ಅಪರಾಧ ಸುದ್ದಿ: ಸಿಗರೇಟ್​ ಸೇದುವ ವಿಚಾರಕ್ಕೆ ಜಗಳ; ಮಾರಕಾಸ್ತ್ರ ಬಳಸಿ ರೌಡಿಶೀಟರ್​ ವಸೀಂ ಬರ್ಬರ ಹತ್ಯೆ

ಹತ್ಯೆಯಾಗಿರುವ ರೌಡಿಶೀಟರ್​ ವಸೀಂ ಗಂಗೊಂಡನಹಳ್ಳಿ ನಿವಾಸಿಯಾಗಿದ್ದು, ಜೆ.ಜೆ.ನಗರ, ಬ್ಯಾಟರಾಯನಪುರ ಠಾಣೆ ರೌಡಿಶೀಟರ್ ಆಗಿದ್ದ ಎಂದು ತಿಳಿದುಬಂದಿದೆ. ರೌಡಿ ವಸೀಂನನ್ನು ಕೊಂದು ಸಹಚರರು ಪರಾರಿಯಾಗಿದ್ದಾರೆ.

ಅಪರಾಧ ಸುದ್ದಿ: ಸಿಗರೇಟ್​ ಸೇದುವ ವಿಚಾರಕ್ಕೆ ಜಗಳ; ಮಾರಕಾಸ್ತ್ರ ಬಳಸಿ ರೌಡಿಶೀಟರ್​ ವಸೀಂ ಬರ್ಬರ ಹತ್ಯೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ganapathi bhat

Updated on:Apr 05, 2022 | 1:06 PM

ಬೆಂಗಳೂರು: ನಗರದಲ್ಲಿ ಸಹಚರರಿಂದಲೇ ರೌಡಿಶೀಟರ್​ ಒಬ್ಬನ ಬರ್ಬರ ಹತ್ಯೆಯಾಗಿದೆ. ಮಾರ್ಚ್ 26ರ ರಾತ್ರಿ ನಡೆದಿರುವ ಈ ಕೊಲೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸಿಗರೇಟ್​ ಸೇದುವ ವಿಚಾರಕ್ಕೆ ಜಗಳ ಆರಂಭವಾಗಿ, ಅದು ತೀವ್ರ ರೂಪ ತಾಳಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್​ ವಸೀಂ ಬರ್ಬರ ಹತ್ಯೆ ಮಾಡಲಾಗಿದೆ. ಹತ್ಯೆಯಾಗಿರುವ ರೌಡಿಶೀಟರ್​ ವಸೀಂ ಗಂಗೊಂಡನಹಳ್ಳಿ ನಿವಾಸಿಯಾಗಿದ್ದು, ಜೆ.ಜೆ.ನಗರ, ಬ್ಯಾಟರಾಯನಪುರ ಠಾಣೆ ರೌಡಿಶೀಟರ್ ಆಗಿದ್ದ ಎಂದು ತಿಳಿದುಬಂದಿದೆ. ರೌಡಿ ವಸೀಂನನ್ನು ಕೊಂದು ಸಹಚರರು ಪರಾರಿಯಾಗಿದ್ದಾರೆ. ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ಕರಾವಳಿಯಲ್ಲಿದೆ 15ಕ್ಕೂ ಹೆಚ್ಚು ಕೀಚಕರಿರುವ ಕಾಮುಕ ಗ್ಯಾಂಗ್ ಬೆತ್ತಲೆ ಫೋಟೋ ಹಾಕಿಸಿಕೊಂಡು ಅಪ್ರಾಪ್ತೆಯರಿಗೆ ಬ್ಲ್ಯಾಕ್‌ಮೇಲ್ ಮಾಡುವ ಗ್ಯಾಂಗ್ ಕರಾವಳಿಯಲ್ಲಿರುವುದು ಬೆಳಕಿಗೆ ಬಂದಿದೆ. ಮಂಗಳೂರಿನ ಬಜ್ಪೆ ಪೊಲೀಸರು ಕಾಮುಕ ಗ್ಯಾಂಗ್​ನ ಮೊಹಮ್ಮದ್ ಮುನೀರ್, ತಸ್ಲೀಮ್, ಮೊಹಮ್ಮದ್ ಸಾಬೀಲ್ ಬಂಧನವಾಗಿದೆ. ಸದ್ಯ ಮೂವರ ಬಂಧನವಾಗಿದ್ದು, ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

