ಬೆಂಗಳೂರಿನಲ್ಲಿ ನಾಡ ಪಿಸ್ತೂಲ್ ಮಾರಾಟಕ್ಕೆ ಯತ್ನಿಸುತ್ತಿದ್ದ ರೌಡಿಶೀಟರ್​ ಅರೆಸ್ಟ್​

ಬೆಂಗಳೂರಿನ ಸಿಸಿಬಿ ಪೊಲೀಸರು ನಾಡಪಿಸ್ತೂಲು ಮಾರಾಟ ಮಾಡುತ್ತಿದ್ದ ರೌಡಿಶೀಟರ್ ಸಮೀರ್‌ನನ್ನು ಬಂಧಿಸಿದ್ದಾರೆ. ಅವನಿಂದ ಎರಡು ನಾಡಪಿಸ್ತೂಲುಗಳನ್ನು ವಶಪಡಿಸಿಕೊಳ್ಳಲಾಗಿದೆ. ದೆಹಲಿಯಿಂದ ಕಡಿಮೆ ಬೆಲೆಗೆ ಪಿಸ್ತೂಲುಗಳನ್ನು ಖರೀದಿಸಿ, ಬೆಂಗಳೂರಿನಲ್ಲಿ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ದೇವಸ್ಥಾನದಿಂದ ಚಿನ್ನದ ತಾಳಿ ಕಳವು ಮಾಡಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.

ಬೆಂಗಳೂರಿನಲ್ಲಿ ನಾಡ ಪಿಸ್ತೂಲ್ ಮಾರಾಟಕ್ಕೆ ಯತ್ನಿಸುತ್ತಿದ್ದ ರೌಡಿಶೀಟರ್​ ಅರೆಸ್ಟ್​
ರೌಡಿಶೀಟರ್​ ಸಮೀರ್

Updated on: May 24, 2025 | 6:47 PM

ಬೆಂಗಳೂರು, ಮೇ 24: ಬೆಂಗಳೂರಿನಲ್ಲಿ (Bengaluru) ನಾಡ ಪಿಸ್ತೂಲ್ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು (CCB Police) ಬಂಧಿಸಿದ್ದಾರೆ. ರೌಡಿಶೀಟರ್ ಸಮೀರ್​ ​ಬಂಧಿತ. ಬಂಧಿತ ಸಮೀರ್​ ಕೆ.ಜಿ.ಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆಗಿದ್ದು, ದೆಹಲಿಯಲ್ಲಿ ಕಡಿಮೆ ಬೆಲೆಗೆ ನಾಡ ಪಿಸ್ತೂಲ್ ಖರೀದಿಸುತ್ತಿದ್ದನು.

ನಂತರ, ಬೆಂಗಳೂರಿನಲ್ಲಿ ಹೆಚ್ಚು ಹಣಕ್ಕೆ ಮಾರಾಟ ಮಾಡುತ್ತಿದ್ದನು. ಈ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಸಿಸಿಬಿ ಪೊಲೀಸರು ರೌಡಿಶೀಟರ್ ಸಮೀರ್​ನನ್ನು ಬಂಧಿಸಿ, ಎರಡು ನಾಡಪಿಸ್ತೂಲ್​ಗಳನ್ನು ವಶಕ್ಕೆ ಪಡೆದಿದ್ದಾರೆ. ಸಿಸಿಬಿ ಪೊಲೀಸರು ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದ ವ್ಯಕ್ತಿ ಬಂಧನ

ಚಾಮರಾಜನಗರ: ದೇವರ ತಾಳಿಯನ್ನೇ ಕದ್ದಿದ್ದ ಕಳ್ಳನನ್ನು ರಾಮಾಪುರ ಪೊಲೀಸರು ಬಂಧಿಸಿದ್ದಾರೆ. ಹನೂರು ತಾಲೂಕಿನ ಪಳನಿ ಮೇಡು ಗ್ರಾಮದ ನಿವಾಸಿ ಮುರುಗೇಶ್ (42) ಬಂಧಿತ. ಹನೂರು ತಾಲೂಕಿನ ಚೆಂಗದಾರಹಳ್ಳಿ ಗ್ರಾಮದ ದೇವತೆ ರೋಡ್ ಮಾರಮ್ಮ ದೇವಸ್ಥಾನಕ್ಕೆ ಭಕ್ತನಂತೆ ಬಂದ ಆರೋಪಿ ಮುರಗೇಶ್​ ಮೊದಲು ದೇವರ ದರ್ಶನ ಪಡೆದ್ದಾನೆ.

