ವಿವಾಹಿತ ಪ್ರೇಮಿಗಳಿಂದ ಚಿಕ್ಕಬಳ್ಳಾಪುರದಲ್ಲಿ ತುಂಬಿದ ಕೆರೆಯಲ್ಲಿ ಮುಳುಗಿ, ಆತ್ಮಹತ್ಯೆ ಮಾಡಿಕೊಂಡಿರುವ ರೀತಿ ಡ್ರಾಮಾ! ಕೊನೆಗೇನಾಗಿದೆ ಗೊತ್ತಾ!?

ಪೊಲೀಸರು ಹಾಗೂ ಸಂಬಂಧಿಗಳಿಂದ ಬಚಾವ್ ಆಗಲು ಯತ್ನಿಸಿದ ವಿವಾಹಿತ ಪ್ರೇಮಿಗಳಿಬ್ಬರು ತುಂಬಿದ ಕೆರೆಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿರುವ ರೀತಿಯಲ್ಲಿ ಡ್ರಾಮಾ ಮಾಡಿ ಸಿಕ್ಕು ಬಿದ್ದಿದ್ದಾರೆ. ತುಂಬಿದ ಕೆರೆಯ ದಡದಲ್ಲಿ ಇಬ್ಬರ ಚಪ್ಪಲಿ, ಬ್ಯಾಗ್, ಬಟ್ಟೆ, ಮೊಬೈಲ್ ಫೋನ್ ಇಟ್ಟು ಆತ್ಮಹತ್ಯೆ ಡ್ರಾಮಾ ಮಾಡಿದ್ದಾರೆ. ಇತ್ತ ಅಗ್ನಿಶಾಮಕ ದಳ, ಪೊಲೀಸರು, ಸ್ಥಳೀಯರು ತುಂಬಿದ ಕೆರೆಯಲ್ಲಿ ಶವ ಶೋಧ ನಡೆಸಿ ಬರಿಗೈಲಿ ವಾಪಸಾದ ಘಟನೆ ನಡೆದಿದೆ. ಅಷ್ಟಕ್ಕೂ ಇಂಥ ಸಿನಿಮೀಯ ಘಟನೆ ನಡೆದಿದ್ದು ಚಿಕ್ಕಬಳ್ಳಾಪುರದ ಅಗಲಗುರ್ಕಿ ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ.

ವಿವಾಹಿತ ಪ್ರೇಮಿಗಳಿಂದ ಚಿಕ್ಕಬಳ್ಳಾಪುರದಲ್ಲಿ ತುಂಬಿದ ಕೆರೆಯಲ್ಲಿ ಮುಳುಗಿ, ಆತ್ಮಹತ್ಯೆ ಮಾಡಿಕೊಂಡಿರುವ ರೀತಿ ಡ್ರಾಮಾ! ಕೊನೆಗೇನಾಗಿದೆ ಗೊತ್ತಾ!?
ಸಾಂದರ್ಭಿಕ ಚಿತ್ರ
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಅಕ್ಷಯ್​ ಪಲ್ಲಮಜಲು​​

