ಪ್ರೀತಿಸಿದ ಹುಡುಗಿಯ ಬೈಕ್ ಸುಟ್ಟು ಹಾಕಿದ ಪಾಗಲ್ ಪ್ರೇಮಿ

ಜೈಲು ಸೇರಿದ್ದ ಯುವಕನೊಬ್ಬ ಜೈಲಿನಿಂದ ಬಿಡುಗಡೆಯಾದ ನಂತರ ತಾನು ಪ್ರೀತಿಸುತ್ತಿದ್ದ ಹುಡುಗಿಯ ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿದ್ದು, ದೃಶ್ಯಾವಳಿಗಳು ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ.

ಪ್ರೀತಿಸಿದ ಹುಡುಗಿಯ ಬೈಕ್ ಸುಟ್ಟು ಹಾಕಿದ ಪಾಗಲ್ ಪ್ರೇಮಿ
ಆರೋಪಿ ವಿಕ್ರಮ್ ಮತ್ತು ಕೃತ್ಯ ಎಸಗಿ ಪರಾರಿಯಾಗುತ್ತಿರುವ ದೃಶ್ಯ
Edited By:

Updated on: Dec 15, 2022 | 10:53 AM

ಬೆಂಗಳೂರು: ಯುವಕನೊಬ್ಬ ತಾನು ಪ್ರೀತಿಸಿದ ಹುಡುಗಿಯ ದ್ವಿಚಕ್ರ ವಾಹನಕ್ಕೆ ಬೆಂಕಿ ಇಟ್ಟ ಘಟನೆ ನಗರದ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿಕ್ರಮ್ ಎಂಬ ಪಾಗಲ್ ಪ್ರೇಮಿಯಿಂದ ಈ ಕೃತ್ಯ ಎಸಗಲಾಗಿದ್ದು, ಬೈಕ್​ಗೆ ಬೆಂಕಿ ಹಚ್ಚಿ  ಪರಾರಿಯಾಗುವ (Lover sets bike on fire) ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ‌ ಸೆರೆಯಾಗಿದೆ. ಕೃತ್ಯ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ. ಈ ಹಿಂದೆ ಡ್ರಗ್ಸ್ ಕೇಸ್ (Drug Case)​ನಲ್ಲಿ ಸಿಕ್ಕಿಹಾಕಿಕೊಂಡಿದ್ದ ವಿಕ್ರಮ್ ಕೆಲವು ತಿಂಗಳು ಜೈಲು ಪಾಲಾಗಿದ್ದನು.

ನಗರದ ಬಿಟಿಎಂ ಲೇಔಟ್, ಮಡವಾಳ, ಕೊರಮಂಗಲ ಕಡೆಗಳಲ್ಲಿ ಡ್ರಗ್ ಪೆಡ್ಲಿಂಗ್ ಮಾಡಿಕೊಂಡಿದ್ದ ಆರೋಪಿ ವಿಕ್ರಮ್ ಕಳೆದ ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದನು. ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ ಪೆಡ್ಲಿಂಗ್​ನಲ್ಲಿ ತೊಡಗಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲು ಸೇರಿದ್ದನು.

ಇದನ್ನೂ ಓದಿ: KPTCL ನೇಮಕಾರಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ: ಪ್ರಮುಖ ಆರೋಪಿ ಅರೆಸ್ಟ್

ಡ್ರಗ್ಸ್ ಪ್ರಕರಣದಲ್ಲಿ ಸುಮಾರು ಎಂಟು ತಿಂಗಳುಗಳ ಕಾಲ ಜೈಲು ವಾಸ ಅನುಭವಿಸಿದ ವಿಕ್ರಮ್​ಗೆ ಜೈಲಿನಿಂದ ಬಿಡುಗಡೆಯಾದ ನಂತರ ತಾನು ಪ್ರೀತಿಸುತ್ತಿದ್ದ ಯುವತಿ ಮೇಲೆ ಅನುಮಾನ ಹುಟ್ಟಿಕೊಂಡಿದೆ. ತಾನು ಪ್ರೀತಿಸುತ್ತಿದ್ದ ಹುಡುಗಿಯೇ ಡ್ರಗ್ ಪೆಡ್ಲಿಂಗ್ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ ಎಂದು ಅನುಮಾನಿಸಿದ ವಿಕ್ರಮ್ ಈ ಕೃತ್ಯ ಎಸಗಿದ್ದಾನೆ. ಜೈಲಿನಿಂದ ಹೊರಗಡೆ ಬಂದ ವಿಕ್ರಮ್ ಪ್ರೇಯಸಿಯ ಬೈಕ್ ಸುಟ್ಟು ಹಾಕಿ ಎಸ್ಕೇಪ್ ‌ಅಗವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ‌ ಸೆರೆಯಾಗಿದ್ದು, ದೂರಿನ ಅನ್ವಯ ಪ್ರಕರಣ ದಾಖಲಿಸಿದ್ದ ಹಲಸೂರು ಠಾಣಾ ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಆರೋಪಿ‌ ವಿಕ್ರಮ್​ನನ್ನು ಬಂಧಿಸಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:20 am, Thu, 15 December 22