ಮಲಯಾಳಿಗಳ ಕಾಟ! ಮಂಗಳೂರು ಏರ್‌ಪೋರ್ಟ್‌ಗೆ ಬರ್ತಿದೆ ಕೋಟ್ಯಂತರ ಮೌಲ್ಯದ ಚಿನ್ನ, ಸಾಥ್​ ನೀಡ್ತಿದಾರೆ ಕೇರಳ ಯುವಕರು! ಏನಿದರ ಒಳಸುಳಿ?

Gold smuggling: ಜ್ಯುವೆಲ್ಲರಿಗಳ ಮಾಫಿಯಾದ ಪ್ರಭಾವಕ್ಕೆ ಒಳಗಾಗಿ ಕೇರಳದ ಕಾಸರಗೋಡು ಭಾಗದ ಯುವಕರು ಚಿನ್ನ ತರೋದಕ್ಕೆಂದೇ ವಿದೇಶಕ್ಕೆ ಹೋಗ್ತಿದ್ದಾರಾ? ಎಂಬ ಅನುಮಾನ ಮೂಡಿದೆ.

ಮಲಯಾಳಿಗಳ ಕಾಟ! ಮಂಗಳೂರು ಏರ್‌ಪೋರ್ಟ್‌ಗೆ ಬರ್ತಿದೆ ಕೋಟ್ಯಂತರ ಮೌಲ್ಯದ ಚಿನ್ನ, ಸಾಥ್​ ನೀಡ್ತಿದಾರೆ ಕೇರಳ ಯುವಕರು! ಏನಿದರ ಒಳಸುಳಿ?
ಮಲೆಯಾಳಿಗಳ ಕಾಟ! ಮಂಗಳೂರು ಏರ್‌ಪೋರ್ಟ್‌ಗೆ ಬರ್ತಿದೆ ಕೋಟ್ಯಂತರ ಮೌಲ್ಯದ ಚಿನ್ನ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jan 24, 2023 | 12:54 PM

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Mangaluru Airport) ಇತ್ತೀಚೆಗೆ ಹೆಚ್ಚು ಹೆಚ್ಚು ಅಕ್ರಮ ಚಿನ್ನ ಸಾಗಾಟಕ್ಕೆ ಸಾಕ್ಷಿಯಾಗ್ತಿದೆ. ತಿಂಗಳಿಗೆ ನಾಲ್ಕೈದು ಅಕ್ರಮ ಚಿನ್ನ ಸಾಗಾಟದ ಕೇಸ್‌ಗಳು ಪತ್ತೆಯಾಗ್ತಿದ್ದು, ದುಬೈನಿಂದ ಭಾರೀ ಪ್ರಮಾಣದಲ್ಲಿ ಚಿನ್ನವನ್ನ ತರಲಾಗುತ್ತಿದೆ. ಈ ಚಿನ್ನ ಸಾಗಾಟದ ಹಿಂದೆ (Gold smuggling) ಜ್ಯುವೆಲ್ ಮಾಫಿಯಾ ಕೈವಾಡದ ಅನುಮಾನ ಮೂಡಿದೆ. ಹೌದು.. ಅದು ಮಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್. ಪ್ರತಿ ನಿತ್ಯ ಹತ್ತಾರು ವಿದೇಶಿ ವಿಮಾನಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತವೆ. ಕರ್ನಾಟಕದ ಕರಾವಳಿ, ಮಲೆನಾಡು ಭಾಗದ ಪ್ರಯಾಣಿಕರಿಗಿಂತಲೂ ಹೆಚ್ಚಾಗಿ ಕೇರಳ ಭಾಗದ ಕಾಸರಗೋಡು, ಕೊಚ್ಚಿ ಭಾಗದ ಪ್ರಯಾಣಿಕರೇ ಹೆಚ್ಚಾಗಿ ಮಂಗಳೂರಿನಲ್ಲಿ ಇಳಿಯುತ್ತಿದ್ದಾರೆ. ಅದರಲ್ಲೂ ದುಬೈನಿಂದ ನಿತ್ಯ ನೂರಾರು ಕೇರಳ ಪ್ರಯಾಣಿಕರು (Malayalis) ಬರ್ತಾ ಇದ್ದು, ಮಂಗಳೂರು ಏರ್‌ಪೋರ್ಟ್ ಇವರಿಗೆ ಪ್ರಮುಖ ಕೇಂದ್ರ.

