ಯುಕೆ: ಕೈದಿಯೊಬ್ಬನ ಜೊತೆ ಲೈಂಗಿಕ ಕ್ರಿಯೆ ನಡೆಸಿದ ಆರೋಪಕ್ಕೀಡಾಗಿದ್ದ ಚಾಪ್ಲೆನ್ ಸೂಸನ್ ಬೆಲ್ ವಿಚಾರಣೆ ಎದುರಿಸುವ ಮೊದಲೇ ನಿಧನರಾದರು!
ಕೈದಿಯೊಬ್ಬನ ಜೊತೆ ರತಿಕ್ರೀಡೆಯಲ್ಲಿ ತೊಡಗಿದ ಅರೋಪ ಎದುರಿಸುತ್ತಿದ್ದ ಸೂಸನ್ ಈ ವರ್ಷದ ಏಪ್ರಿಲ್ ನಲ್ಲಿ ಮೊದಲಬಾರಿಗೆ ಟೀಸೈಡ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಹಾಜರಾಗಿದ್ದರು.
ಇಂಗ್ಲೆಂಡ್ ನ ಡುರ್ಹಮ್ ಕೌಂಟಿಯ ಡಾರ್ಲಿಂಗ್ಟನ್ ನಿವಾಸಿ 59-ವರ್ಷದವರಾಗಿದ್ದ ಸೂಸನ್ ಬೆಲ್ (Susan Bell) ತನ್ನ ವಿರುದ್ಧ ಮಾಡಲಾಗಿದ್ದ ಲೈಂಗಿಕ ಅಪರಾಧ ಆರೋಪಕ್ಕೆ ಸಂಬಂಧಿಸಿದಂತೆ ಕ್ರೌನ್ ಕೋರ್ಟ್ ನಲ್ಲಿ (Crown Court) ವಿಚಾರಣೆ ಎದುರಿಸುವ ಮೊದಲೇ ನಿಧನರಾಗಿದ್ದಾರೆ. ಜೈಲಿನಲ್ಲಿರುವ ಕೈದಿಗಳ ಧಾರ್ಮಿಕ, ಆಧ್ಯಾತ್ಮಿಕ ಕಾಳಜಿ ವಹಿಸುವ ಮತ್ತು ಸೆರೆಮನೆಗಳಿಗೆ ಹೋಗಿ ಅವರಿಗೆ ದೇವರ ಕಡೆ ತಿರುಗಿಕೊಳ್ಳುವಂತೆ ಬೋಧನೆ ಮಾಡುವ ಚಾಪ್ಲೆನ್ (chaplain) ಆಗಿ ಕೆಲಸ ಮಾಡುತ್ತಿದ್ದ ಸೂಸನ್ ಕೈದಿಯೊಬ್ಬನ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಆರೋಪಕ್ಕೆ ಗುರಿಯಾಗಿದ್ದರು.
ತಡವಾಗಿ ಲಭ್ಯವಾಗಿರುವ ಮಾಹಿತಿ ಪ್ರಕಾರ ಸೂಸನ್ ಜೂನ್ ನಲ್ಲೇ ಕೊನೆಯುಸಿರೆಳೆದಿದ್ದಾರೆ. ತನ್ನ ವಿರುದ್ಧ ಮಾಡಲಾದ ಅರೋಪವನ್ನು ಪ್ರಶ್ನಿಸಿ ಕೋರ್ಟ್ ನಲ್ಲಿ ಮನವಿ ಸಲ್ಲಿಸುವ ತನಗಿದ್ದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಮೊದಲೇ ಸೂಸಾನ್ ಮರಣ ಹೊಂದಿದ್ದಾರೆ.
ಕೈದಿಯೊಬ್ಬನ ಜೊತೆ ರತಿಕ್ರೀಡೆಯಲ್ಲಿ ತೊಡಗಿದ ಅರೋಪ ಎದುರಿಸುತ್ತಿದ್ದ ಸೂಸನ್ ಈ ವರ್ಷದ ಏಪ್ರಿಲ್ ನಲ್ಲಿ ಮೊದಲಬಾರಿಗೆ ಟೀಸೈಡ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಹಾಜರಾಗಿದ್ದರು.
ಸೂಸನ್ ಸ್ವಇಚ್ಛೆಯಿಂದ ಮತ್ತು ಯಾವುದೇ ಸೂಕ್ತ ಕಾರಣಗಳಿಲ್ಲದೆ ಸೆರೆಮನೆಯಲ್ಲಿ ತನ್ನ ಘನತೆಗೆ ತಕ್ಕುದಲ್ಲದ ರೀತಿಯಲ್ಲಿ ವರ್ತಿಸಿ ಸಾರ್ವಜನಿಕರ ವಿಶ್ವಾಸಕ್ಕೆ ದ್ರೋಹ ಬಗೆದ ಆರೋಪವನ್ನು ಎದುರಿಸುತ್ತಿದ್ದರು.
