ಪ್ರೀತಿ ಹೆಸರಲ್ಲಿ ಯುವತಿಯ ಒಡವೆ ಲಪಟಾಯಿಸಿದ ಆರೋಪ; ವ್ಯಕ್ತಿ ಬಂಧನ, 8 ಲಕ್ಷ ಮೌಲ್ಯದ ಒಡವೆ ವಶ

| Updated By: guruganesh bhat

Updated on: Aug 26, 2021 | 4:10 PM

ಮನೆಯಲ್ಲಿ ಚಿನ್ನಾಭರಣ ನಾಪತ್ತೆಯಾಗುತ್ತಿರುವುದರಿಂದ ಚಿಂತೆಗೀಡಾದ ಯುವತಿಯ ಪೋಷಕರು ಮನೆಗಳ್ಳತನ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.

ಪ್ರೀತಿ ಹೆಸರಲ್ಲಿ ಯುವತಿಯ ಒಡವೆ ಲಪಟಾಯಿಸಿದ ಆರೋಪ; ವ್ಯಕ್ತಿ ಬಂಧನ, 8 ಲಕ್ಷ ಮೌಲ್ಯದ ಒಡವೆ ವಶ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಯುವತಿಯೋರ್ವಳನ್ನು ಪರಿಚಯ ಮಾಡಿಕೊಂಡು ಪ್ರೀತಿಯ ಹೆಸರಲ್ಲಿ ಆಭರಣಗಳನ್ನು ಲಪಟಾಯಿಸಿದ ಆರೋಪದಡಿ ಬೆಂಗಳೂರಿನ ಗಂಗಮ್ಮನಗುಡಿ ಪೊಲೀಸರು ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ. ಆರೋಪಿ ಇನ್ಸ್ಟಾಗ್ರಾಮ್ನಲ್ಲಿ ಯುವತಿಯೋರ್ವಳನ್ನು ಪರಿಚಯ ಮಾಡಿಕೊಂಡಿದ್ದ. ಆಕೆಯೊಂದಿಗೆ ಸುತ್ತಾಡುತ್ತಿದ್ದ. ಪ್ರೀತಿ ಮಾಡುವುದಾಗಿ ನಂಬಿಸಿ ಕಷ್ಟ ಎಂದು ಹೇಳಿ ಯುವತಿ ಬಳಿಯಿಂದ ಚಿನ್ನದ ಸರ ಪಡೆದುಕೊಂಡಿದ್ದ. ಗಿರವಿ ಇಟ್ಟು ಬಂದ ಹಣವನ್ನು ಪಡೆದು ಮೋಜು ಮಾಡಿದ್ದ. ಬಳಿಕವೂ ಯುವತಿ ಬಳಿ ಹಂತಹಂತವಾಗಿ ಚಿನ್ನಾಭರಣಗಳನ್ನು ಪಡೆದುಕೊಂಡಿದ್ದ. ಒಂದು ದಿನ ಮನೆಯಲ್ಲಿ ಯಾರು ಇಲ್ಲದ ವೇಳೆ ಬಂದು ಮನೆಯಲ್ಲಿದ್ದ ಒಡವೆಗಳನ್ನು ಸಹ ಮೋಸದಿಂದ ಪಡೆದುಕೊಂಡಿದ್ದ ಎಂಬ ಆರೋಪ ಬಂಧಿತ ವ್ಯಕ್ತಿಯ ಮೇಲೆ ಕೇಳಿಬಂದಿದೆ. ಬಂಧಿತನಿಂದ 8 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಮನೆಯಲ್ಲಿ ಚಿನ್ನಾಭರಣ ನಾಪತ್ತೆಯಾಗುತ್ತಿರುವುದರಿಂದ ಚಿಂತೆಗೀಡಾದ ಯುವತಿಯ ಪೋಷಕರು ಮನೆಗಳ್ಳತನ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆಗಲೆ ತಮ್ಮ ಮಗಳಿಂದ ಆಭರಣ ಮತ್ತು ಒಡವೆಗಳನ್ನು ವ್ಯಕ್ತಿಯೋರ್ವ ಪಡೆದುಕೊಳ್ಳುತ್ತಿರುವುದು ಬೆಳಕಿಗೆ ಬಂದಿತ್ತು. ಸದ್ಯ ಮನೆಗಳ್ಳತನ ಆರೋಪದಡಿ ದೂರು ದಾಖಲಾಗಿದೆ.

ಬಂಧಿತ ಆರೋಪಿ ತಾನು ಒಡವೆಗಳನ್ನು ತೆಗೆದುಕೊಂಡಿರುವುದನ್ನು ಪೋಷಕರಿಗೆ ತಿಳಿಸಿದರೆ ಇನ್ನಷ್ಟು ತೊಂದರೆ ನೀಡುವುದಾಗಿ ಯುವತಿಯನ್ನು ಬೆದರಿಸಿದ್ದ ಎಂದು ಸಹ ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿರುವ ಗಂಗಮ್ಮನಗುಡಿ ಪೊಲೀಸರು ಬಂಧಿತನಿಂದ 8 ಲಕ್ಷ ಮೌಲ್ಯದ ಚಿನ್ನದ ಸರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: 

ಕಾಂಗ್ರೆಸ್​ನವರು ನನ್ನ ಮೇಲೆ ರೇಪ್ ಮಾಡಲು ಯತ್ನಿಸುತ್ತಿದ್ದಾರೆ: ಗೃಹ ಸಚಿವ ಆರಗ ಜ್ಞಾನೇಂದ್ರ ವಿವಾದಾತ್ಮಕ ಹೇಳಿಕೆ

Afghanistan Crisis: 6 ವರ್ಷ ಅಮೆರಿಕ ಸೇನೆಯ ಬಂಧಿಯಾಗಿದ್ದಾತ ಅಫ್ಘಾನಿಸ್ತಾನದ ಮುಂದಿನ ರಕ್ಷಣಾ ಸಚಿವ!

(Bengaluru Crime Allegations of laundering a house in the name of love The man was arrested and detained for Rs 8 lakh)

Published On - 4:07 pm, Thu, 26 August 21