ಇದನ್ನೂ ಓದಿ
ಬೆಳಗಾವಿ: ಮಕ್ಕಳಾಗಲಿಲ್ಲವೆಂದು ಸೊಸೆಯನ್ನ ಕೊಂದ ಅತ್ತೆ-ಮಾವ
ಮತ್ತು ಬರಿಸಿ ಬೆಳಗಾವಿಯ ಮೆಡಿಕಲ್​​ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ
ಮೆಟ್ರೋದಲ್ಲಿ ಯುವತಿಯರ ವೀಡಿಯೋ ರೆಕಾರ್ಡ್ ಮಾಡಿ ವಿಕೃತಿ ಮರೆದಿದ್ದವ ಅರೆಸ್ಟ್
ಪತಿಯನ್ನೇ ಕೊಂದು ಪಕ್ಕದ ಮನೆಯವನ ಮೇಲೆ ಆರೋಪ ಹಾಕಿದ್ದ ಮಹಿಳೆ ಅರೆಸ್ಟ್

ನಂತರ, ದೇವಸ್ಥಾನವೆಲ್ಲ ಹುಡುಕಿದರೂ ಏನು ಸಿಗಲಿಲ್ಲ. ಕೊನೆಗೆ ದೇವತೆಯ ಮೈಮೇಲಿದ್ದ 10 ಗ್ರಾಂ ತೂಕದ ಚಿನ್ನದ ತಾಳಿಯನ್ನೇ ಕದ್ದಿದ್ದಾನೆ. ದೇವಸ್ಥಾನದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮುರುಗೇಶ್​ನ ಕಳ್ಳತನ ಮಾಡಿರುವುದು ಕಂಡಿದೆ. ನಂತರ ಗ್ರಾಮಸ್ಥರು ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ.

ಬಳಿಕ ಪೊಲೀಸರು ಹುಡುಕಾಟ ನಡೆಸಿದಾಗ, ಆರೋಪಿ ಮುರುಗೇಶ್​ ಕದ್ದ ತಾಳಿಯನ್ನು ಕೌದಳ್ಳಿಯಲ್ಲಿ ಮಾರಾಟ ಮಾಡುವುತ್ತಿರುವುದು ತಿಳಿದಿದೆ. ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು ಆರೋಪಿ ಮುರುಗೇಶ್​​ನನ್ನು ಬಂಧಿಸಿದ್ದಾರೆ.

ಇ ಸ್ವತ್ತು ದಾಖಲೆಗಳನ್ನು ತಿದ್ದುಪಡಿ ಮಾಡಿದವರು ಅಂದರ್​

ರಾಮನಗರ: ಇ ಸ್ವತ್ತು ದಾಖಲೆಗಳ ತಿದ್ದುಪಡಿ ಮಾಡಿದ್ದ ಮೂವರು ಆರೋಪಿಗಳನ್ನು ರಾಮನಗರ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶರತ್ (30), ನದೀಮ್ (38), ದೀಪಕ್ (27) ಬಂಧಿತರು. ಆರೋಪಿಗಳುಸರ್ಕಾರದ ಇ ಸ್ವತ್ತು ಸಾಫ್ಟ್‌ವೇರ್​ ಅನ್ನು ಹ್ಯಾಕ್​ ಮಾಡಿ, ಲೋಪದೋಷವುಳ್ಳ 500ಕ್ಕೂ ಹೆಚ್ಚು ದಾಖಲಾತಿಗಳನ್ನು ಅಕ್ರಮವಾಗಿ ತಿದ್ದುಪಡಿ ಮಾಡಿದ್ದಾರೆ.