ಈ ಅಪರಾಧ ನಿಖರವಾಗಿ ಎಲ್ಲಿ ನಡೆಯಿತೆಂದು ಅರೋಪಪಟ್ಟಿಯಲ್ಲಿ ಉಲ್ಲೇಖಿಸಿಲ್ಲ, ಆದರೆ ಸ್ಟಾಕ್ಟನ್ ನಲ್ಲಿ ಸೂಸನ್ ಸೆಕ್ಸ್ ನಡೆಸಿದರೆಂದು ಹೇಳಲಾಗುತ್ತಿದೆ. ಟೀಸೈಡ್ ಲೈವ್ ಮಾಡಿರುವ ವರದಿಯ ಪ್ರಕಾರ ಟೀಸೈಡ್ ಕೋರ್ಟ್ ರೆವರೆಂಡ್ ಸೂಸನ್ ಅವರ ಪ್ರಕರಣ ಅಧಿಕೃತವಾಗಿ ಕೊನೆಗೊಂಡಿದೆ ಎಂದು ಶುಕ್ರವಾರ ಹೇಳಿದೆ.
ಕೊರ್ಟ್ ನಲ್ಲಿ ಮೊದಲ ಬಾರಿಗೆ ಹಾಜರಾದ ಎರಡು ತಿಂಗಳು ನಂತರ ಸೂಸನ್ ನಿಧನ ಹೊಂದಿದರೆಂದು ಕೋರ್ಟಿಗೆ ತಿಳಿಸಿದ ನಂತರ ನ್ಯಾಯಾಧೀಶರು ಪ್ರಕರಣ ಕೊನೆಗೊಂಡಿರುವುದನ್ನು ಘೋಷಿಸಿದರು. ವಿಚಾರಣೆ ಸಮಯದಲ್ಲಿ ಅವರ ಸಾವು ಹೇಗೆ ಸಂಭವಿಸಿತು ಅನ್ನೊದನ್ನು ಉಲ್ಲೇಖಿಸಲಿಲ್ಲ.
ಆದರೆ ಡಾರ್ಲಿಂಗ್ಟನ್ ನಲ್ಲಿರುವ ಸೆಂಟ್ ಕೊಲಂಬಿಯಾ ಚರ್ಚ್ ಸದಸ್ಯರು ‘ಸೂಸನ್ ಅವರನ್ನು ಎಲ್ಲರೂ ತುಂಬಾ ಇಷ್ಟಪಡುತ್ತಿದ್ದರು ಮತ್ತು ನಮ್ಮ ಕಮ್ಯುನಿಟಿಯ ಗೌರವಾನ್ವಿತ ಸದಸ್ಯೆಯಾಗಿದ್ದರು,’ ಎಂದು ಹೇಳಿದ್ದಾರೆ. ಸೂಸನ್ ಈ ಚರ್ಚ್ ನಲ್ಲಿ ಮೊದಲು ಕ್ಯುರೇಟ್ ಆಗಿ ಕೆಲಸ ಮಾಡುತ್ತಿದ್ದರು.
ಏಪ್ರಿಲ್ 2022 ರಲ್ಲಿ ಸೂಸನ್ ಟೀಸೈಡ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ತಮ್ಮ ವಕೀಲ ಬ್ರೆಟ್ ವೈಲ್ಡ್ ರಿಜ್ ಅವರೊಂದಿಗೆ ಹಾಜರಾಗಿದ್ದರು. ಅವರ ವಿರುದ್ಧ ವಿಧಿಸಲಾಗಿದ್ದ ಚಾರ್ಜ್ ಕಾನೂನು ಉಲ್ಲಂಘನೆಯನ್ನು ಪ್ರತಿಬಿಂಬಿಸುದಿಲ್ಲವಾದ್ದರಿಂದ ಅವರನ್ನು ಬಂಧಿಸದೆ ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು. ಕೋರ್ಟ್ ದಾಖಲೆಗಳ ಪ್ರಕಾರ ಸೂಸನ್ ಅವರಿಂದ ಸಂಭವಿಸಿದೆ ಎಂದು ಹೇಳಲಾದ ಅಪರಾಧ ಮಾರ್ಚ್ 17, 2021ರಂದು ನಡೆದಿತ್ತು.
ಅವತ್ತು ನಡೆದ ಕ್ಲುಪ್ತ ವಿಚಾರಣೆಯಲ್ಲಿ ಡಿಸ್ಟ್ರಿಕ್ಟ್ ಜಡ್ಜ್ ಹೆಲೆನ್ ಕಸಿನ್ಸ್ ಅವರು, ‘ಶ್ರೀಮತಿ ಸೂಸನ್ ಬೆಲ್ ಅವರೇ ಇದು ಕೇವಲ ಕ್ರೌನ್ ಕೋರ್ಟ್ ಮಾತ್ರ ನಿರ್ವಹಿಸಬಹುದಾದ ಪ್ರಕರಣವಾಗಿದೆ,’ ಎಂದಷ್ಟೇ ಹೇಳಿದ್ದರು.
ಮೊದಲ ಬಾರಿಯ ವಿಚಾರಣೆಯಲ್ಲಿ ಸೂಸನ್ ಅವರು ತಮ್ಮ ವಿರುದ್ಧ ಮಾಡಲಾಗಿದ ಅರೋಪಕ್ಕೆ ಪ್ರತಿಯಾಗಿ ಮನವಿ ಸಲ್ಲಿಸಿರಲಿಲ್ಲ.
ಮತ್ತಷ್ಟು ಕ್ರೈಮ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