಳ ಹೈಡ್ರಾಮ; ದರ್ಶನ್ ತಲೆಗೆ ಬಿಯರ್ ಬಾಟಲಿಯಿಂದ ಹಲ್ಲೆ

ಇದು ಉದ್ಯಮಿ ವೇದಾಂತ್ ದುಗಾರ್ ಎಸ್ಕೇಪ್ ಅಸಲಿ ಕಹಾನಿ. ಕಳೆದ ತಿಂಗಳು ಅಂದರೆ ಮೇ 9ರಂದು ವೈಷ್ಣವಿ ಬಿಲ್ಡರ್ಸ್ ಚೇರ್ಮನ್ ದರ್ಶನ್ ಮೇಲೆ ಉದ್ಯಮಿ ವೇದಾಂತ್ ದುಗಾರ್ ಹಲ್ಲೆ ನಡೆಸಿದ್ದ. ಈ ಕುರಿತು ಆರ್ ಟಿ ನಗರ ಠಾಣೆಯಲ್ಲಿ ಕೊಲೆಯತ್ನದ ಪ್ರಕರಣ ದಾಖಲಾಗಿತ್ತು. ಪೊಲೀಸರು ಈ ಪ್ರಕರಣದ ಹಿಂದೆ ಬೀಳುತ್ತಿದ್ದಂತೆಯೇ ವೇದಾಂತ್ ಖತರ್ನಾಕ್ ಪ್ಲಾನ್ ಮಾಡಿ ಮೇ 11ರಂದು ಬೆಂಗಳೂರಿನಿಂದ ವಿಮಾನದ ಮೂಲಕ ಬಾಂಬೆಗೆ ಹಾರಿದ್ದ. ನಂತರ ಬಾಂಬೆಯಲ್ಲಿ ಕಂಪನಿ ಮೀಟಿಂಗ್ ಮುಗಿಸಿ, ಬಳಿಕ ಪ್ರೈವೇಟ್ ಜೆಟ್ ಮೂಲಕ ನೇಪಾಳದಲ್ಲಿ ತಲೆಮರಿಸಿಕೊಂಡಿದ್ದಾನೆ ಎಂದು ಪೊಲೀಸ್​ ಮೂಲಗಳಿಂದ ತಿಳಿದುಬಂದಿದೆ.

ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ನೇಪಾಳಕ್ಕೆ ಪ್ರೈವೇಟ್ ಜೆಟ್ ನಲ್ಲಿ ಎಸ್ಕೇಪ್ ಆಗಿದ್ದಾನೆ. ಇನ್ನು ಆರೋಪಿಯನ್ನು ಹುಡುಕಿಕೊಂಡು ಮುಂಬೈಗೆ ಹೋಗಿದ್ದ ಆರ್​ಟಿ ನಗರ ಪೊಲೀಸರು ಬರಿಗೈನಲ್ಲಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ವೇದಾಂತ್ ಕುಟುಂಬಸ್ಥರು ಮೂಲತಃ ನೇಪಳಾದವರು. ಹೀಗಾಗಿ ಪೊಲೀಸರಿಗೆ ಸಿಗಬಾರದು ಎಂದು ನೇಪಾಳಕ್ಕೆ ವೇದಾಂತ್ ಎಸ್ಕೇಪ್ ಆಗಿದ್ದಾನೆ ಎಂದು ಪೊಲೀಸರು ಮೂಲಗಳು ತಿಳಿಸಿವೆ. ಆರೋಪಿಯೊಬ್ಬ ಪ್ರೈವೆಟ್ ಜೆಟ್ ಬಳಸಿ ಎಸ್ಕೇಪ್ ಆಗಿರೋದು ಅಪರೂಪ. ಆರೋಪಿ ಎಸ್ಕೇಪ್ ಆದ ಕತೆ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ.

ಘಟನೆ ಹಿನ್ನೆಲೆ:

ಜೂನ್ 9ರಂದು ಸಂಜೆ ಆರ್‌.ಟಿ.ನಗರದ ಫೋರ್‌ ಸೀಜನ್‌ ಹೋಟೆಲ್‌ನಲ್ಲಿ ಸೂರ್ಯ ಎಂಬುವವರ ಮದುವೆ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ವೈಷ್ಣವಿ ಬಿಲ್ಡರ್ಸ್ ಮಾಲಿಕ ಗೋವಿಂದರಾಜು ಪುತ್ರ ದರ್ಶನ್‌ ಹಾಗೂ ವಿಎಆರ್‌ ಬಿಲ್ಡರ್ಸ್ ಪುತ್ರ ಸಂಜಯ್‌ ದಗ್ಗರ್‌ ಪುತ್ರ ವೇದಾಂತ್‌ ದಗ್ಗರ್‌ ಬಂದಿದ್ದರು. ವೇದಾಂತ್ ದುಗಾರ್ ಮತ್ತು ದರ್ಶನ್ ಇಬ್ಬರು ಸ್ನೇಹಿತರು. ಕಳೆದ ಕೆಲ ದಿನದ ಹಿಂದೆ ರೆಸ್ಟೋರೆಂಟ್​ನಲ್ಲಿ ಎದುರು ಬದುರಾಗಿದ್ದರು. ಈ ವೇಳೆ ದರ್ಶನ್ ವೇದಾಂತ್ ದುಗಾರ್​ನನ್ನ ಮಾತನಾಡಿಸದೇ ಹೊರಟಿದ್ದ. ಫೋರ್ ಸೀಸನ್ ಹೋಟೆಲ್​ನಲ್ಲಿ ಸಿಕ್ಕಾಗ ಅದೇ ವಿಚಾರವಾಗಿ ಕಿರಿಕ್ ನಡೆದಿತ್ತು. ಎಲ್ಲರೂ ನನ್ನನ್ನ ಮಾತನಾಡಿಸುತ್ತಾರೆ ನೀನ್ಯಾಕೊ ಮಾತನಾಡಿಸಲ್ಲ ಎಂದು ಆಗಮ್ ದುಗಾರ್ ಪ್ರಶ್ನಿಸಿದ್ದ. ಈ ವೇಳೆ ದರ್ಶನ್ ಅದು ನನ್ನಿಷ್ಟ ಎಂದು ಎದುರುತ್ತರಿಸಿದ್ದ. ಇದರಿಂದ ಕುಪಿತಗೊಂಡ ಆಗಮ್, ಬಿಯರ್ ಬಾಟಲ್​ನಿಂದ ಹಲ್ಲೆ ನಡೆಸಿದ್ದ. ಈ ಸಂಬಂಧ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.

ಇನ್ನಷ್ಟು ಅಪರಾಧ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