ಬೆಂಗಳೂರು: ಖಾಸಗಿ ಬಸ್ ಚಾಲಕನ ನಿರ್ಲಕ್ಷ್ಯ: ಸೈಕಲ್ ಸವಾರ ಸಾವು

ಕುಮಾರಸ್ವಾಮಿ ಲೇಔಟ್​ನಿಂದ ಕತ್ರಿಗುಪ್ಪೆಗೆ ಬರುತ್ತಿದ್ದ ಖಾಸಗಿ ಬಸ್​ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಬಲಿಯಾಗಿರುವಂತಹ ಘಟನೆ ಬೆಂಗಳೂರಿನ ಪುನೀತ್ ರಾಜ್​ಕುಮಾರ್ ರಸ್ತೆಯ ಅಶ್ವಿನಿ ಅಪಾರ್ಟ್​ಮೆಂಟ್ ಬಳಿ ನಡೆದಿದೆ. ಖಾಸಗಿ ಬಸ್ ಚಾಲಕನ ಅಜಾಗರೂಕತೆಯೇ ದರಂತಕ್ಕೆ ಕಾರಣ ಎನ್ನಲಾಗುತ್ತಿದೆ.

ಬೆಂಗಳೂರು: ಖಾಸಗಿ ಬಸ್ ಚಾಲಕನ ನಿರ್ಲಕ್ಷ್ಯ: ಸೈಕಲ್ ಸವಾರ ಸಾವು
ಪ್ರಾತಿನಿಧಿಕ ಚಿತ್ರ
Updated By: ಗಂಗಾಧರ​ ಬ. ಸಾಬೋಜಿ

Updated on: Aug 17, 2023 | 11:06 PM

ಬೆಂಗಳೂರು, ಆಗಸ್ಟ್​ 17: ಖಾಸಗಿ ಬಸ್ (private bus) ಚಾಲಕನ ನಿರ್ಲಕ್ಷ್ಯಕ್ಕೆ ಸೈಕಲ್ ಸವಾರ ಬಲಿಯಾಗಿರುವಂತಹ ಘಟನೆ ಪುನೀತ್ ರಾಜ್​ಕುಮಾರ್ ರಸ್ತೆಯ ಅಶ್ವಿನಿ ಅಪಾರ್ಟ್​ಮೆಂಟ್ ಬಳಿ ನಡೆದಿದೆ. ಕೃಷ್ಣಾ ರೆಡ್ಡಿ ಮೃತ ಸೈಕಲ್ ಸವಾರ. ಕುಮಾರಸ್ವಾಮಿ ಲೇಔಟ್​ನಿಂದ ಕತ್ರಿಗುಪ್ಪೆಗೆ ಬರುತ್ತಿದ್ದ ಖಾಸಗಿ ಬಸ್​ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ. ಅಪಘಾತದ ವೇಳೆ ಕೃಷ್ಣಾ ರೆಡ್ಡಿ ತಲೆ, ಮುಖಕ್ಕೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಖಾಸಗಿ ಬಸ್ ಚಾಲಕನ ಅಜಾಗರೂಕತೆಯಿಂದ  ದರಂತ ಸಂಭವಿಸಿದ್ದು, ಬನಶಂಕರಿ ಸಂಚಾರಿ ಠಾಣೆ ಪೊಲೀಸರು ಖಾಸಗಿ ಬಸ್ ವಶಕ್ಕೆ ಪಡೆದಿದ್ದಾರೆ.

ಸರ್ಕಾರಿ ಬಸ್ ಬ್ರೇಕ್ ಫೇಲಾಗಿ ಡಿವೈಡರ್​​ಗೆ ಡಿಕ್ಕಿ, ಜಾನುವಾರು ಸಾವು

ಯಾದಗಿರಿ: ಸರ್ಕಾರಿ‌ ಬಸ್ ಬ್ರೇಕ್ ಫೇಲ್​ ಆದ ಪರಿಣಾಮ ಇಬ್ಬರು ಪ್ರಯಾಣಿಕರಿಗೆ ಗಂಭೀರ ಗಾಯ‌‌ಗಳಾಗಿದ್ದು, ರಸ್ತೆ ಬದಿಯಲ್ಲಿದ್ದ ಒಂದು ಜಾನುವಾರು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಸುರಪುರ ಪಟ್ಟಣದ ಕುಂಬಾರಪೇಟೆ ಬಳಿ ನಡೆದಿದೆ.

ಇದನ್ನೂ ಓದಿ: ಬೆಳಗಾವಿ: ಅತ್ತಿಗೆ ಮೇಲೆ ಕಣ್ಣು ಹಾಕಿದ್ದ ಜೀವದ ಗೆಳಯನನ್ನು ಪರಲೋಕಕ್ಕೆ ಕಳುಹಿಸಿದ

ಡಿವೈಡರ್​ಗೆ ಡಿಕ್ಕಿಯಾಗಿ ನಂತರ ಜಾನುವಾರು ಹಿಂಡಿಗೆ ಬಸ್​ ಡಿಕ್ಕಿ ಹೊಡೆದಿದೆ. ಗಾಯಾಳು ಪ್ರಯಾಣಿಕರನ್ನು ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕಾರಿಗೆ ಬೈಕ್ ಡಿಕ್ಕಿ, ಕೆಳಗೆಬಿದ್ದ ಸವಾರನ ಮೇಲೆ ಹರಿದ BMTC ಬಸ್​

ನೆಲಮಂಗಲ: ಕಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಕೆಳಗೆಬಿದ್ದ ಸವಾರನ ಮೇಲೆ ಬಿಎಂಟಿಸಿ ಬಸ್​ ಹರಿದಿರುವಂತಹ ಘಟನೆ ​ಬೆಂಗಳೂರಿನ ಟಿ.ದಾಸರಹಳ್ಳಿಯಲ್ಲಿ ನಡೆದಿದೆ. ಮೃತ ಬೈಕ್​ ಸವಾರನ ಗುರುತು ಪತ್ತೆ ಆಗಿಲ್ಲ. ಘಟನೆ ನಂತರ ಬಿಎಂಟಿಸಿ ಬಸ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪೀಣ್ಯ ಸಂಚಾರಿ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಹೆಲ್ಮೆಟ್ ಕಳ್ಳತನ, ಹುಡುಕಿಕೊಡಿ ಎಂದು ಪೊಲೀಸ್ ಠಾಣೆಗೆ ದೂರು

ಮತ್ತೊಂದು ಪ್ರಕರಣದಲ್ಲಿ ಶಾಲಾ ಬಸ್ ಡಿಕ್ಕಿ ಹೊಡೆದಿದ್ದು, ಬೈಕ್​ನಲ್ಲಿ ತೆರಳುತ್ತಿದ್ದ ಪತ್ನಿ ಮೃತಪಟ್ಟಿದ್ದು, ಪತಿ ಪಾರಾಗಿರುವಂತಹ ಘಟನೆ ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಗೊಲ್ಲರಹಳ್ಳಿ ಬಳಿ ನಡೆದಿದೆ. ಮಾಗಡಿ ರಸ್ತೆಯಲ್ಲಿ ಕಡಬಗೆರೆ ನಿವಾಸಿ ಸುಮಂಗಲ(58) ಮೃತ ಮಹಿಳೆ. ರಸ್ತೆ ಕಾಮಗಾರಿ ವಿಳಂಬ ಹಿನ್ನೆಲೆಯಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗಿವೆ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:29 pm, Thu, 17 August 23