Updated on:Aug 15, 2023 | 6:33 PM

ಪೊಲೀಸರು ಹಾಗೂ ಸಂಬಂಧಿಗಳಿಂದ ಬಚಾವ್ ಆಗಲು ಯತ್ನಿಸಿದ ವಿವಾಹಿತ ಪ್ರೇಮಿಗಳಿಬ್ಬರು (Lovers), ತುಂಬಿದ ಕೆರೆಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿರುವ ರೀತಿಯಲ್ಲಿ ಡ್ರಾಮಾ ಮಾಡಿ ಸಿಕ್ಕು ಬಿದ್ದಿದ್ದಾರೆ. ತುಂಬಿದ ಕೆರೆಯ ದಡದಲ್ಲಿ ಇಬ್ಬರ ಚಪ್ಪಲಿ, ಬ್ಯಾಗ್, ಬಟ್ಟೆ, ಮೊಬೈಲ್ ಫೋನ್ ಇಟ್ಟು ಆತ್ಮಹತ್ಯೆ ಡ್ರಾಮಾ (Suicide Drama) ಮಾಡಿದ್ದಾರೆ. ಇತ್ತ ಅಗ್ನಿಶಾಮಕ ದಳ, ಪೊಲೀಸರು, ಸ್ಥಳೀಯರು ತುಂಬಿದ ಕೆರೆಯಲ್ಲಿ ಶವ ಶೋಧ ನಡೆಸಿ ಬರಿಗೈಲಿ ವಾಪಸಾದ ಘಟನೆ ನಡೆದಿದೆ. ಅಷ್ಟಕ್ಕೂ ಇಂಥ ಸಿನಿಮೀಯ ಘಟನೆ ನಡೆದಿದ್ದು ಎಲ್ಲಿ ಅಂತೀರಾ ಈ ವರದಿ ನೋಡಿ!! ಇತ್ತ ಸುಡುವ ಬಿಸಿನಲ್ಲಿ ಬೋಟ್ ಹತ್ತಿ, ಪಾತಾಳ ಗರಡಿ ಹಾಕುತ್ತಾ… ಕೆರೆಯಲ್ಲಿ ಮುಳುಗಿರುವ ವ್ಯಕ್ತಿಗಳ ಶವ ಶೋಧ ಕಾರ್ಯ ನಡೆಸಿದವರು ಚಿಕ್ಕಬಳ್ಳಾಪುರ ಪೊಲೀಸರು (Chikkaballapur Police). ಸ್ಥಳ -ಅಗಲಗುರ್ಕಿ ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ.

ಹೌದು!! ಸದರಿ ಕೆರೆಯ ದಡದಲ್ಲಿ ನಿನ್ನೆ ಮಧ್ಯಾಹ್ನ ಮಹಿಳೆ ಹಾಗೂ ಪುರುಷನ ಚಪ್ಪಲಿ, ಬ್ಯಾಗ್, ಬಟ್ಟೆ, ಕಿಪ್ಯಾಡ್ ಮೊಬೈಲ್ ಪೋನ್ ಕಾಣಿಸಿದೆ. ಇದ್ರಿಂದ ಅನುಮಾನಗೊಂಡ ಸ್ಥಳೀಯರು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರ ಗಮನಕ್ಕೆ ತಂದಿದ್ದಾರೆ. ಬ್ಯಾಗ್ ನಲ್ಲಿದ್ದ ದಾಖಲೆಗಳ ಪರಿಶೀಲನೆ ನಡೆಸಿದ್ರೆ ಅದು ಚಿಕ್ಕಬಳ್ಳಾಪುರ ತಾಲೂಕಿನ ಕಡಶೀಗೇನಹಳ್ಳಿ ಗ್ರಾಮದ ನಿವಾಸಿಗಳಾದ ಮುನಿರಾಜು ಹಾಗೂ ಲಲಿತಮ್ಮ ಅವರಿಬ್ಬರದು ಎಂದು ತಿಳಿದುಬಂದಿದೆ. ತಡಮಾಡದ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯರು, ದಿನವಿಡಿ ಹರಸಾಹಸಪಟ್ಟು ಬೋಟ್ ಮೂಲಕ ಕೆರೆಯಲ್ಲಿ ಪಾತಾಳ ಗರಡಿ ಹಾಕಿ ಶವ ಶೋಧ ಕಾರ್ಯ ನಡೆಸಿದ್ರು. ಆದ್ರೆ ಶವ ಸಿಗಲಿಲ್ಲ.

ಈ ಮಧ್ಯೆ ಕಡಶೀಗೇನಹಳ್ಳಿ ಗ್ರಾಮದ ನಿವಾಸಿಗಳಾದ ಮುನಿರಾಜು ಹಾಗೂ ಲಲಿತಮ್ಮ ಅವರಿಬ್ಬರ ಇತಿಹಾಸ ಕೆದಕಿದ್ರೆ… ಬೆರೆಯದ್ದೇ ರೋಚಕ ಕತೆ ಅನಾವರಣಗೊಂಡಿದೆ. ಇವರಿಬ್ಬರೂ ಬೇರೆ ಬೇರೆಯವರ ಜೊತೆ ಈ ಹಿಂದೆಯೇ ವಿವಾಹವಾಗಿದ್ದಾರೆ. ಮುನಿರಾಜು ಗೆ 50 ವರ್ಷ ವಯಸ್ಸು ಆಗಿದೆ. ಇನ್ನು ಲಲಿತಮ್ಮಗೆ ಇನ್ನೂ 28 ವರ್ಷ ವಯಸ್ಸು.

