ಆ ಕಡೆ ಅಕ್ರಮ ಸಂಬಂಧ, ಈ ಕಡೆ ಕೊಟ್ಯಾಂತರ ರೂ ಮೌಲ್ಯದ ಗದ್ದೆ ಮೇಲೆ ಕಣ್ಣು! ಮದುವೆಗೆ ಸಿದ್ಧತೆ ನಡೆಸಿದ ತಮ್ಮನನ್ನೇ ಸಾಯಿಸಿದ ಅಣ್ಣ!

ಅದೇ ಕಟುಕತನದಿಂದ ಕೊಲೆ ಮಾಡಿದ ದೇಹವನ್ನು ರಾತ್ರೋರಾತ್ರಿ ಎಲ್ಲಿಗೆ ಒಯ್ಯೋದು ಅಂತಾ ತಿಳಿಯದೆ, ಮನೆಯಲ್ಲಿದ್ದ ಬೆಡ್ ಶೀಟ್ ಹಾಗೂ ಚಾಪೆಯಲ್ಲಿ ಸುತ್ತಿ ಮನೆಯ ಮೊಲೆಯಲ್ಲಿಯೇ ಇಟ್ಟಿದ್ದ. ಮೂರು ದಿನಗಳ ಬಳಿಕ ಫೆಬ್ರವರಿ 5 ರ ರಾತ್ರಿ ಹೆಚ್ಚಿಗೆ ವಾಸನೆ ಬಂದಾಗ ಪ್ಲಾನ್ ಚೇಂಜ್ ಆಗಿದೆ

ಆ ಕಡೆ ಅಕ್ರಮ ಸಂಬಂಧ, ಈ ಕಡೆ ಕೊಟ್ಯಾಂತರ ರೂ ಮೌಲ್ಯದ ಗದ್ದೆ ಮೇಲೆ ಕಣ್ಣು! ಮದುವೆಗೆ ಸಿದ್ಧತೆ ನಡೆಸಿದ ತಮ್ಮನನ್ನೇ ಸಾಯಿಸಿದ ಅಣ್ಣ!
ಮದುವೆಗೆ ಸಿದ್ಧತೆ ನಡೆಸಿದ ತಮ್ಮನನ್ನೇ ಸಾಯಿಸಿದ ಅಣ್ಣ!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Feb 23, 2023 | 6:30 AM

ಕೊಟ್ಯಾಂತರ ರೂಪಾಯಿ ಬೆಲೆ ಬಾಳುವ 12 ಎಕರೆ ಜಮೀನು ಮಾಡಿಟ್ಟಿದ್ದ ತಂದೆ ವಿಧಿವಶರಾಗಿ ಕೆಲವೇ ದಿನವಾಗಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ತಮ್ಮನ ಮದುವೆ ಆಗಬೇಕಿತ್ತು. ತಂದೆ ಆಸ್ತಿಯಲ್ಲಿ (property) ತಮ್ಮನೂ ಪಾಲುದಾರನಾಗ್ತಾನೆ ಎಂಬ ಆತಂಕ, ದುರಾಸೆಯಿಂದ ಒಡಹುಟ್ಟಿದ ತಮ್ಮನನ್ನೆ (younger brother) ಮನೆಯಲ್ಲಿ ಕೊಂದು (murder) ಬೇರೆ ಜಮೀಮಿನಲ್ಲಿ ಬಿಸಾಡಿದ್ದ, ಇದರ ಫುಲ್ ಸ್ಟೋರಿ ಇಲ್ಲಿದೆ ನೋಡಿ…. ಕುಲ ಕುಲ ಎಂದು ಹೊಡೆದಾಡದಿರಿ ಎಂಬ ಸಂದೇಶ ಸಾರಿದ್ದ, ಸಂತಶ್ರೇಷ್ಠ ಕನಕದಾಸರು ಜನ್ಮ ತಾಳಿದ ಕಾಗಿನೆಲೆ (kaginele) ಎಂಬ ಪವಿತ್ರ ಸ್ಥಳದಲ್ಲಿ ನಡೆದಿರುವ ಘಟನೆ ಕೇಳಿದ್ರೆ ನಿಜಕ್ಕೂ ಬೆಚ್ಚಿ ಬಿಳ್ತೀರಿ.

