AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವನಹಳ್ಳಿ: ಕಳ್ಳ ಮುತ್ಯಾಲಪ್ಪ ಕೊಲೆ ಪ್ರಕರಣ, ವಕೀಲ ಸೇರಿದಂತೆ ಇಬ್ಬರ ಬಂಧನ

ಮುತ್ಯಾಲಪ್ಪ ಎಂಬಾತನನ್ನು ಪುಸಲಾಯಿಸಿ ಆಂಧ್ರಪ್ರದೇಶದ ಅನಂತಪುರಕ್ಕೆ ಕರೆದೊಯ್ದ ಆರೋಪಿಗಳು ರಾಡ್​ನಿಂದ ಹೊಡೆದು ಕೊಲೆ ಮಾಡಿ ಬಳಿಕ ಶವ ತಂದು ವಿಜಯಪುರದ ಬುಲ್ಲಹಳ್ಳಿ ಬಳಿ ಎಸೆದಿದ್ದರು.

ದೇವನಹಳ್ಳಿ: ಕಳ್ಳ ಮುತ್ಯಾಲಪ್ಪ ಕೊಲೆ ಪ್ರಕರಣ, ವಕೀಲ ಸೇರಿದಂತೆ ಇಬ್ಬರ ಬಂಧನ
ಸಾಂದರ್ಭಿಕ ಚಿತ್ರ
TV9 Web
| Updated By: Rakesh Nayak Manchi|

Updated on:Jan 23, 2023 | 7:15 PM

Share

ದೇವನಹಳ್ಳಿ: ಅರ್ಧ ಶತಕದಷ್ಟು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಮುತ್ಯಾಲಪ್ಪನ ಬರ್ಬರ ಕೊಲೆ (Murder Case) ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಠಾಣಾ ಪೊಲೀಸರು ವಕೀಲ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕಾನೂನು ಸಂಘರ್ಷಕ್ಕೆ ಒಳಗಾಗಿರುವ ಓರ್ವ ಬಾಲಕನನ್ನು ಪೊಲೀಸರು ಬಾಲಮಂದಿರಕ್ಕೆ ಒಪ್ಪಿಸಿದ್ದಾರೆ. ಆರೋಪಿ ನಾಗೇಶ್ ಮತ್ತು ಸೋಮಶೇಖರ್ ಬಂಧಿತ ಆರೋಪಿಗಳಾಗಿದ್ದಾರೆ.

ಆಂಧ್ರಪ್ರದೇಶದ ಅನಂತಪುರದ ಹಲವೆಡೆ ಕಳ್ಳತನ, ದರೋಡೆ ಮಾಡುತ್ತಿದ್ದ ಕೊಲೆಯಾದ ಮುತ್ಯಾಲಪ್ಪನ ಮೇಲೆ 50ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಿವೆ. ಅಷ್ಟೇ ಅಲ್ಲದೆ ವೃತ್ತಿಯಲ್ಲಿ ವಕೀಲನಾಗಿರುವ ನಾಗೇಶ್ ಮತ್ತು ಮುತ್ಯಾಲಪ್ಪನ ನಡುವೆ ಗಲಾಟೆಯೂ ನಡೆಯುತ್ತಿತ್ತು. ಇವರಿಬ್ಬರ ನಡುವಿನ ದ್ವೇಷ 10 ವರ್ಷಗಳದ್ದಾಗಿವೆ. ಹಳೇ ದ್ವೇಷ ಹಿನ್ನಲೆ ಮುತ್ಯಾಲಪ್ಪನನ್ನು ಮುಗಿಸಲು ನಾಗೇಶ್ ಅಪ್ರಾಪ್ತನಿಗೆ ಕೇವಲ ಎರಡೂವರೆ ಸಾವಿರ ರೂಪಾಯಿಗೆ ಸುಪಾರಿ ಕೊಟ್ಟಿದ್ದನು.

ಇದನ್ನೂ ಓದಿ: ಗೇಮ್ ಆ್ಯಪ್ ಮೂಲಕ ಪ್ರೀತಿ, ಮದುವೆ; ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕ್ ಮಹಿಳೆ ಬಂಧನ

ನಾಗೇಶ್ ನೀಡಿದ ಎರಡೂವರೆ ಸಾವಿರ ರೂಪಾಯಿಯ ಸುಪಾರಿಗೆ ಅಪ್ರಾಪ್ತ ತನ್ನ ಸಹಚರ ಸೋಮಶೇಖರ್​ಗೆ ಮಾಹಿತಿ ನೀಡಿದ್ದಾನೆ. ಅದರಂತೆ ಸೋಮಶೇಖರ್ ಮುತ್ಯಾಲಪ್ಪನನ್ನು ಪುಸಲಾಯಿಸಿ ಆಂಧ್ರಪ್ರದೇಶದ ಅನಂತಪುರಕ್ಕೆ ಕರೆದೊಯ್ದಿದ್ದಾನೆ. ಬಳಿಕ ಅಪ್ರಾಪ್ತನೂ ಸೇರಿಕೊಂಡು ರಾಡ್​ನಿಂದ ಭೀಕರವಾಗಿ ಹಲ್ಲೆ ನಡೆಸಿ ಕೊಲೆಗೈಯ್ದು ಮೃತದೇಹವನ್ನು ಕಾರಿನಲ್ಲಿ ತಂದು ವಿಜಯಪುರದ ಬುಲ್ಲಹಳ್ಳಿ ಬಳಿ ಎಸೆದು ಪರಾರಿಯಾಗಿದ್ದರು.

ಸಾಕ್ಷಿ ನಾಶಕ್ಕೆ ಕೈ ಬೆರಳುಗಳನ್ನು ಕತ್ತರಿಸಿದ ಆರೋಪಿಗಳು

ಕೊಲೆ ನಂತರ ಪ್ರಕರಣದಲ್ಲಿ ಸಿಲುಕಿಕೊಳ್ಳಬಾರದು ಎಂಬ ಉದ್ದೇಶದಿಂದ ಕ್ರಿಮಿನಲ್ಲ ಮೈಂಡ್ ಯೂಸ್ ಮಾಡಿದ್ದ ಅಡ್ವಕೇಟ್ ನಾಗೇಶ್, ಬೆರಳುಗಳನ್ನು ಕಟ್ ಮಾಡಲು ಸೂಚಿಸಿದ್ದಾನೆ. ಸತ್ತ ಹೆಣದ ಮುಖವನ್ನು ಗುರುತು ಸಿಗದ ಹಾಗೆ ಮಚ್ಚಿನಿಂದ ಕೊಚ್ಚಲಾಗಿತ್ತು. ಅಷ್ಟೇ ಅಲ್ಲದೆ ಫಿಂಗರ್ ಪ್ರಿಂಟ್ ಸಿಗಬಾರದೆಂದು ಕೈ ಬೆರಳನ್ನ ಕಟ್ ಮಾಡಲಾಗಿತ್ತು. ಆದರೆ ಒಂದು ಬೆರಳು ಮಾತ್ರ ಸ್ಥಳದಲ್ಲಿ ಪತ್ತೆಯಾಗಿದೆ. ಇದನ್ನೇ ಆಧರಿಸಿ ಪೊಲೀಸರು ಆರೋಪಿಗಳ ಗುರುತು ಪತ್ತೆಹಚ್ಚಿ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:17 pm, Mon, 23 January 23