ಆದರೂ ಇವರಿಬ್ಬರೂ ಪರಸ್ಪರ ಪ್ರೀತಿಸಿ ಜೂನ್ 15ರಂದು ಎಸ್ಕೇಪ್ ಆಗಿದ್ದಾರೆ. ಜೂನ್ 28ರಂದು ಲಲಿತಾ ಗಂಡ ನರಸಿಂಹಮೂರ್ತಿ ಪತ್ನಿ ಕಾಣೆಯಾದ ಬಗ್ಗೆ ದೂರು ದಾಖಲು ಮಾಡಿದ್ದರು. ಈ ಜೋಡಿ ಆತ್ಮಹತ್ಯೆ ಮಾಡಿಕೊಂಡಿದ್ದಾದರೂ ಯಾಕೆ ಅಂತ ಪೊಲೀಸರು ತನಿಖೆಗಿಳಿದಿದ್ದಾರೆ. ಅವರಿಬ್ಬರ ಮೊಬೈಲ್ ಸಿಡಿಆರ್ ತನಿಖೆ ನಡೆಸಿದ್ದಾರೆ… ಜೋಡಿಯ ಪೈಕಿ ಒಂದು ಪೋನ್ ಸಿಮ್ ಆಂಧ್ರದ ಅನಂತಪುರದಲ್ಲಿ ಇರುವುದು ಗೊತ್ತಾಗಿದೆ. ಇದ್ರಿಂದ ತಡಮಾಡದ ಚಿಕ್ಕಬಳ್ಳಾಪುರ ಮಹಿಳಾ ಠಾಣೆ ಪೊಲೀಸರು, ಖಚಿತ ಮಾಹಿತಿ ಪಡೆದು ಅಲ್ಲಿಗೆ ದೌಡಾಯಿಸಿದ್ದಾರೆ. ಕೊನೆಗೆ ಇಂದು ಶನಿವಾರ ಕಿಲಾಡಿ ಜೋಡಿಯನ್ನು ವಶಕ್ಕೆ ಪಡೆದು ಚಿಕ್ಕಬಳ್ಳಾಪುರಕ್ಕೆ ಕರೆ ತಂದಿದ್ದಾರೆ.

ಪರಸ್ಪರ ಪ್ರೀತಿಸಿ ಎಸ್ಕೇಪ್ ಆಗಿದ್ದ ಜೋಡಿಯನ್ನು, ಪೊಲೀಸರು ಹಾಗೂ ಸಂಬಂಧಿಗಳು ಹುಡುಕುತ್ತಿದ್ದಾರೆ ಅನ್ನೊ ಮಾಹಿತಿ ಅರಿತ ಕಿಲಾಡಿ ಜೋಡಿ, ಪೊಲೀಸರನ್ನು ಯಾಮಾರಿಸಲು ಆತ್ಮಹತ್ಯೆ ಡ್ರಾಮಾ ಮಾಡಿದರಂತೆ! ಈಗ ಇಬ್ಬರೂ ಪೊಲೀಸರ ವಶದಲ್ಲಿ ಇದ್ದಾರೆ. ಆದ್ರೆ ಲಲಿತಾ ಈಗ ರಾಗ ಬದಲಿಸಿದ್ದು, ಪ್ರಿಯಕರನ ಬದಲು ಗಂಡನ ಜೊತೆಯೇ ಹೋಗುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ಆದ್ರೆ ಸ್ವಾತಂತ್ರ್ಯದ ದಿನ ಮುಕ್ತಿ ಬಯಸಿರುವ ಲಲಿತಳ ಗಂಡ ನರಸಿಂಹಮೂರ್ತಿ ಮಾತ್ರ ‘ನಿನ್ನ ಸಹವಾಸವೆ ಬೇಡ’ ಅಂತ ಬೇಸರ ಮಾಡಿಕೊಂಡು, ದೂರವಾಗಿಯೇ ಉಳಿದಿದ್ದಾನೆ.

ಚಿಕ್ಕಬಳ್ಳಾಪುರ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:15 pm, Tue, 15 August 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