ಆದ್ರೆ ಹೀಗೆ ದುಬೈನಿಂದ ಬರೋ ಪ್ರಯಾಣಿಕರ ತಪಾಸಣೆಯ ವೇಳೆ ಹಲವು ಪ್ರಯಾಣಿಕರ ಬಳಿ ಅಕ್ರಮ ಚಿನ್ನ ಪತ್ತೆಯಾಗಿದೆ. ಕೇವಲ ಅಕ್ಟೋಬರ್‌ನಿಂದ ಈ ಜನವರಿವರೆಗೆ ಹತ್ತಕ್ಕೂ ಹೆಚ್ಚು ಗೋಲ್ಡ್ ಸ್ಮಗ್ಲಿಂಗ್ ಕೇಸ್‌ಗಳು ಮಂಗಳೂರು ಏರ್‌ಪೋರ್ಟ್ ನಲ್ಲಿ ಪತ್ತೆಯಾಗಿವೆ. ಇದರ ಹಿಂದೆ ಜ್ಯುವೆಲ್ಲರಿ ಮಾಫಿಯಾ ಕೈವಾಡದ ಅನುಮಾನವಿದೆ ಎಂದು ಧರ್ಮೇಂದ್ರ, ರಾಜ್ಯ ಪ್ರಧಾನ ಕಾರ್ಯದರ್ಶಿ, ಅಖಿಲಾ ಭಾರತ ಹಿಂದೂ ಮಹಾಸಭಾ ಅವರು ಹೇಳಿದ್ದಾರೆ.

ಏರ್‌ಪೋರ್ಟ್‌ನ ಕಸ್ಟಮ್ ಅಧಿಕಾರಿಗಳ ತಪಾಸಣೆ ವೇಳೆ ನಾನಾ ವಿಧದಲ್ಲಿ ಚಿನ್ನ ಸಾಗಿಸೋದು ಬೆಳಕಿಗೆ ಬಂದಿದೆ. ಕೆಲವರು ಚಿನ್ನವನ್ನು ಪೇಸ್ಟ್, ಪೌಡರ್ ರೂಪದಲ್ಲಿ ತಂದರೆ, ಇನ್ನು ಕೆಲವರು ಗುದದ್ವಾರ, ಕುಕ್ಕರ್, ಎಲ್.ಇ.ಡಿ ಬಲ್ಬ್, ವಾಚ್, ಕೀಪ್ಯಾಡ್ ಮೊಬೈಲ್ ಫೋನ್, ಅಂಡರ್‌ವೇರ್, ಸಾಕ್ಸ್‌ನ ಒಳಗೆ ಸೇರಿ ಹತ್ತಾರು ವಿಧದಲ್ಲಿ ಚಿನ್ನವನ್ನ ಸಾಗಾಟ ಮಾಡಿರೋದು ಬೆಳಕಿಗೆ ಬಂದಿದೆ.

ಆದ್ರೆ ಹೀಗೆ ಅಕ್ರಮ ಚಿನ್ನ ಸಾಗಾಟದಲ್ಲಿ ಕೇರಳದ ಕಾಸರಗೋಡು ಭಾಗದ ಪ್ರಯಾಣಿಕರೇ ಅರೆಸ್ಟ್ ಆಗ್ತಿದ್ದು, ಲಕ್ಷದಿಂದ ಕೋಟಿ ಮೌಲ್ಯದ ಚಿನ್ನವನ್ನು ಸಾಗಿಸಿ ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ. ಹೀಗೆ ಕಳೆದ ಮೂರೂವರೆ ತಿಂಗಳ ಅವಧಿಯಲ್ಲಿ ಬರೋಬ್ಬರಿ 9 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಅಕ್ರಮ ಚಿನ್ನ ಮಂಗಳೂರು ಏರ್‌ಪೋರ್ಟ್‌‌ನಲ್ಲಿ ಪತ್ತೆಯಾಗಿದೆ. ಅದರಲ್ಲೂ ಜನವರಿ ತಿಂಗಳ ಕೇವಲ 18 ದಿನದಲ್ಲಿ 2 ಕೋಟಿ ಮೌಲ್ಯದ ಚಿನ್ನ ಕಸ್ಟಮ್ಸ್ ಅಧಿಕಾರಿಗಳ ವಶವಾಗಿದೆ.

ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಬಂಧಿತರಾದ ಬಹುತೇಕರು ವರ್ಷಗಳ ಹಿಂದಷ್ಟೇ ದುಬೈಗೆ ಹೋಗಿ ವಾಪಸ್ ಬಂದಿರೋದು ಗೊತ್ತಾಗಿದೆ. ಹೀಗಾಗಿ ಜ್ಯುವೆಲ್ಲರಿಗಳ ಮಾಫಿಯಾದ ಪ್ರಭಾವಕ್ಕೆ ಒಳಗಾಗಿ ಯುವಕರು ಚಿನ್ನ ತರೋದಕ್ಕೆಂದೇ ವಿದೇಶಕ್ಕೆ ಹೋಗ್ತಿದ್ದಾರಾ? ಎಂಬ ಅನುಮಾನ ಮೂಡಿದೆ.

ವರದಿ: ಅಶೋಕ್, ಟಿವಿ 9, ಮಂಗಳೂರು

Published On - 12:09 pm, Tue, 24 January 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್