ಇನ್ಫಿ ಟೆಕ್ಕಿ ಮೊಹಮ್ಮದ್ ಮುಜೀಬ್ ಜಾಮೀನು ಅರ್ಜಿ ವಜಾ

ಬೆಂಗಳೂರು: ರಂಜಾನ್ ಹಬ್ಬದ ದಿನವಾದರೂ ತನಗೆ ಜಾಮೀನು ಜಾಮೂನು ದಕ್ಕಲಿದೆ ಎಂದು ಬಯಸಿದ್ದವನಿಗೆ ಕೋರ್ಟ್ ಜಾಮೀನು ಭಾಗ್ಯ ನೀಡಲು ನಿರಾಕರಿಸಿತು. ‘ಹೊರಗೆ ಹೋಗಿ ಸೀನಿ, ವೈರಸ್ ಹರಡಿ’, ‘ಕೊರೊನಾ ಸೋಂಕು ಹರಡಿ ಪ್ರಪಂಚ ಕೊನೆಗಾಣಿಸಿ’, ‘ನಾಯಿಗಳನ್ನು ಸಾಯಿಸಲು ನನ್ನ ಸ್ಟೆನ್ ಗನ್ ರೆಡಿ’ ಹೀಗೆಂದು ವಿಲಕ್ಷಣವಾಗಿ ಫೇಸ್ ಬುಕ್ ಪೋಸ್ಟ್ ಹಾಕಿದ್ದ ಟೆಕ್ಕಿ ಮುಜೀಬ್ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಇನ್ಫಿ ಟೆಕ್ಕಿ ಮೊಹಮ್ಮದ್ ಮುಜೀಬ್ ತನಿಖೆ ವೇಳೆ ಹಲವು ಮಹತ್ವದ ಅಂಶಗಳು ಪತ್ತೆಯಾಗಿವೆ. ಟೆಕ್ಕಿ ಮುಜೀಬ್ […]

ಇನ್ಫಿ ಟೆಕ್ಕಿ ಮೊಹಮ್ಮದ್ ಮುಜೀಬ್ ಜಾಮೀನು ಅರ್ಜಿ ವಜಾ
ಸಾಧು ಶ್ರೀನಾಥ್​

Updated on: May 25, 2020 | 6:31 PM

ಬೆಂಗಳೂರು: ರಂಜಾನ್ ಹಬ್ಬದ ದಿನವಾದರೂ ತನಗೆ ಜಾಮೀನು ಜಾಮೂನು ದಕ್ಕಲಿದೆ ಎಂದು ಬಯಸಿದ್ದವನಿಗೆ ಕೋರ್ಟ್ ಜಾಮೀನು ಭಾಗ್ಯ ನೀಡಲು ನಿರಾಕರಿಸಿತು.

‘ಹೊರಗೆ ಹೋಗಿ ಸೀನಿ, ವೈರಸ್ ಹರಡಿ’, ‘ಕೊರೊನಾ ಸೋಂಕು ಹರಡಿ ಪ್ರಪಂಚ ಕೊನೆಗಾಣಿಸಿ’, ‘ನಾಯಿಗಳನ್ನು ಸಾಯಿಸಲು ನನ್ನ ಸ್ಟೆನ್ ಗನ್ ರೆಡಿ’ ಹೀಗೆಂದು ವಿಲಕ್ಷಣವಾಗಿ ಫೇಸ್ ಬುಕ್ ಪೋಸ್ಟ್ ಹಾಕಿದ್ದ ಟೆಕ್ಕಿ ಮುಜೀಬ್ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.

ಇನ್ಫಿ ಟೆಕ್ಕಿ ಮೊಹಮ್ಮದ್ ಮುಜೀಬ್ ತನಿಖೆ ವೇಳೆ ಹಲವು ಮಹತ್ವದ ಅಂಶಗಳು ಪತ್ತೆಯಾಗಿವೆ. ಟೆಕ್ಕಿ ಮುಜೀಬ್ ಪಾಕಿಸ್ತಾನದ ವಾಟ್ಸಾಪ್ ನಂಬರ್ ಶೇರ್ ಮಾಡಿದ್ದ. ಧಾರ್ಮಿಕ ಮೂಲಭೂತವಾದ, ದೇಶ ವಿರೋಧಿ ಚಿಂತನೆ ಹೊಂದಿದ್ದ. ಎನ್ಐಎ ಕೂಡಾ ಮುಜೀಬ್ ಲಿಂಕ್​ಗಳ ತನಿಖೆ ನಡೆಸುತ್ತಿದೆ ಎಂದು ತನಿಖೆ ವಿವರವನ್ನು ಪೊಲೀಸರು ಕೋರ್ಟ್​ಗೆ ಸಲ್ಲಿಸಿದ್ದರು.

ಇಂತಹ ಪೋಸ್ಟ್​ಗಳಿಂದ ಸಾಮರಸ್ಯ, ಸಮಗ್ರತೆಗೆ ಧಕ್ಕೆ: ಹೈಕೋರ್ಟ್
ಆರ್ಟಿಕಲ್ 21ಅಡಿ ವೈಯಕ್ತಿಕ ಸ್ವಾತಂತ್ರ್ಯ ಮೂಲಭೂತ ಹಕ್ಕು ಎಂದು ಆರೋಪಿ ಮೊಹಮ್ಮದ್ ಮುಜೀಬ್ ಪರ ವಾದ ಮಂಡಿಸಲಾಗಿತ್ತು. ಆದ್ರೆ ಆರ್ಟಿಕಲ್ 21ಕ್ಕಿಂತ ಸಂವಿಧಾನದ ಮುನ್ನುಡಿಗೆ ಪ್ರಾಮುಖ್ಯತೆ ಇದೆ. ಕೊವಿಡ್ 19ಗೆ ಹೆದರಿರುವ ಜನರಲ್ಲಿ ಭೀತಿ ಹುಟ್ಟಿಸುವ ಯತ್ನ ನಡೆದಿದೆ. ಇಂತಹ ಪೋಸ್ಟ್​ಗಳಿಂದ ಸಾಮರಸ್ಯ, ಸಮಗ್ರತೆಗೆ ಧಕ್ಕೆಯೊದಗಲಿದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್ ನ್ಯಾ. ಕೆ.ಎಸ್.ಮುದಗಲ್
ಟೆಕ್ಕಿ ಮೊಹಮ್ಮದ್ ಮುಜೀಬ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದರು.

Published On - 6:18 pm, Mon, 25 May 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us