ಕಲಬುರಗಿ: ಐಎಸ್​ಡಿ ಎಸ್​ಪಿ ಮತ್ತು ಪತ್ನಿ ಎಎಸ್​ಐ ವಿರುದ್ಧ ದೂರು ನೀಡಿದ ಪೊಲೀಸ್ ಹೆಡ್ ಕಾನ್​ಸ್ಟೇಬಲ್

Kalaburagi News: ಆಂತರಿಕ ಭದ್ರತಾ ವಿಭಾಗ (IDS) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಅದೇ ವಿಭಾಗದಲ್ಲಿ ಎಎಸ್​ಐ ಆಗಿರುವ ಮಹಿಳೆಯ ನಡುವೆ ಅಕ್ರಮ ಸಂಬಂಧ ಇದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಮಹಿಳಾ ಎಎಸ್​ಐ ಪತಿಯೂ ಆಗಿರುವ ಹೆಡ್​ಕಾನ್​​ಸ್ಟೇಬಲ್ ದೂರು ದಾಖಲಿಸಿದ್ದಾರೆ.

ಕಲಬುರಗಿ: ಐಎಸ್​ಡಿ ಎಸ್​ಪಿ ಮತ್ತು ಪತ್ನಿ ಎಎಸ್​ಐ ವಿರುದ್ಧ ದೂರು ನೀಡಿದ ಪೊಲೀಸ್ ಹೆಡ್ ಕಾನ್​ಸ್ಟೇಬಲ್
ಆಂತರಿಕ ಭದ್ರತಾ ವಿಭಾಗ (IDS) ಕಲಬುರಗಿ
Follow us
Rakesh Nayak Manchi
|

Updated on:Mar 13, 2023 | 7:04 PM

ಕಲಬುರಗಿ: ಆಂತರಿಕ ಭದ್ರತಾ ವಿಭಾಗ (ISD Kalaburagi) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ತನ್ನ ಪತ್ನಿಯೂ ಆಗಿರುವ ಎಎಸ್​ಐ ವಿರುದ್ಧವೇ ಪೊಲೀಸ್ ಹೆಡ್ ಕಾನ್ಸಟೇಬಲ್ ಒಬ್ಬರು ಕಲಬುರಗಿ ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಲಬುರಗಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಹೆಡ್ ಕನ್​ಸ್ಟೇಬಲ್ ಆಗಿರುವ ಕಂಠೆಪ್ಪಾ ಎಂಬವರು ತನ್ನ ಪತ್ನಿ ಜೊತೆ ಎಸ್​ಪಿ ಅಕ್ರಮ ಸಂಬಂಧ ಹೊಂದಿರುವುದಾಗಿ ಆರೋಪಿಸಿ ಮಾರ್ಚ್ 11 ರಂದು ದೂರು ನೀಡಿದ್ದಾರೆ. ಕಲಬುರಗಿ ನಗರದಲ್ಲಿರುವ ಐಎಸ್​ಡಿಯಲ್ಲಿ ಎಎಸ್​ಐ ಆಗಿ ನನ್ನ ಪತ್ನಿ ಕರ್ತವ್ಯ ನಿರ್ಹಿಸುತ್ತಿದ್ದಾರೆ. ಈಕೆಯ ಜೊತೆಗೆ ಐಎಸ್​ಡಿ ಎಸ್​ಪಿ ಅರುಣ್ ರಂಗರಾಜನ್ ಅವರು ಅಕ್ರಮ ಸಂಬಂಧ (Illicit relationship) ಹೊಂದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಅರುಣ್ ರಂಗರಾಜನ್ ಅವರು ನನ್ನ ಪತ್ನಿಗೆ ಅಶ್ಲೀಲ ಸಂದೇಶ ಕಳುಹಿಸುವುದು, ಅಶ್ಲೀಲವಾಗಿ ಮಾತನಾಡುವುದನ್ನು ಮಾಡುತ್ತಾರೆ. ನನ್ನ ಪತ್ನಿ ನಮ್ಮ ಮನೆ ಬಿಟ್ಟು ಅರುಣ್ ರಂಗರಾಜನ್ ಅವರಿರುವ ಲೋಕೋಪಯೋಗಿ ಇಲಾಖೆ ಕ್ವಾಟರ್ಸ್ ನಲ್ಲಿಯೇ ಸಮಯ ಕಳೆಯುತ್ತಿದ್ದಾರೆ ಎಂದು ಕಂಠೆಪ್ಪಾ ಅವರು ಆರೋಪಿಸಿದ್ದಾರೆ. ಜೊತೆಗೆ ನಾನು ಇಲ್ಲದೇ ಇದ್ದಾಗ ತನ್ನ ಪತ್ನಿ ಮನೆಗೆ ಬಂದು, ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕೂಡಾ ತೆಗೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಇಬ್ಬರನ್ನು ಪ್ರಶ್ನಿಸಿದರೆ, ನನ್ನ ಮೇಲೆ ಇಬ್ಬರು ಹಲ್ಲೆ ಮಾಡಿದ್ದಾರೆ ಅಂತ ಕಂಠೆಪ್ಪಾ ಆರೋಪಿಸಿದ್ದಾರೆ. ಇನ್ನು ನಮಗೆ ಇಬ್ಬರು ಮಕ್ಕಳು ಇದ್ದಾರೆ. ಇದೀಗ ನನ್ನ ಮತ್ತು ನನ್ನ ಮಕ್ಕಳನ್ನು ಅರುಣ್ ರಂಗರಾಜನ್ ಮತ್ತು ಪತ್ನಿ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ ಅಂತ ದೂರಿನಲ್ಲಿ ಕಾನ್ಸಟೇಬಲ್ ಕಂಠೆಪ್ಪಾ ಆರೋಪಿಸಿದ್ದಾರೆ.

