ಬೆಂಗಳೂರು: ನಗರದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಕೋಲಾರದ ವೇಮಗಲ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ಪನ್ನೀರ್ ಸೆಲ್ವಂ ಮೃತ ದುರ್ದೈವಿ.
ಕೋಲಾರದ ವೇಮಗಲ್ ಠಾಣಾ ವ್ಯಾಪ್ತಿಯ ನೀಲಗಿರಿ ತೋಪಿನಲ್ಲಿ ಪನ್ನೀರ್ ಸೆಲ್ವಂ ಶವ ಪತ್ತೆಯಾಗಿದೆ. ಬೆಂಗಳೂರಿನ ರಾಮಮೂರ್ತಿನಗರ ಠಾಣಾ ವ್ಯಾಪ್ತಿ ನಿವಾಸಿಯಾಗಿದ್ದ ಮೃತ ರಿಯಲ್ ಎಸ್ಟೇಟ್ ಉದ್ಯಮಿಗೆ ಸಂಬಂಧಿಕರೇ ವಿಷ ಉಣಿಸಿ ಕೊಂದಿರುವ ಶಂಕೆ ವ್ಯಕ್ತವಾಗಿದೆ.
ಈ ಹಿಂದೆ ಪನ್ನೀರ್ ಸೆಲ್ವಂ ಕಾಣೆಯಾಗಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಇದೀಗ ಆತನ ಶವ ಪತ್ತೆಯಾಗಿದ್ದು ಪೊಲೀಸರು ಹಚ್ಚಿನ ತನಿಖೆ ಮುಂದುವರೆಸಿದ್ದಾರೆ.