Bengaluru Crime ಲೆಕ್ಚರರ್ ಮಗನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ, ಯುವಕ ಅರೆಸ್ಟ್​

Bengaluru Crime ಲೆಕ್ಚರರ್ ಮಗನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ ಹಿನ್ನೆಲೆಯಲ್ಲಿ ಪೊಲೀಸರು ಯುವಕನನ್ನು ಬಂಧಿಸಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

Bengaluru Crime ಲೆಕ್ಚರರ್ ಮಗನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ, ಯುವಕ ಅರೆಸ್ಟ್​
ಬಂಧಿತ ಆರೋಪಿ ಚಂದನ್
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on: Feb 03, 2021 | 1:35 PM

ಬೆಂಗಳೂರು: ಲೆಕ್ಚರರ್ ಮಗನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಯುವಕನನ್ನು ಬಂಧಿಸಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ವಿದ್ಯಾರಣ್ಯಪುರ ಪೊಲೀಸರು ಆರೋಪಿ ಚಂದನ್ ಎಂಬಾತನನ್ನು ಬಂಧಿಸಿದ್ದಾರೆ.

ಆರೋಪಿ ಚಂದನ್ ತಾಯಿ ಪ್ರತಿಷ್ಠಿತ ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ದಾರೆ. ವಿದ್ಯಾರ್ಥಿಗಳಿಗೆ ಜೀವನ ಪಾಠ ಕೇಳಿಕೊಟ್ಟು ಅವರಿಗೆ ಮಾರ್ಗ ದರ್ಶನ ನೀಡಿ ಜ್ಞಾನದ ಬೆಳಕನ್ನು ಹಚ್ಚುವ ಕಾರ್ಯವನ್ನು ಲೆಕ್ಚರರ್ಸ್ ಮಾಡ್ತಾರೆ. ಆದ್ರೆ ಇಲ್ಲಿ ಅಂತಹ ಉನ್ನತ, ಗೌರವಯುತ ಹುದ್ದೆಯಲ್ಲಿರುವ ಲೆಕ್ಚರರ್​ನ ಮಗನ ವಿರುದ್ಧ ಆರೋಪ ಕೇಳಿ ಬಂದಿದೆ. ತನ್ನ ತಾಯಿ ಪಾಠ ಮಾಡುವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಕೊಟ್ಟ ಆರೋಪಕ್ಕೆ ಯುವಕ ಚಂದನ್ ಅರೆಸ್ಟ್ ಆಗಿದ್ದಾನೆ.

ಈ ಹಿಂದೆಯೇ ಚಂದನ್, ವಿದ್ಯಾರ್ಥಿನಿಯನ್ನು ಪರಿಚಯ ಮಾಡಿಕೊಂಡಿದ್ದ. ಒಮ್ಮೆ ವಿದ್ಯಾರ್ಥಿನಿಯು ಲೆಕ್ಚರರ್ ಭೇಟಿ ಮಾಡಲೆಂದು ಮನೆಗೆ ಬಂದಿದ್ದರು. ಈ ವೇಳೆ ಚಂದನ್ ಸ್ನೇಹ, ಪ್ರೀತಿ ಹೆಸರಿನಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಪ್ರಕರಣ ಸಂಬಂಧ ಚಂದನ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಮಂಡ್ಯ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡ್ತಿದ್ದ ಪ್ರೌಢಶಾಲಾ ಶಿಕ್ಷಕ ಅರೆಸ್ಟ್