AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಡಿದ ಅಮಲಿನಲ್ಲಿ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ; ಕುಂಟ ಎಂದು ರೇಗಿಸಿದ್ದಕ್ಕೆ ಬಿತ್ತು ಹೆಣ

ಕುಂಟ ಕುಂಟ ಎಂದು ರೇಗಿಸುತ್ತಿದ್ದ ಕಾರಣಕ್ಕೆ ಸ್ನೇಹಿತ ಜೊತೆ ಸೇರಿ ಬಾರ್​ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನೇ ಕೊಂದರು. ಸದ್ಯ ಪೊಲೀಸರು ಅಂಗವಿಕಲ ವ್ಯಕ್ತಿ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.

ಕುಡಿದ ಅಮಲಿನಲ್ಲಿ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ; ಕುಂಟ ಎಂದು ರೇಗಿಸಿದ್ದಕ್ಕೆ ಬಿತ್ತು ಹೆಣ
ಕೊಲೆಯಾದ ವಿಜಿ
Follow us
ಆಯೇಷಾ ಬಾನು
|

Updated on:Jun 22, 2023 | 1:05 PM

ಬೆಂಗಳೂರು: ಕುಡಿದ ಅಮಲಿನಲ್ಲಿ ಶುರುವಾದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯ ಕಂಡಿದೆ(Bengaluru Crime). ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ವ್ಯಾಪ್ತಿಯಲ್ಲಿ ವಿಜಯ್ ಕುಮಾರ್ ಅಲಿಯಾಸ್ ವಿಜಿ(45) ಎಂಬ ವ್ಯಕ್ತಿಯ ಕೊಲೆ ಮಾಡಲಾಗಿದೆ(Murder). ಕೊಲೆ ಆರೋಪಿಗಳಾದ ಗಿರೀಶ್, ಶಂಕರ್​ನನ್ನು ಅನ್ನಪೂರ್ಣೇಶ್ವರಿನಗರ ಪೊಲೀಸರು ಬಂಧಿಸಿದ್ದಾರೆ.

ಅನ್ನಪೂರ್ಣೇಶ್ವರಿನಗರದ ಬಾರ್​ವೊಂದರಲ್ಲಿ ಕೆಲಸ ಮಾಡುತ್ತಿದ್ದ ವಿಜಿ, ಗಿರೀಶ್​ನನ್ನು ಪದೇಪದೆ ರೇಗಿಸುತ್ತಿದ್ದ. ಅಂಗವಿಕಲನಾಗಿದ್ದ ಗಿರೀಶ್​ಗೆ ಇದು ಸ್ವಲ್ಪವೂ ಹಿಡಿಸುತ್ತಿರಲಿಲ್ಲ. ವಿಜಿ ತನಗೆ ಕುಂಟ ಎಂದು ರೇಗಿಸುತ್ತಿದ್ದದ್ದು ಕೋಪ ತರಿಸುತ್ತಿತ್ತು. ಹೀಗಾಗಿ ನಿನ್ನೆ(ಜೂನ್ 21) ರಾತ್ರಿ ಬಾರ್​ನಲ್ಲಿ ಗಲಾಟೆ ಶುರುವಾಗಿತ್ತು. ಈ ಗಲಾಟೆ ಬೇರೆ ರೀತಿಯ ತಿರುವು ಪಡೆದುಕೊಂಡಿದ್ದು ವಿಜಿಯನ್ನು ಗಿರೀಶ್ ಹಾಗೂ ಶಂಕರ್ ಸೇರಿ ಕೊಲೆ ಮಾಡಿದ್ದಾರೆ. ಈ ಸಂಬಂಧ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಬಂಧಿಸಲಾಗಿದೆ.

ಇನ್ನು 2020ರಲ್ಲಿ ಚಾಮುಂಡೇಶ್ವರಿ ಬಾರ್ ನಲ್ಲಿ ಕೆಲಸ ಮಾಡ್ತಿದ್ದ ಮೃತ ವಿಜಯ್ ಕುಮಾರ್, ಆರು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ. ಆಗಾಗ ಕುಡಿಯೋಕೆ ಅದೇ ಬಾರ್​ಗೆ ಹೋಗ್ತಿದ್ದ. ನಿನ್ನೆ ರಾತ್ರಿ ವಿಜಿ ಕುಡಿಯೋಕೆ ಹೋಗಿದ್ದ ಕೆಲ ಹೊತ್ತಿನ ಬಳಿಕ ಅದೇ ಬಾರ್ ಗೆ ವಿಜಯ್ ಸ್ನೇಹಿತರಾದ ಲೋಕೇಶ್, ಗಿರೀಶ್ ಬಂದಿದ್ದರು. ಬಾರ್ ನಲ್ಲಿ ಬಂದು ವಿಜಯ್ ಬಳಿ ಹಣ ಕೇಳಿದ್ದಾರೆ. ಈ ವೇಳೆ ಹಣ ಇಲ್ಲ ಎಂದಿದ್ದ ವಿಜಯ್ ಜೊತೆ ಮಾತು ಶುರುವಾಗಿ ಜಗಳವಾಗಿದೆ. ನಂತರ ವಿಜಯ್ ನನ್ನ ಕರೆದೊಯ್ದು ತಲೆ ಮೇಲೆ ಹಾಲೋ ಬ್ಲಾಕ್ ಕಲ್ಲು ಹಾಕಿ ಬರ್ಬರವಾಗಿ ಹತ್ಯೆ ಮಾಡಲಾಗಿದ. ಸದ್ಯ ಬಾರ್ ಕ್ಯಾಶಿಯರ್ ನೀಡಿರೋ ದೂರಿನ ಮೇಲೆ ಎಫ್ಐಆರ್ ದಾಖಲಾಗಿದೆ.