ಇದನ್ನೂ ಓದಿ: ಆ ಕಡೆ ಅಕ್ರಮ ಸಂಬಂಧ, ಈ ಕಡೆ ಕೊಟ್ಯಾಂತರ ರೂ ಮೌಲ್ಯದ ಗದ್ದೆ ಮೇಲೆ ಕಣ್ಣು! ಮದುವೆಗೆ ಸಿದ್ಧತೆ ನಡೆಸಿದ ತಮ್ಮನನ್ನೇ ಸಾಯಿಸಿದ ಅಣ್ಣ!

ಪ್ರೀತಿಸಿ ಮದುವೆಯಾಗಿದ್ದ ಹೆಡ್ ಕಾನ್​ಸ್ಟೇಬಲ್

ಹೆಡ್ ಕಾನ್​ಸ್ಟೇಬಲ್ ಕಂಠೆಪ್ಪಾ ಅವರು ಸುಜಾತಾ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದರು. ತಾನು 2005 ರಲ್ಲಿ ಗ್ರಾಮೀಣ ಠಾಣೆಯಲ್ಲಿ ಸೇವೆಯಲ್ಲಿದ್ದಾಗ ಇದೇ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಕಾನ್ಸಟೇಬಲ್ ಆಗಿದ್ದ ಸುಜಾತಾ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದೆ. ನಮಗೆ ಇಬ್ಬರು ಮಕ್ಕಳು ಕೂಡಾ ಇದ್ದಾರೆ. ಆದರೆ ಕುಟುಂಬದ ಗೌರವವನ್ನು ಕಳೆದು, ಪತ್ನಿ ಇದೀಗ ಎಸ್​ಪಿ ಜೊತೆ ಸಂಬಂಧ ಹೊಂದಿದ್ದಾಳೆ ಅಂತ ಕಂಠೆಪ್ಪಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಕಂಠೆಪ್ಪಾ ನೀಡಿದ ದೂರಿನ ಆಧಾರದ ಮೇಲೆ ಎಸ್​ಪಿ ಅರುಣ್ ರಂಗರಾಜನ್ ಮತ್ತು ಎಎಸ್‌ಐ ಸುಜಾತ ವಿರುದ್ಧ 323, 324, 376, 420, 109, 504, 506 ಸೆಕ್ಷನ್ ಅಡಿ ದೂರು ದಾಖಲಾಗಿದೆ.

ಆರೋಪ ಅಲ್ಲಗಳೆದ ಐಎಸ್​ಡಿ ಎಸ್​ಪಿ

ಹೆಡ್ ಕಾನ್​ಸ್ಟೇಬಲ್ ಕಂಠೆಪ್ಪಾ ಮಾಡಿರುವ ಆರೋಪಗಳನ್ನು ಐಎಸ್​ಡಿ ಎಸ್​ಪಿ ಅರುಣ್ ರಂಗರಾಜನ್ ಅಲ್ಲಗಳೆದಿದ್ದಾರೆ. ಅವರ ಪತ್ನಿ ಅವರ ಜೊತೆ ಇಲ್ಲದೇ ಇದ್ದರೆ ನಾನು ಏನು ಮಾಡಲು ಆಗಲ್ಲಾ. ಅದು ಅವರಿಗೆ ಬಿಟ್ಟ ವಿಚಾರ. ಅವರ ಪತ್ನಿಯನ್ನು ಹುಡುಕಿ ಕೊಡುವುದು ನನ್ನ ಕೆಲಸವಲ್ಲ. ಅವರ ಪತ್ನಿ ಅವರನ್ನು ಯಾಕೆ ಬಿಟ್ಟು ಹೋಗಿದ್ದಾರೆ ಅಂತ ಅವರೇ ಉತ್ತರಿಸಬೇಕು. ಕಂಠೆಪ್ಪಾ ಅನೇಕ ನಿರಾದಾರ ಆರೋಪಗಳನ್ನು ಮಾಡಿದ್ದಾರೆ ಅಂತ ಹೇಳಿದ್ದಾರೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:01 pm, Mon, 13 March 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್