ಬೆಂಗಳೂರು, ಫೆಬ್ರವರಿ 25: ನಗರದ ಥಾಯ್ ಸ್ಪಾ ಹೆಸರಿನ ವೇಶ್ಯಾವಾಟಿಕೆ ಅಡ್ಡೆ ಮೇಲೆ ಯಲಹಂಕ ನ್ಯೂಟೌನ್ ಪೊಲೀಸರು (Police) ದಾಳಿ ಮಾಡಿದ್ದು, ಆಂಜನೇಯಗೌಡ, ಹರೀಶ್ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತು ಏಳು ಜನ ಯುವತಿಯರನ್ನು ರಕ್ಷಣೆ ಮಾಡಿದ್ದಾರೆ. ರೋರಾ ಲಕ್ಸುರಿ ಥಾಯ್ ಸ್ಪಾ (ಮಸಾಜ್ ಪಾರ್ಲರ್) ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ (Prostitution racket) ನಡೆಸುತ್ತಿದ್ದರು. ಆರೋಪಿಗಳು ಥೈಲ್ಯಾಂಡ್ ಸೇರಿದಂತೆ ವಿವಿಧ ದೇಶದ ಮಹಿಳೆಯರನ್ನು ಟೂರಿಸ್ಟ್ ವೀಸಾ ಹಾಗೂ ಬ್ಯುಸಿನೆಸ್ ವೀಸಾ ಮೂಲಕ ಬೆಂಗಳೂರಿಗೆ ಕರೆತಂದು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದರು. ಈ ವಿಚಾರ ತಿಳಿದ ಈಶಾನ್ಯ ವಿಭಾಗದ ಡಿಸಿಪಿ, ಯಲಹಂಕ ನ್ಯೂಟೌನ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೆ ಪೊಲೀಸರು ದಾಳಿ ಮಾಡಿದ್ದಾರೆ. ಆರೋಪಿಗಳ ವಿರುದ್ಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಂದೂವರೆ ಲಕ್ಷ ಸಂಬಳದ ಕೆಲಸದಲ್ಲಿದ್ದ ಟೆಕ್ಕಿ ಹಣದ ದಾಹಕ್ಕೆ ಬಿದ್ದು ಸ್ಟಾಕ್ ಮಾರ್ಕೆಟ್ನಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡು ಲಕ್ಷಲಕ್ಷ ಸಾಲವನ್ನು ಮಾಡಿದ್ದನು. ಆದರೆ ತಂತ್ರಜ್ಞಾನದಲ್ಲಿ ಹೆಚ್ಚಿನ ಜ್ಞಾನ ಹೊಂದಿದ್ದ ಈತ ಕೆಲಸಕ್ಕೆ ಗುಡ್ಬೈ ಹೇಳಿ ಮ್ಯಾಟ್ರಿಮೋನಿ ಮಾದರಿಯ ಆ್ಯಪ್ ಅಭಿವೃದ್ಧಿ ಮಾಡಿ ಹಣ ಸಂಪಾದಿಸುತ್ತಿದ್ದನು. ನಂತರ ಕೋಟ್ಯಾಂತರ ರೂಪಾಯಿ ಸಂಪಾದಿಸುಲು ಈ ಟೆಕ್ಕಿ ವೇಶ್ಯಾವಾಟಿಕೆ ದಂಧೆಯ ಹಾದಿ ಹಿಡಿದ್ದನು.
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ವೈಶಾಕ್ಗೆ ವೇತನಕ್ಕೇನು ಕೊರತೆ ಇರಲಿಲ್ಲ. ತಿಂಗಳಿಗೆ ಒಂದೂವರೆ ಲಕ್ಷರೂಪಾಯಿ ಸಂಬಳ ಪಡೆಯುತ್ತಿದ್ದನು. ಹೈಟೆಕ್ ಲೈಫ್ ಸಾಗಿಸುತ್ತಿದ್ದನು. ಆದರೆ ಸ್ಟಾಕ್ ಮಾರ್ಕೆಟ್ ಹುಚ್ಚಿಗೆ ಬಿದ್ದ ವೈಶಾಕ್ ಅದರಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡಿದ್ದನು. ಅಲ್ಲದೆ, ಲಕ್ಷ ಲಕ್ಷ ಸಾಲ ಮಾಡಿದ್ದನು.
ಟೆಕ್ನಾಲಜಿಯಲ್ಲಿ ತಂತ್ರಾಜ್ಞಾನದಲ್ಲಿ ಜ್ಞಾನ ಹೊಂದಿದ್ದ ವೈಶಾಕ್, ಉತ್ತಮ ವೇತನದ ಕಲಸ ಬಿಟ್ಟು ತಲೆ ಕೆಡಿಸಿಕೊಂಡಿದ್ದನು. ನಂತರ ಹಣ ಸಂಪಾದಿಸಲು ಮ್ಯಾಟ್ರಿಮೋನಿ ಮಾದರಿಯ ಆ್ಯಪ್ ಅಭಿವೃದ್ಧಿಪಡಿಸಿ ಅದರಲ್ಲಿ ವಿವಾಹವಾಗಲು ಇಚ್ಚಿಸುತ್ತಿರುವ ಯುವಕ-ಯುವತಿಯರನ್ನ ಆ್ಯಡ್ ಮಾಡಿ ಸಂಪರ್ಕ ಕಲ್ಪಿಸುತ್ತಿದ್ದನು.