ಇದನ್ನೂ ಓದಿ: ಪ್ರಿಯಕರನನ್ನು ಮರಕ್ಕೆ ಕಟ್ಟಿ ಥಳಿಸಿ ಕೊಂದ ಗೆಳತಿಯ ಕುಟುಂಬಸ್ಥರು, ನ್ಯಾಯಾಲಯ ನೀಡಿತು ಸಂಚಲನದ ತೀರ್ಪು!

ರಿಯಲ್ ಎಸ್ಟೇಟ್ ಉದ್ಯಮಿ ಬರ್ಬರ ಹತ್ಯೆ

ರಾಜ್ಯದ ಗಡಿ ಭಾಗದಲ್ಲಿರುವ ಹೊಸೂರು ಸಮೀಪದ ಕೆ.ಮಲ್ಲಸಂದ್ರಂ ಗ್ರಾಮದ ಬಳಿ ನಿನ್ನೆ (ಜೂನ್ 21) ಸಂಜೆ ಮಾರಕಾಸ್ತ್ರಗಳಿಂದ ಕೊಚ್ಚಿ ರಿಯಲ್ ಎಸ್ಟೇಟ್ ಉದ್ಯಮಿ ಬರ್ಬರ ಹತ್ಯೆ ಮಾಡಲಾಗಿದೆ. ಐಷಾರಾಮಿ ಕಾರಿನಲ್ಲಿ ಬಂದಿದ್ದ ಎಂಟು ಮಂದಿ ನಡು ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ಕೊಚ್ಚಿ ರಿಯಲ್ ಎಸ್ಟೇಟ್ ಉದ್ಯಮಿಯ ಕೊಲೆ ಮಾಡಿದ್ದಾರೆ. ಕೊಂದ ಬಳಿಕ ಕಾರಿನಲ್ಲಿ ಪರಾರಿಯಾಗಿದ್ದಾರೆ.

ಹೊಸೂರಿನ ಶಾಂತಿನಗರ ನಿವಾಸಿ ಕೇಶವನ್(45) ಕೊಲೆಯಾದ ದುರ್ದೈವಿ. ಈತ ರಿಯಲ್ ಎಸ್ಟೇಟ್, ಫೈನಾನ್ಸ್ ಮತ್ತು ಇಟ್ಟಿಗೆ ವ್ಯಾಪಾರ ಮಾಡುತ್ತಿದ್ದ. ನಿನ್ನೆ ಕೆ.ಮಲ್ಲಸಂದ್ರ ಗ್ರಾಮದ ಬಳಿ ಬೈಕ್​ನಲ್ಲಿ ಸಾಗುತ್ತಿದ್ದ ವೇಳೆ ಹಿಂಬದಿಯಿಂದ ಬೈಕ್​ಗೆ ಡಿಕ್ಕಿ ಹೊಡೆದು ಕೇಶವನ್​ನನ್ನು ಕೆಳಗೆ ಬೀಳಿಸಿದ್ದಾರೆ. ಬಳಿಕ ಕಾರಿನಿಂದ ಇಳಿದ ಹಂತಕರು ಕೆಳಗೆ ಬಿದ್ದಿದ್ದ ಕೇಶವನ್ ಮೇಲೆ ಅಟ್ಯಾಕ್ ಮಾಡಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳಲು ಓಡಿದರು ಹಿಂಬಾಲಿಸಿ ತಲೆ, ಕುತ್ತಿಗೆ ಮತ್ತು ಹೊಟ್ಟೆ ಭಾಗಕ್ಕೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಕೇಶವನ್ ಪ್ರಾಣ ಬಿಟ್ಟಿದ್ದಾರೆ. ಸ್ಥಳಕ್ಕೆ ಥಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತನ ಶವ ಕೃಷ್ಣಗಿರಿ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:56 pm, Thu, 22 June 23