AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ: ಅತ್ತಿಗೆ ಮೇಲೆ ಕಣ್ಣು ಹಾಕಿದ್ದ ಜೀವದ ಗೆಳಯನನ್ನು ಪರಲೋಕಕ್ಕೆ ಕಳುಹಿಸಿದ

ಅವರಿಬ್ಬರೂ ಸ್ನೇಹಿತರು, ಜೊತೆಗೆ ಎದುರು ಬದುರು ಮನೆಯಲ್ಲಿದ್ದವರು. ಬರ್ತಡೆ ಪಾರ್ಟಿಗೆಂದು ಕರೆದುಕೊಂಡು ಹೋಗಿ ಜೀವಕ್ಕೆ ಜೀವ ಅಂತಿದ್ದ ಗೆಳೆಯನ ಕಥೆಯನ್ನೇ ಮುಗಿಸಿದ್ದಾನೆ. ಇತ್ತ ಮನೆ ನಡೆಸುತ್ತಿದ್ದ ಮಗನನ್ನು ಕಳೆದುಕೊಂಡು ಕುಟುಂಬಸ್ಥರು ಗೋಳಾಡುತ್ತಿದ್ದರೆ, ಅತ್ತ ಗೆಳಯನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಅದ್ಯಾವ ಕಾರಣಕ್ಕೆ ಗೆಳೆಯರ ನಡುವೆ ಜಗಳವಾಯ್ತು? ಜೀವದ ಗೆಳೆಯನನ್ನೇ ಕೊಂದ್ದಿದ್ದು ಯಾಕೆ ಅಂತೀರಾ? ಈ ಸ್ಟೋರಿ ನೋಡಿ.

ಬೆಳಗಾವಿ: ಅತ್ತಿಗೆ ಮೇಲೆ ಕಣ್ಣು ಹಾಕಿದ್ದ ಜೀವದ ಗೆಳಯನನ್ನು ಪರಲೋಕಕ್ಕೆ ಕಳುಹಿಸಿದ
ಪ್ರಾತಿನಿಧಿಕ ಚಿತ್ರ
Follow us
Sahadev Mane
| Updated By: ಕಿರಣ್ ಹನುಮಂತ್​ ಮಾದಾರ್

Updated on:Aug 17, 2023 | 3:25 PM

ಬೆಳಗಾವಿ, ಆ.17: ಬೆಳಗಾವಿ(Belagavi) ತಾಲೂಕಿನ ಹುಲ್ಯಾನೂರ ಗ್ರಾಮದ 19 ವರ್ಷದ ಅಭಿಷೇಕ್ ಬುಡ್ರಿ ಎಂಬಾತ ಗೆಳೆಯನಿಂದಲೇ ಹತ್ಯೆಯಾಗಿ ಹೋಗಿದ್ದಾನೆ. ಸಣ್ಣ ವಯಸ್ಸಿನಲ್ಲೇ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡಿಕೊಂಡು ಮನೆ ನಡೆಸುತ್ತಿದ್ದ ಅಭಿಷೇಕ್ ಕೊಲೆ ಕುಟುಂಬಸ್ಥರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಷ್ಟಕ್ಕೂ ಇಲ್ಲಿ ಕೊಲೆ ಮಾಡಿದ್ದು ಅಭಿಷೇಕ್​ನ ಗೆಳೆಯ ಹುಲ್ಲೆಪ್ಪಾ ಕರೀಕಟ್ಟಿ. ಇತ್ತ ಮನೆಗೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡು ತಾಯಿ ಗೋಳಾಡುತ್ತಿದ್ದರೆ, ಅತ್ತ ಜೀವದ ಗೆಳೆಯನಾಗಿದ್ದವನನ್ನೇ ಕೊಲೆ ಮಾಡಿದ  ಗೆಳೆಯ ಅಂದರ್ ಆಗಿದ್ದಾನೆ.

