ಬೆಂಗಳೂರು: ಮೂರು ಕೋಟಿ ಮೌಲ್ಯದ ನಿಷೇಧಿತ ಇ-ಸಿಗರೇಟ್ ಪತ್ತೆ, ಆರೋಪಿಯ ಬಂಧನ

| Updated By: Ganapathi Sharma

Updated on: Jan 30, 2024 | 11:48 AM

ಇ-ಸಿಗರೇಟ್ ವಶಪಡಿಸಿದ ಪ್ರಕರಣದಲ್ಲಿ ಬಂಧಿತ ಆರೋಪಿಯನ್ನು ಕೇರಳ ಮೂಲದ ಶೋಹೇಬ್ ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನ ಹಲವಾರು ಸ್ಮೋಕಿ ಜೋಜ್ ಹಾಗೂ ರೀಟೆಲ್ ಮಾರಾಟ ಮಾಡುವವರಿಗೆ ಇ-ಸಿಗರೇಟ್​​ ಅನ್ನು ನೀಡುತ್ತಿದ್ದ ಎನ್ನಲಾಗಿದೆ.

ಬೆಂಗಳೂರು: ಮೂರು ಕೋಟಿ ಮೌಲ್ಯದ ನಿಷೇಧಿತ ಇ-ಸಿಗರೇಟ್ ಪತ್ತೆ, ಆರೋಪಿಯ ಬಂಧನ
ಧೂಮಪಾನ ಆರೋಗ್ಯಕ್ಕೆ ಹಾನಿಕರ
Follow us on

ಬೆಂಗಳೂರು, ಜನವರಿ 30: ಕೇಂದ್ರ ಸರ್ಕಾರ ನಿಷೇಧಿಸಿರುವ, ಸುಮಾರು ಮೂರು ಕೋಟಿ ರೂಪಾಯಿ ಮೌಲ್ಯದ ಇ-ಸಿಗರೇಟ್ (E-cigarette) ಅನ್ನು ಸಿಸಿಬಿ (CCB Police) ನಾರ್ಕೋಟಿಕ್ಸ್ ವಿಭಾಗದ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಇ-ಸಿಗರೇಟ್​ಗಳನ್ನು ದುಬೈಯಿಂದ ಬೆಂಗಳೂರಿಗೆ ತರಿಸಲಾಗಿತ್ತು ಎಂಬುದು ತಿಳಿದುಬಂದಿದೆ. ಒಂದು ಸಿಗರೇಟ್​​ಗೆ ಐದರಿಂದ ಆರು ಸಾವಿರ ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು.

ಕೊರಿಯರ್ ಮೂಲಕ ಬರುತ್ತಿತ್ತು ಇ-ಸಿಗರೇಟ್

ಇ-ಸಿಗರೇಟ್ ಅನ್ನು ಬ್ಲೂ ಡಾರ್ಟ್ ಕೊರಿಯರ್ ಮೂಲಕ ದುಬೈಯಿಂದ ದೆಹಲಿಗೆ ತೆರಿಸಿ ಅಲ್ಲಿಂದ ಬೆಂಗಳೂರಿಗೆ ತರಿಸಲಾಗಿತ್ತು. ಬೆಂಗಳೂರಿನ ಸುದ್ದಗುಂಟೆ ಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಇರಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತ ಆರೋಪಿಯನ್ನು ಕೇರಳ ಮೂಲದ ಶೋಹೇಬ್ ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನ ಹಲವಾರು ಸ್ಮೋಕಿ ಜೋಜ್ ಹಾಗೂ ರೀಟೆಲ್ ಮಾರಾಟ ಮಾಡುವವರಿಗೆ ಇ-ಸಿಗರೇಟ್​​ ಅನ್ನು ನೀಡುತ್ತಿದ್ದ. ಅನ್​ಲೈನ್ ಮೂಲಕ ಆರ್ಡರ್ ಮಾಡಿಸಿಕೊಂಡು ಪೋರ್ಟರ್ ಮತ್ತು ಡ್ನಜೋ ಮೂಲಕ ಪೂರೈಕೆ ಮಾಡುತ್ತಿದ್ದ ಎಂದು ಅವರು ಮಾಹಿತಿ ನೀಡಿದ್ದಾರೆ.

