ಬೆಂಗಳೂರು: ರಾತ್ರಿ ಮಲಗಿದರೆ, ಮಧ್ಯಾಹ್ನ ಎದ್ದೇಳುತ್ತಾಳೆ, ಸಂಜೆ ಮಲಗಿದರೆ ರಾತ್ರಿ ಎದ್ದೇಳುತ್ತಾಳೆ ಎಂದು ಪತ್ನಿಯ ವಿರುದ್ಧ ಪತಿ (Husband) ಕಿರುಕುಳ ಆರೋಪ ಮಾಡಿರುವಂತಹ ವಿಚಿತ್ರ ವಿದ್ಯಮಾನವೊಂದು ನಗರದಲ್ಲಿ ನಡೆದಿದೆ. ಪತಿ ಕಮ್ರಾನ್ ಖಾನ್ನಿಂದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪತ್ನಿ ಆಯೇಷಾ ಫರ್ಹಿನ್ ವಿರುದ್ಧ ಕೋರ್ಟ್ ಪಿಸಿಆರ್ ಮೂಲಕ ಎಫ್ಐಆರ್ ದಾಖಲಿಸಲಾಗಿದೆ. ಜೊತೆಗೆ ಮಾವ ಆರಿಫುಲ್ಲ, ಅತ್ತೆ ಹೀನಾ ಕೌಸರ್ ಮತ್ತು ಮೈದುನ ಮೊಹಮ್ಮದ್ ಮೋಯಿನ್ ವಿರುದ್ಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಕಮ್ರಾನ್ ದೂರು ದಾಖಲಿಸಿದ್ದಾರೆ. ರಾತ್ರಿ ಮಲಗಿದರೆ ಮಧ್ಯಾಹ್ನ 12-30ವರೆಗೂ ನಿದ್ದೆ ಮಾಡುತ್ತಾಳೆ. ಸಂಜೆ 5-30ಕ್ಕೆ ಮಲಗಿದರೆ ರಾತ್ರಿ 9-30ಕ್ಕೆ ಎದ್ದೇಳುತ್ತಾಳೆ. ಕಳೆದ ಐದು ವರ್ಷಗಳಿಂದಲ್ಲೂ ಇದೇ ರೀತಿ ಮಾಡುತ್ತಿದ್ದಾಳೆ ಎಂದು ಆರೋಪಿಸಲಾಗಿದೆ.
ಅಡುಗೆ ಕೂಡ ಮಾಡುವುದಿಲ್ಲ, ನನ್ನ ತಾಯಿಯೇ ಅಡುಗೆ ಮಾಡಿ ಬಡಿಸಬೇಕು. ನಾನು ಪ್ರಶ್ನಿಸದೆ ಸುಮ್ಮನಿದ್ದೆ, ಆದರೆ ಈಗ ಕುಟುಂಬಸ್ಥರಿಂದ ಹಲ್ಲೆ ನಡೆಸಿದ್ದಾಳೆ. ನನಗೆ ಪತ್ನಿಯಿಂದ ಹಾಗೂ ಆಕೆಯ ಕುಟುಂಬದವರಿಂದ ನರಕಯಾತನೆ ಅನುಭವಿಸಿದ್ದೇನೆ. ಹೀಗಾಗಿ ಪತ್ನಿ ಹಾಗೂ ಆಕೆಯ ಕುಟುಂಬಸ್ಥರ ವಿರುದ್ಧ ಕ್ರಮಕೈಗೊಳ್ಳಿ ಎಂದು ಕಮ್ರಾನ್ ಖಾನ್ ದೂರು ನೀಡಿದ್ದಾರೆ.
ಇದನ್ನೂ ಓದಿ: ಕಲಬುರಗಿ: ರಾತ್ರಿ ಮನೆಯಲ್ಲಿ ಮಲಗಿದ್ದ ಯುವಕ, ಪಕ್ಕದ ಮನೆಯಲ್ಲಿ ಶವವಾಗಿ ಪತ್ತೆ; ಕೊಲೆ ಎಂದು ಆರೋಪಿಸಿದ ತಾಯಿ
ಅದ್ಧೂರಿ ಜೀವನ ನಡೆಸುವ ಉದ್ದೇಶದಿಂದ ತನ್ನನ್ನ ಮದುವೆಯಾಗಿದ್ದಾಳೆ. ಆಕೆಗೆ ಮದುವೆಗೂ ಮುಂಚೆಯೇ ಖಾಯಿಲೆಗಳಿದ್ದು, ಅದನ್ನು ಮುಚ್ಚಿಟ್ಟು ಐದು ವರ್ಷದ ಹಿಂದೆ ನನ್ನ ಜೊತೆ ಮದುವೆ ಮಾಡಿಸಿದ್ದಾರೆ. ಹುಟ್ಟುಹಬ್ಬದ ನೆಪದಲ್ಲಿ 20 ರಿಂದ 25 ಜನರನ್ನ ಮನೆಗೆ ಆಹ್ವಾನಿಸಿ ಆ ನೆಪದಲ್ಲಿ ಪತಿ ಮೇಲೆ ಹಲ್ಲೆ ಮಾಡಿರುವುದಾಗಿ ಆರೋಪಿಸಲಾಗಿದೆ.
ಇದನ್ನೂ ಓದಿ: ಯಾದಗಿರಿ: ಶೋಕಿಗಾಗಿ ಬೈಕ್ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್; ಬಂಧಿತರಿಂದ7.5 ಲಕ್ಷ ಮೌಲ್ಯದ 14 ಬೈಕ್ ವಶಕ್ಕೆ
ಮನೆಯಲ್ಲಿ ಕೆಲಸ ಮಾಡಲು ಹೇಳಿದರೆ ತನ್ನ ಜೊತೆ ಜಗಳವಾಡಿ 15-20 ದಿನ ತವರು ಮನೆಗೆ ಹೋಗುತ್ತಾಳೆ. ತನ್ನ ಬಗ್ಗೆ ಕಿಂಚಿತ್ತೂ ಪ್ರೀತಿ, ಮಮಕಾರ ಇಲ್ಲ. ತನ್ನ ಆಸ್ತಿ ಲಪಟಾಯಿಸಲು ಮತ್ತು ರಾಯಲ್ ಲೈಫ್ ಲೀಡ್ ಮಾಡಲು ತನ್ನನ್ನ ಮದ್ವೆಯಾಗಿ ಚಿತ್ರಹಿಂಸೆ ನೀಡುತ್ತಿದ್ದಾಳೆಂದು ಕಮ್ರಾನ್ ಖಾನ್ ದೂರಿನಲ್ಲಿ ತಿಳಿಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:42 pm, Mon, 13 March 23