ಅಭಿಷೇಕ್ ಕುಟುಂಬಸ್ಥರು ಕಡು ಬಡುವರಾಗಿದ್ದು, ಈ ಹಿನ್ನಲೆ 19ನೇ ವರ್ಷದಲ್ಲೇ ವಿದ್ಯಾಭ್ಯಾಸ ಬಿಟ್ಟು ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಬಂದ ಹಣದಲ್ಲಿ ಅರ್ಧ ಮನೆಗೆ ಕೊಟ್ಟು, ಜೀವನ ಕಟ್ಟಿಕೊಳ್ಳುತ್ತಿದ್ದ. ಇನ್ನು ಅಭಿಷೇಕ್​ ಊರಲ್ಲಿ ಒಳ್ಳೆಯ ಹೆಸರು ಕೂಡ ಮಾಡಿದ್ದ. ತಾನಾಯ್ತು ತನ್ನ ಕೆಲಸ ಆಯ್ತು ಅಂತಿದ್ದ ಅಭಿಷೇಕ್ ಆಗಸ್ಟ್​ 09ರಂದು ಬುಧವಾರ ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ವಾಪಾಸ್ ಆಗಿದ್ದಾನೆ. ಟೀ ಕುಡಿದು ಮನೆಯಲ್ಲಿ ಕುಳಿತಿದ್ದ ಅಭಿಷೇಕ್​ಗೆ ಬರ್ತಡೆ ಪಾರ್ಟಿ ಇದೆಯೆಂದು ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ಗೆಳೆಯ ಬಂದು, ಬರುವುದಿಲ್ಲವೆಂದರೂ ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ:ವಿವಾಹಿತ ಪ್ರೇಮಿಗಳಿಂದ ಚಿಕ್ಕಬಳ್ಳಾಪುರದಲ್ಲಿ ತುಂಬಿದ ಕೆರೆಯಲ್ಲಿ ಮುಳುಗಿ, ಆತ್ಮಹತ್ಯೆ ಮಾಡಿಕೊಂಡಿರುವ ರೀತಿ ಡ್ರಾಮಾ! ಕೊನೆಗೇನಾಗಿದೆ ಗೊತ್ತಾ!?

ಪಾರ್ಟಿಗೆಂದು ಕರೆದುಕೊಂಡು ಹೋಗಿ ಕೊಲೆ

ಹೀಗೆ ಹೋದ ಕೆಲವೇ ಹೊತ್ತಿಗೆ ಊರಿನ ಕೆಲ ಹುಡುಗರು ಅಭಿಷೇಕ ಮನೆಗೆ ಬಂದು ನಿಮ್ಮ ಮಗನಿಗೆ ಚಾಕು ಇರಿದಿದ್ದಾರೆ ಬೆಳಗಾವಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಿದ್ದಾರೆ. ಈ ಸುದ್ದಿ ಕೇಳಿ ಶಾಕ್ ಆದ ಮನೆಯವರು ಕೂಡಲೇ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾವಿಸಿದ್ದಾರೆ. ಐಸಿಯುವಿನಲ್ಲಿದ್ದ ಮಗನಿಗೆ ಚಿಕಿತ್ಸೆ ಕೊಡಿಸಿ ನಂತರ ಯಾರು ಈ ರೀತಿ ಮಾಡಿದ್ದು ಎಂದು ವಿಚಾರಿಸಿದ್ದಾರೆ. ಈ ವೇಳೆ ಬೇರೆ ಯಾರು ಅಲ್ಲ ಬದಲಿಗೆ ಅಭಿಷೇಕ್​ನ ಸ್ನೇಹಿತ ಹುಲ್ಲೆಪ್ಪಾ ಕರೀಕಟ್ಟಿ ಎಂದು ಗೊತ್ತಾಗಿದೆ.