ಸಿಸಿಬಿ ಪೊಲೀಸರು ಅರೋಪಿಯನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

7 ಮಂದಿ ಡ್ರಗ್ ಪೆಡ್ಲರ್​ಗಳ ಬಂಧ

ಬೆಂಗಳೂರಿನಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ಸಿಸಿಬಿ ಪೊಲೀಸರು ಏಳು ಜನ ಡ್ರಗ್ ಪೆಡ್ಲರ್​ಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. 219 ಎಕ್ಸೈಸಿ ಪಿಲ್ಸ್, 505 ಗ್ರಾಂ ಎಂಡಿಎಂಎ ಕ್ರಿಸ್ಟಲ್ 130 ಗ್ರಾಂ ತೂಕದ ಚರಸ್, 100.88 ಗ್ರಾಂ ಕೊಕೇನ್ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ವಿಮಾನ ಹೊರಡುವುದಕ್ಕೂ ಕೆಲವೇ ಕ್ಷಣ ಮುನ್ನ ಬ್ಯಾಗ್​​ನಲ್ಲಿ ಬಾಂಬ್​ ಇದೆ ಎಂದ ವ್ಯಕ್ತಿ!

ಬೆಂಗಳೂರಿನ ಪುಲಕೇಶಿನಗರ, ಬಾಣಸವಾಡಿ, ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರೋಪಿಗಳು ಡ್ರಗ್ಸ್ ಮಾರಾಟ ಮಾಡುತ್ತಿದ್ದರು.

ಬೆಳಗಾವಿಯಲ್ಲಿ ಅಬಕಾರಿ ಅಧಿಕಾರಿಗಳಿಂದ ಲಕ್ಷಾಂತರ ರೂ. ಮೌಲ್ಯದ ಮದ್ಯ ನಾಶ

ಬೆಳಗಾವಿಯ ರಾಮತೀರ್ಥ ನಗರದ ಹೊರ ವಲಯದಲ್ಲಿ ಅಬಕಾರಿ ಅಧಿಕಾರಿಗಳು ಲಕ್ಷಾಂತರ ರೂ. ಮೌಲ್ಯದ ಮದ್ಯ ನಾಶ ಮಾಡಿದ್ದಾರೆ. ಜೆಸಿಬಿ ಹಾಯಿಸಿ ಮದ್ಯವನ್ನು ನಾಶ ಮಾಡಲಾಗಿದೆ. ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಮತ್ತು ನಕಲಿ ಮದ್ಯ, ಗೋವಾ ಮದ್ಯಗಳನ್ನು ನಾಶ ಮಾಡಲಾಗಿದೆ.

ಅಬಕಾರಿ ಉಪ ಆಯುಕ್ತೆ ವನಜಾಕ್ಷಿ ಎಂ. ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು ಕಳ್ಳ ಬಟ್ಟಿ, ಬಿಯರ್, ಬ್ರ್ಯಾಂಡೆಡ್ ಮದ್ಯ ಎಲ್ಲವನ್ನೂ ನಾಶಪಡಿಸಲಾಗಿದೆ. ಒಟ್ಟು 89 ಲಕ್ಷ 60 ಸಾವಿರ ಮೌಲ್ಯದ ಮದ್ಯ ನಾಶ ಮಾಡಲಾಗಿದೆ. ಒಟ್ಟು 101 ಪ್ರಕರಣದಲ್ಲಿ ಈ ಮದ್ಯ ಜಪ್ತಿ ಮಾಡಿಕೊಳ್ಳಲಾಗಿತ್ತು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:46 am, Tue, 30 January 24