18 ವರ್ಷ ವಯಸ್ಸಿನ ಹುಡುಗರನ್ನು ಬಿಟ್ಟು ಬಾಲಕಿಯರಿಗೆ ಕಿರುಕುಳ ನೀಡಲಾಗುತ್ತಿತ್ತು. ಅಪ್ರಾಪ್ತ ಬಾಲಕಿಯರನ್ನೇ ಟಾರ್ಗೆಟ್‌ ಮಾಡ್ತಿದ್ದ ಕಾಮುಕ ಗ್ಯಾಂಗ್, 14 ವರ್ಷದ ಬಾಲಕಿಯರನ್ನು ಖೆಡ್ಡಾಗೆ ಕೆಡವಿ ಲೈಂಗಿಕ ಕಿರುಕುಳ ನೀಡುತ್ತಿತ್ತು. ಖಾಸಗಿ ಫೋಟೋ, ವಿಡಿಯೋ ತರಿಸಿಕೊಂಡು ಕಿರುಕುಳ ನೀಡುತ್ತಿದ್ದರು. ಗ್ಯಾಂಗ್‌ನ ಕೃತ್ಯ ಗೊತ್ತಾಗಿ ಬಾಲಕಿ ಪೋಷಕರು ದೂರು ನೀಡಿದ್ದರು.

ಇದೀಗ ಬಂಧಿತರು ಕಾಮುಕ ಗ್ಯಾಂಗ್ ಬಗ್ಗೆ ಮಾಹಿತಿ ನೀಡಿದ್ದಾರೆ. ಸಾಕಷ್ಟು ಬಾಲಕಿಯರಿಗೆ-ಯುವತಿಯರಿಗೆ ಲೈಂಗಿಕ ದೌರ್ಜನ್ಯ ನೀಡಿರುವ ವಿಚಾರ ತಿಳಿದುಬಂದಿದೆ.

ಮಡಿಕೇರಿ: ತಮಿಳುನಾಡು‌ ಮೂಲದ‌ ವ್ಯಕ್ತಿ ಬಂಧನ ನಕ್ಷತ್ರ ಆಮೆ‌ ಮಾರಾಟಕ್ಕೆ ಯತ್ನಿಸುತ್ತಿದ್ದ ತಮಿಳುನಾಡು‌ ಮೂಲದ‌ ವ್ಯಕ್ತಿಯನ್ನು ಬಂಧಿಸಲಾಗಿದೆ. ಮಡಿಕೇರಿಯಲ್ಲಿ ಪಳನಿಯಪ್ಪನ್(32) ಎಂಬಾತನನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಕೊಡಗು ಜಿಲ್ಲೆಯ ಮಡಿಕೇರಿ‌ಯ ಅಶೋಕಪುರದಲ್ಲಿ ಆರೋಪಿ ಸೆರೆಯಾಗಿದ್ದಾನೆ.

ಇದನ್ನೂ ಓದಿ: ಆರ್.ಟಿ. ನಗರದಲ್ಲಿ ಬಾರ್ ಡ್ಯಾನ್ಸರ್ ಬರ್ಬರ ಹತ್ಯೆ; ಕೊಲೆಯ ಹಿಂದಿನ ಕಾರಣ ನಿಗೂಢ

ರಾತ್ರೋರಾತ್ರಿ ಖಾಕಿ ಗನ್ ಸದ್ದು.. ಆತ್ಮ ರಕ್ಷಣೆಗೆ ಫೈರಿಂಗ್ ಮಾಡಿ ಕೊಲೆ ಆರೋಪಿ ಬಂಧಿಸಿದ ಪೊಲೀಸ್

Published On - 11:30 pm, Sun, 28 March 21

ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್