ಬೆಂಗಳೂರು: ಹೊಯ್ಸಳ ಪೊಲೀಸರ ವಿರುದ್ಧ ಸುಲಿಗೆ ಆರೋಪ ಸಂಬಂಧ ಸಂಪಿಗೆಹಳ್ಳಿ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ಟಿವಿ9ಗೆ ಮಾಹಿತಿ ನೀಡಿದ ಈಶಾನ್ಯ ವಿಭಾಗ ಡಿಸಿಪಿ ಅನೂಪ್ ಶೆಟ್ಟಿ (DCP (Northeast) Anoop Shetty), ಸುಲಿಗೆ ಸಂಬಂಧ ಡಿಸೆಂಬರ್ 8ರಂದು ಸಂತ್ರಸ್ತರು ಟ್ವೀಟರ್ ಮೂಲಕ ಬೆಂಗಳೂರು ಪೊಲೀಸರಿಗೆ (Bengaluru Police) ದೂರು ನೀಡಿದ್ದರು. 1000 ಹಣವನ್ನು ಸಂತ್ರಸ್ಥರಿಂದ ಕ್ಯೂ ಆರ್ ಕೋಡ್ ಮೂಲಕ ಪಡೆದಿದ್ದಾರೆ. ಹೀಗಾಗಿ ಸಂಪಿಗೆ ಹಳ್ಳಿ ಠಾಣೆಯ ರಾಜೇಶ್ ಹೆಚ್ ಸಿ, ಪಿಸಿ ನಾಗೇಶ್ ಎಂಬವರನ್ನು ಅಮಾನತು ಮಾಡಿ ಘಟನೆಗೆ ಸಂಬಂದಿಸಿದಂತೆ ಇಲಾಖೆ ತನಿಖೆಗೆ ಆದೇಶಿಸಲಾಗಿದೆ. ರಾತ್ರಿ ವೇಳೆ ಅನವಶ್ಯಕವಾಗಿ ತಿರುಗಾಡ್ತಿದ್ದೀರಿ ಎಂದು ದಂಡ ವಿಧಿಸುತ್ತಿರುವುದಾಗಿ ಹೇಳಿ ಹಣ ವಸೂಲಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Crime News: ಶಿವಮೊಗ್ಗ ಸಮೀಪ ಲಾರಿ-ಕಾರು ಮುಖಾಮುಖಿಯಲ್ಲಿ ಮೂವರ ಸಾವು, ಬೆಂಗಳೂರು ಕ್ಯಾಸಿನೊ ಮೇಲೆ ಪೊಲೀಸರ ದಾಳಿ
ನಗರದ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾನ್ಯತಾ ಟೆಕ್ಪಾರ್ಕ್ ಬಳಿ ಕಾರ್ತಿಕ್ ಪೆತ್ರಿ ಮತ್ತು ಅವರ ಪತ್ನಿ ಸ್ನೇಹಿತರ ಜೊತೆ ಪಾರ್ಟಿ ಮುಗಿಸಿ ಮಧ್ಯರಾತ್ರಿ ವಾಪಸ್ ಆಗುತ್ತಿದ್ದರು. ಈ ವೇಳೆ ದಂಪತಿಯನ್ನು ತಡೆದ ಹೊಯ್ಸಳ ಸಿಬ್ಬಂದಿ 3,000 ರೂ.ಗೆ ಬೇಡಿಕೆಯಿಟ್ಟಿದ್ದಾರೆ. ಇದನ್ನು ದಂಪತಿ ನಿರಾಕರಿಸಿದಾಗ ಪೊಲೀಸರು ಬೆದರಿಕೆ ಹಾಕಿರುವುದಾಗು ಆರೋಪಿಸಲಾಗಿದೆ.
ಪೊಲೀಸರು ಬೆದರಿಕೆ ಹಿನ್ನಲೆ ದಂಪತಿ 1,000 ರೂಪಾಯಿಯನ್ನು ಡಿಜಿಟಲ್ ಪೇಮೆಂಟ್ (ಕ್ಯೂಆರ್ ಕೋಡ್ ಮೂಲಕ) ಪಾವತಿ ಮಾಡಿದ್ದಾರೆ. ಬಳಿಕ ಪೊಲೀಸರು ದಂಪತಿಯನ್ನು ಬಿಟ್ಟು ಕಳುಹಿಸಿದ್ದಾರೆ. ಈ ಬಗ್ಗೆ ಸಂತ್ರಸ್ತ ಕಾರ್ತಿಕ್ ಟ್ವೀಟ್ ಮೂಲಕ ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದರು. ಟ್ವೀಟ್ ಗಮನಿಸಿದ ಪೊಲೀಸರು, ಈ ಬಗ್ಗೆ ಮಾಹಿತಿ ಕಲೆ ಹಾಕುವುದಾಗಿ ತಿಳಿಸಿದ್ದರು.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:35 pm, Sun, 11 December 22