ಕಾಗಿನೆಲೆ ಗ್ರಾಮದ ಹೆದ್ದಾರಿ ಪಕ್ಕದಲ್ಲೆ ಇರುವ ಸುಮಾರು 12 ಎಕರೆ ಜಮೀನಿಗಾಗಿ ಅಣ್ಣ ಜಾಫರ್ ಮತ್ತು ತಮ್ಮ ನೂರುಲ್ಲಾ ನಡುವೆ ಆಗಾಗ ಜಗಳಗಳು ನಡೆಯುತ್ತಿತ್ತು. ಜಗಳ ಆದಾಗಲೆಲ್ಲ ನಿನ್ನ ಮುಗಿಸ್ತೀನಿ ಅಂತಾ ಅಣ್ಣನೇ ತಮ್ಮನಿಗೆ ಹೇಳುತ್ತಿದ್ದ. ಆದ್ರೆ ಇದನ್ನ ಅಷ್ಟೊಂದು ಸೀರಿಯಸ್ ಆಗಿ ತೆಗೆದುಕೊಳ್ಳದೆ ತನ್ನ ಪಾಡಿಗೆ ತಾನಿದ್ದ ತಮ್ಮನಿಗೆ ರಾತ್ರೋ ರಾತ್ರಿ ಅಣ್ಣ ಜಾಫರ್ ಮುಹೂರ್ತ ಫಿಕ್ಸ್ ಮಾಡಿದ್ದ. ಫೆಬ್ರವರಿ 3 ರ ರಾತ್ರಿ ಮನೆಯಲ್ಲಿ ನಿದ್ದೆ ಮಾಡುತ್ತಿದ್ದ ತಮ್ಮನ ತಲೆಗೆ ಹಾಗೂ ಗುಪ್ತಾಂಗಕ್ಕೆ ರಾಡ್ ನಿಂದ ಹೊಡೆದು ಕೊಲೆ ಮಾಡಿಬಿಟ್ಟಿದ್ದ.

ಅದೇ ಕಟುಕತನದಿಂದ ಕೊಲೆ ಮಾಡಿದ ದೇಹವನ್ನು ರಾತ್ರೋರಾತ್ರಿ ಎಲ್ಲಿಗೆ ಒಯ್ಯೋದು ಅಂತಾ ತಿಳಿಯದೆ, ಮನೆಯಲ್ಲಿದ್ದ ಬೆಡ್ ಶೀಟ್ ಹಾಗೂ ಚಾಪೆಯಲ್ಲಿ ಸುತ್ತಿ ಮನೆಯ ಮೊಲೆಯಲ್ಲಿಯೇ ಇಟ್ಟಿದ್ದ. ಮೂರು ದಿನಗಳ ಬಳಿಕ ಫೆಬ್ರವರಿ 5 ರ ರಾತ್ರಿ ಹೆಚ್ಚಿಗೆ ವಾಸನೆ ಬಂದ ಬೆನ್ನಲ್ಲೆ, ತನ್ನ ದ್ವಿಚಕ್ರ ವಾಹನಕ್ಕೆ ಹಿಂದೆಯಿಂದ ಕಟ್ಟಿ, ಹಾನಗಲ್ ತಾಲೂಕು ಅಕ್ಕಿ ಆಲೂರು ಕಡೆ ಹೊರಟಿದ್ದ. ಅಕ್ಕಿ ಆಲೂರಿಗೆ ಬರುವಷ್ಟರಲ್ಲಿ ವಾಹನಕ್ಕೆ ಕಟ್ಟಿದ್ದ ಬಾಡಿ ಕೆಳಗೆ ಬಿದ್ದಿದೆ. ಆಗ ಏನು ಮಾಡೋದು ಅಂತಾ ತಿಳಿಯದೆ, ಅಲ್ಲೆ ಪಕ್ಕದಲ್ಲೆ ಇದ್ದ ಮೆಕ್ಕೆಜೋಳದ ಗದ್ದೆಯಲ್ಲಿ ಬಿಸಾಕಿ ಹೊಗಿದ್ದ.

ಫೆಬ್ರವರಿ 6 ರಂದು ಹಾನಗಲ್ ಪೊಲೀಸರಿಗೆ ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದಾಗ ಶವದ ಗುರುತು ಪತ್ತೆ ಮಾಡಲು ನೋಡಿದ್ರೆ, ಮೃತನ ಮುಖವನ್ನು ಪತ್ತೆ ಹಚ್ಚದಂತೆ ಕಲ್ಲಿನಿಂದ ಜಜ್ಜಿ ಹಾಕಲಾಗಿತ್ತು. ಪೊಲೀಸ್ರು 302 ಹಾಗೂ 201 ಐಪಿಸಿ ಅಡಿ ಕೇಸ್ ದಾಖಲು ಮಾಡಿ ತನಿಖೆ ಪ್ರಾರಂಭಿಸಿದಾಗ, ಪ್ರಕರಣ ಬೆಳಕಿಗೆ ಬಂದಿದ್ದು ಆರೋಪಿ, ಝಾಫರ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಇನ್ನು ಮೃತ ನೂರುಲ್ಲಾ ಕೆಲವೆ ದಿನಗಳಲ್ಲಿ ಮದುವೆ ಆಗಲು ಎಲ್ಲ ತಯಾರಿ ನಡೆಸಿಕೊಂಡಿದ್ದ. ಆದ್ರೆ ತಂದೆಯ ಆಸ್ತಿ ವಿಚಾರವಾಗಿ ಹಾಗೂ ತನ್ನ ಹೆಂಡತಿಯ ಜೊತೆಗೆ ಆಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದಿಂದ ಕುಕೃತ್ಯವೆಸಗಿದ್ದ ಝಾಪರ್ ಇದೀಗ ಹಾನಗಲ್ ಪೊಲೀಸ್ರ ಅತಿಥಿಯಾಗಿದ್ದಾನೆ.

ವರದಿ: ಸೂರಜ್ ಉತ್ತೂರೆ, ಟಿವಿ 9, ಹಾವೇರಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