ಹೌದು, ಅಂದು ಮನೆಗೆ ಬಂದು ಬರ್ತಡೆ ಪಾರ್ಟಿ ಇದೆಯೆಂದು ಕರೆದುಕೊಂಡು ಹೋಗಿದ್ದ ಹುಲ್ಲೆಪ್ಪನೇ ಊರ ಹೊರ ಭಾಗದ ಖುಲ್ಲಾ ಜಾಗದಲ್ಲಿ ಅಭಿಷೇಕ್ ಹೊಟ್ಟೆ ಭಾಗಕ್ಕೆ ಚಾಕು ಇರಿದು ಎಸ್ಕೇಪ್ ಆಗಿದ್ದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಭಿಷೇಕ್​ಗೆ ಊರಿನ ಕೆಲವರು ಆಸ್ಪತ್ರೆಗೆ ದಾಖಲಿಸಿದ್ದರು. ಒಂದು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮಾರನೇ ದಿನ ಮಗನನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಹೀಗೆ ಹೋದ ಎರಡೇ ದಿನಕ್ಕೆ ಚಾಕು ಇರಿದ ಜಾಗದಿಂದ ಮತ್ತೆ ರಕ್ತ ಹೊರ ಬರಲಾರಂಭಿಸಿದೆ. ಈ ವೇಳೆ ಆಸ್ಪತ್ರೆಗೆ ಕರೆದುಕೊಂಡು ತಪಾಸಣೆ ಮಾಡಿಸಿದಾಗ ಅಭಿಷೇಕ್ ಕರಳು ಕಟ್ ಆಗಿದೆ ಎಂದು ಗೊತ್ತಾಗಿದೆ. ಕೂಡಲೇ ಅಪರೇಷನ್ ಮಾಡಿಸಿ ಬದುಕಿಸಿಕೊಳ್ಳುವ ಪ್ರಯತ್ನ ವೈದ್ಯರು ಮಾಡಿದ್ರೂ, ಆ.14ರಂದು ಅಭಿಷೇಕ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ.

ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ತಾಯಿಯ ಎದುರೇ ಅಪ್ರಾಪ್ತ ಮಗಳನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ ವ್ಯಕ್ತಿಯ ಬಂಧನ

ಅಣ್ಣನ ಹೆಂಡತಿ(ಅತ್ತಿಗೆ) ಜೊತೆಗೆ ಫೋನ್​ನಲ್ಲಿ ಮಾತನಾಡಿದಕ್ಕೆ ಕೊಲೆ

ಇತ್ತ ಮಗನ ಸಾವಿಗೆ ಕಾರಣರಾಗಿದ್ದ ಹುಲ್ಲೆಪ್ಪ ಮತ್ತು ಆತನ ಚಿಕ್ಕಪ್ಪನ ಮೇಲೆ ಅಭಿಷೇಕ ಕುಟುಂಬಸ್ಥರು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಿಸಿದ್ದಾರೆ. ತಕ್ಷಣ ಪೊಲೀಸರು ಆರೋಪಿ ಹುಲ್ಲೆಪ್ಪನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆಗೆ ಕಾರಣ ಬಾಯ್ಬಿಟ್ಟಿದ್ದಾನೆ. ಹೌದು, ಮೃತ ಅಭಿಷೇಕ್, ಆರೋಪಿ ಹುಲ್ಲೆಪ್ಪನ ಅಣ್ಣನ ಹೆಂಡತಿ(ಅತ್ತಿಗೆ) ಜೊತೆಗೆ ಫೋನ್​ನಲ್ಲಿ ಮಾತನಾಡುತ್ತಿದ್ದನಂತೆ. ಹಲವು ಬಾರಿ ಅತ್ತಿಗೆ ಜೊತೆಗೆ ಮಾತಾಡಬೇಡ ಎಂದು ಹುಲ್ಲೆಪ್ಪಾ ಅಭಿಷೇಕ್​ನಿಗೆ ಹೇಳಿದ್ದನಂತೆ. ಇಷ್ಟಾದರೂ ಅಭಿಷೇಕ್ ಬೇರೊಂದು ಸೀಮ್ ಪಡೆದು ಅದರಿಂದ ಹುಲ್ಲೆಪ್ಪನ ಅತ್ತಿಗೆ ಜೊತೆಗೆ ಮತ್ತೆ ಫೋನ್​ನಲ್ಲಿ ಮಾತನಾಡಲು ಶುರು ಮಾಡಿದ್ದನಂತೆ.