ಇಬ್ಬರಿಗೂ ಪರಸ್ಪರ ಕಾಂಟ್ಯಾಕ್ಟ್ ಮಾಡಿಸಲು ಹಣ ಪಡೆಯುತ್ತಿದ್ದನು. ಹೀಗೆ ಉತ್ತಮ ರೀತಿಯಲ್ಲಿ ಬ್ಯುಸಿನೆಸ್ ಸಾಗುತ್ತಿದ್ದಂತೆ ಬಿಟೆಕ್ ಮುಗಿಸಿದ್ದ ಗೋವಿಂದರಾಜು ಎಂಬಾತ ಈ ಆ್ಯಪ್ಗೆ ಎಂಟ್ರಿಕೊಟ್ಟಿದ್ದನು. ಆ್ಯಪ್ನ ಪ್ರೈವಸಿ ವರ್ಕ್ ನೋಡಿ ಶಾಕ್ ಆಗಿದ್ದ ಗೋವಿಂದರಾಜು, ವೈಶಾಕ್ನನ್ನು ಸಂಪರ್ಕಿಸಿ ಮ್ಯಾಟ್ರಿಮೋನಿ ಕೆಲಸದ ಬದಲು ವೇಶ್ಯಾವಾಟಿಕೆ ದಂಧೆ ನಡೆಸುವಂತೆ ಖತರ್ನಾಕ್ ಐಡಿಯಾ ಕೊಟ್ಟಿದ್ದನು.
ಇದನ್ನೂ ಓದಿ: ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ಪೊಲೀಸರ ದಾಳಿ; ಯುವತಿ ರಕ್ಷಣೆ
ಅಲ್ಲದೆ, ವಿದೇಶಿ ಮಹಿಳೆಯರಿಗೆ ಸಖತ್ ಡಿಮ್ಯಾಂಡ್ ಇದೆ, ಕೋಟಿ ಕೋಟಿ ಹಣ ಮಾಡಬಹುದು ಎಂದು ಮೈಂಡ್ ವಾಶ್ ಮಾಡಿದ್ದನು. ಅದಾಗಲೇ ಗೋವಿಂದರಾಜು ವಿದೇಶಿ ಪಿಂಪ್ ಜೊತೆ ಸಂಪರ್ದದಲ್ಲಿದ್ದನು. ಆಕೆಯಿಂದ ವಿದೇಶಿ ಯುವತಿಯರು ಸಿಗುತ್ತಾರೆ. ನೀನು ಕಾಂಟೆಕ್ಟ್ನಲ್ಲಿ ಗ್ರಾಹಕರನ್ನು ಹುಡುಕು ಎಂದು ವೈಶಾಕ್ಗೆ ಹೇಳಿದ್ದನು.
ಕೋಟಿಕೋಟಿ ಹಣ ಸಂಪಾದಿಸಲು ದಂಧೆಗೆ ಇಳಿದ ವೈಶಾಗ್ಗೆ ಗೋವಿಂದರಾಜು ಆತನ ಆ್ಯಪ್ನಲ್ಲಿದ್ದ ಕೆಲವು ಕಸ್ಟಮರ್ಗಳನ್ನು ಹುಡುಕಿ ಕೊಡುತ್ತಿದ್ದನು. ದಿನ ಕಳೆದಂತೆ ಈ ದಂಧೆಯಿಂದ ಹೆಚ್ಚಿನ ಹಣ ಬರುವುದನ್ನು ನೋಡಿದ ವೈಶಾಕ್, ಇತರೆ ಇಬ್ಬರೊಂದಿಗೆ ಸೇರಿಕೊಂಡು ಹಲವು ವರ್ಷಗಳಿಂದ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದನು.
ರಷ್ಯಾ, ಖಜಕಿಸ್ತಾನ ಸೇರಿ ಬೇರೆ ಬೇರೆ ದೇಶಗಳಿಂದ ಯುವತಿಯರನ್ನು ಕರೆಸುತ್ತಿದ್ದರು. ಈ ವಿಚಾರ ತಿಳಿದ ಬೆಂಗಳೂರು ನಗರದ ಬಯ್ಯಪ್ಪನಹಳ್ಳಿ ಠಾಣಾ ಪೊಲೀಸರು, ಆರೋಪಿಗಳಾದ ವಿದೇಶಿ ಮಹಿಳೆ, ಗೋವಿಂದರಾಜು ಹಾಗೂ ವೈಶಾಕ್ನನ್ನ ಬಂಧಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