ಮಾಗಡಿ ತಾಲೂಕಿನ ನಾರಸಂದ್ರ ಗ್ರಾಪಂ ಮಾಜಿ ನೌಕರ ಶರತ್ ಎಂಬಾತ ಈ ಪ್ರಕರಣ ಮಾಸ್ಟರ್ ಮೈಂಡ್ ಆಗಿದ್ದಾನೆ. ಆರೋಪಿ ಶರತ್ ಇ ಸ್ವತ್ತು ಸಾಫ್ಟ್‌ವೇರ್​ನ ಲೋಪದೋಷ ಅರಿತಿದ್ದನು. ನಕಲಿ ಪಾಸ್ವರ್ಡ್ ಹಾಕಿ ಸಾಫ್ಟ್‌ವೇರ್ ಹ್ಯಾಕ್ ಮಾಡಿದ್ದನು. ಆರೋಪಿ ನದೀಮ್ ಕಂಪ್ಯೂಟರ್ ರಿಪೇರಿ ಮಾಡುವ ಕೆಲಸ ಮಾಡುತ್ತಿದ್ದನು. ನದೀಮ್​ ಹಾಗೂ ದೀಪಕ್ ಜೊತೆಗೂಡಿ ಖಾತೆಗಳ ಅಕ್ರಮವಾಗಿ ತಿದ್ದುಪಡಿ ಮಾಡುತ್ತಿದ್ದರು.

ರಾಮನಗರ, ಬೆಂಗಳೂರು, ಹಾಸನ, ತುಮಕೂರು ಜಿಲ್ಲೆಗೆ ಸೇರಿದ ಹಲವು ಗ್ರಾಪಂಗಳ ದಾಖಲೆ ತಿದ್ದುಪಡಿ ಮಾಡಿದ್ದಾರೆ. ಖಾತೆಗೆ ಯೋಗ್ಯವಲ್ಲದ ದಾಖಲೆಗಳು, ಖಾತೆ ಬದಲಾವಣೆ, ನಕಾಶೆ, ಚೆಕ್ ಬಂಧಿಗಳನ್ನು ಅಕ್ರಮವಾಗಿ ತಿದ್ದುಪಡಿ ಮಾಡುತ್ತಿದ್ದರು. ಖದೀಮರ ಬಳಿ ಅಕ್ರಮ ತಿದ್ದುಪಡಿ ಮಾಡಿಸಿ ಬಳಿಕ ಸಕ್ರಮಕ್ಕಾಗಿ ವ್ಯಕ್ತಿಯೊಬ್ಬರುಗ್ರಾ.ಪಂಗೆ ಅರ್ಜಿ ಸಲ್ಲಿದ್ದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಪ್ರಿಯಕರನ ಜೊತೆ ಓಡಿ ಹೋದ ಮಗಳು, ಮನನೊಂದು ಆತ್ಮಹತ್ಯೆಗೆ ಶರಣಾದ ಕುಟುಂಬಸ್ಥರು

ಈ‌ ಬಗ್ಗೆ ಮಾಗಡಿ ತಾಲೂಕಿನ ನಾರಸಂದ್ರ ಗ್ರಾಮ ಪಂಚಾಯತ್​​ ಪಿಡಿಓ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ತನಿಖೆ ನಡೆಸಿ ಆರೋಪಿಗಳನ್ನ ಬಂಧಿಸುವಲ್ಲಿ ರಾಮನಗರ ಸೆನ್ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳು ಭಾಗಿಯಾಗಿದ್ದರಾ? ಎಂಬುವುದರ ಬಗ್ಗೆ ತನಿಖೆ ಮುಂದುವರೆದಿದೆ.

ವರದಿ: ಪ್ರದೀಪ್​ ಚಿಕ್ಕಾಟೆ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:47 pm, Sat, 24 May 25