ಆಗಷ್ಟ್ 8ರಂದು ಮತ್ತೆ ಇಬ್ಬರು ಮಾತನಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಇದರಿಂದ ಆಕ್ರೋಶಗೊಂಡ ಹುಲ್ಲೆಪ್ಪ ಅಭಿಷೇಕ್​ನನ್ನು ಹೀಗೆ ಬಿಟ್ಟರೆ, ನಮ್ಮ ಮಾನ ಮರ್ಯಾದೆ ಹೋಗುತ್ತೆ ಎಂದು ಮಾರನೇ ದಿನ ಆತನನ್ನು ಕೊಲೆ ಮಾಡಲು ಪ್ಲ್ಯಾನ್ ಮಾಡಿದ್ದಾನೆ. ಅದರಂತೆ ಆ.9ರಂದು ಸಂಜೆ ಅಭಿಷೇಕ್​ಗೆ ಬರ್ತಡೆ ಪಾರ್ಟಿ ಇದೆ ಬಾ ಎಂದು ಸುಳ್ಳು ಹೇಳಿ ಮನೆಯಿಂದ ಕರೆದುಕೊಂಡು ಹೋಗಿದ್ದಾನೆ. ಊರ ಹೊರ ಭಾಗದಲ್ಲಿ ಅಭಿಷೇಕ್​ಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದಾನೆ. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ.

ಇದನ್ನೂ ಓದಿ:ಪ್ರತ್ಯೇಕ ಘಟನೆ: ಕಾಫಿ‌ ಎಸ್ಟೇಟ್ ಮ್ಯಾನೇಜರ್ ಅನುಮಾನಾಸ್ಪದ ಸಾವು, ಹೆಣ್ಣು ಕೊಟ್ಟ ಮಾವನನ್ನೇ ಹತ್ಯೆಗೈದ ಅಳಿಯ

ಇನ್ನು ಆರೋಪಿ ಹೇಳಿಕೆ ದಾಖಲಿಸಿಕೊಂಡ ಮಾರಿಹಾಳ ಠಾಣೆ ಪೊಲೀಸರು ಹುಲ್ಲೆಪ್ಪನನ್ನ ಹಿಂಡಲಗಾ ಜೈಲಿಗೆ ಕಳುಹಿಸಿದ್ದು, ತನಿಖೆಯನ್ನ ಮುಂದುವರೆಸಿದ್ದಾರೆ. ಇತ್ತ ಕುಟುಂಬಸ್ಥರ ಆಕ್ರಂದನ ಮಾತ್ರ ಮುಂದುವರೆದಿದ್ದು, ತಪ್ಪೇ ಮಾಡದ ಮಗನನ್ನು ಕೊಂದ ಮೂರು ಜನರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಕುಟುಂಬಸ್ಥರು ಒತ್ತಾಯ ಮಾಡುತ್ತಿದ್ದಾರೆ. ಎಲ್ಲ ರೀತಿಯಲ್ಲೂ ತನಿಖೆ ಮಾಡುವುದಾಗಿ ಕಮಿಷನರ್ ಸಿದ್ದರಾಮಪ್ಪಾ ಹೇಳಿದ್ದಾರೆ.

ಒಟ್ಟಾರೆ ಗೆಳೆಯ ಗೆಳೆಯ ಅಂದುಕೊಂಡೇ ಗೆಳೆಯನ ಕಥೆ ಮುಗಿಸಿ ಪಾಪಿ ಜೈಲು ಸೇರಿದ್ದಾನೆ. ಇತ್ತ ಪೋನ್ ನಲ್ಲಿ ಮಾತಾಡಿದ ಅನ್ನೋ ಕಾರಣಕ್ಕೆ ಕೊಲೆ ಮಾಡಿದ್ದು, ಒಂದು ಕುಟುಂಬ ನರಳುವಂತೆ ಮಾಡಿದೆ. ಮನೆಗೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡು ಕುಟುಂಬಸ್ಥರು ಗೋಳಾಡುತ್ತ, ತಪ್ಪಿತಸ್ಥರಿಗೆ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಅದೇನೆ ಇರಲಿ ಕುಳಿತು ಬಗೆ ಹರಿಸಿಕೊಳ್ಳಬಹುದಾಗಿದ್ದ ವಿಷಯ ಕೊಲೆಯಲ್ಲಿ ಅಂತ್ಯವಾಗಿದ್ದು ವಿಪರ್ಯಾಸ.

ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:24 pm, Thu, 17 August 23