Bengaluru: ಬೈಕ್​ಗಳನ್ನ ಕದ್ದು ಕಡಿಮೆ ಬೆಲೆಗೆ ಮಾರುತ್ತಿದ್ದ ಕಳ್ಳನ ಬಂಧನ

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 04, 2023 | 1:30 PM

ಬೈಕ್​ಗಳನ್ನ ಕದ್ದು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪಿ ನಿತಿನ್​​​​​​(20)ಎಂಬಾತನನ್ನ ಇದೀಗ ಸಿದ್ದಾಪುರ ಪೊಲೀಸರು ಬಂಧಿಸಿದ್ದು, ಆತನಿಂದ 6 ಲಕ್ಷ ಮೌಲ್ಯದ 12 ದ್ವಿಚಕ್ರ ವಾಹನವನ್ನ ವಶಪಡಿಸಿಕೊಂಡಿದ್ದಾರೆ.

Bengaluru: ಬೈಕ್​ಗಳನ್ನ ಕದ್ದು ಕಡಿಮೆ ಬೆಲೆಗೆ ಮಾರುತ್ತಿದ್ದ ಕಳ್ಳನ ಬಂಧನ
ಬೈಕ್​ ಕಳ್ಳತನ ಮಾಡುತ್ತಿದ್ದ ನಿತಿನ್​​​​​​(20)ಎಂಬಾತನ ಬಂಧನ
Follow us on

ಬೆಂಗಳೂರು: ಬೈಕ್​ಗಳನ್ನ ಕದ್ದು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಕಳ್ಳ ನಿತಿನ್​​​​​​(20)ಎಂಬಾತನನ್ನ ಇದೀಗ ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ 6 ಲಕ್ಷ ಮೌಲ್ಯದ ಹೋಂಡಾ ಡಿಯೋ, ಪಲ್ಸರ್ , ಆರ್ ಎಕ್ಸ್ ಬೈಕ್​ಗಳು ಸೇರಿ ಒಟ್ಟು 12 ದ್ವಿಚಕ್ರ ವಾಹನವನ್ನ ವಶಪಡಿಸಿಕೊಂಡಿದ್ದಾರೆ. ಮನೆ ಮುಂದೆ ನಿಲ್ಲಿಸುತ್ತಿದ್ದ ಬೈಕ್​ಗಳನ್ನು ಕದ್ದು, ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ, ಆರೋಪಿ ನಿತಿನ್​​​ ವಿರುದ್ಧ ಈಗಾಗಲೇ ಹಲವು ಕಡೆ ಪ್ರಕರಣ ದಾಖಲಾಗಿದ್ದಾವೆ. ಬೆಂಗಳೂರಿನ ಸಿದ್ದಾಪುರ, ಕಲಾಸಿಪಾಳ್ಯ, ವರ್ತೂರು, ಚಂದ್ರಾಲೇಔಟ್, ಕೆ.ಎಸ್.ಲೇಔಟ್ ಸೇರಿ ಒಟ್ಟು 12 ಕಡೆ ಪ್ರಕರಣಗಳು ದಾಖಲಾಗಿದ್ದು, ಸಿದ್ದಾಪುರ ಪೊಲೀಸರು ಇದೀಗ ಬಂಧಿಸಿದ್ದಾರೆ.

ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಕುರಿಗಳ ಸಮೇತ ಓರ್ವ ವ್ಯಕ್ತಿ ಸಾವು

ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲೂಕಿನ ಘಾಳಪೂಜಿ ಗ್ರಾಮದಲ್ಲಿ ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಕುರಿಗಳ ಸಮೇತ ಸಣ್ಣತಮ್ಮಪ್ಪ ಜಾಡರ್​​(60)ಎಂಬಾತ ಸಾವನ್ನಪ್ಪಿರುವ ಘಟನೆ ನಡೆದಿದೆ. ಕುರಿ ಕಟ್ಟುವ ಚಪ್ಪರದ ಮನೆಯಲ್ಲಿ
ಒಂಟಿಯಾಗಿ ಮಲಗುತ್ತಿದ್ದ ಸಣ್ಣತಮ್ಮಪ್ಪ ಜಾಡರ್, ನಿನ್ನೆ(ಮಾ.3) ರಾತ್ರಿ ವೇಳೆ ಇದ್ದಕ್ಕಿದ್ದ ಹಾಗೆ ಬೆಂಕಿ ಹೊತ್ತಿ ಚಪ್ಪರದ ಮನೆ ಸಮೇತ ಸುಟ್ಟು ಕರಕಲಾಗಿದೆ. ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ:81 ವರ್ಷದ ವೃದ್ಧ ಅಪರಾಧಿಗೆ 1 ವರ್ಷ ಅಂಗನವಾಡಿಯಲ್ಲಿ ಉಚಿತ ಸೇವೆ ಸಲ್ಲಿಸುವಂತೆ ವಿಭಿನ್ನ ಶಿಕ್ಷೆ ವಿಧಿಸಿದ ಕರ್ನಾಟಕ ಹೈಕೋರ್ಟ್

ವಿದ್ಯುತ್ ತಂತಿ ತಗುಲಿ 7 ಎಕರೆ ಕಬ್ಬು ಬೆಳೆ ಬೆಂಕಿಗಾಹುತಿ

ಮೈಸೂರು: ಟಿ.ನರಸೀಪುರ ತಾಲೂಕಿನ ವಾಟಾಳು ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ನಾಗೇಶ್​ ಎಂಬುವವರಿಗೆ ಸೇರಿದ 7 ಎಕರೆ ಕಬ್ಬು ಬೆಳೆ ಸಂಪೂರ್ಣ ಬೆಂಕಿಗಾಹುತಿಯಾಗಿರುವ ಘಟನೆ ನಡೆದಿದೆ. 200ಟನ್ ಕಬ್ಬು ಬೆಳದಿದ್ದ ರೈತ ಅಂದಾಜು 9 ಲಕ್ಷ ರೂಪಾಯಿ ಬೆಲೆಯ ಕಬ್ಬು ಬೆಂಕಿಗಾಹುತಿಯಾಗಿದೆ. ದಿಕ್ಕು ತೋಚದೆ ಕಂಗಲಾದ ರೈತ ನಾಗೇಶ್ ಪರಿಹಾರಕ್ಕಾಗಿ ಒತ್ತಾಯ ಮಾಡಿದ್ದಾರೆ.

ಕಿಡಿಗೇಡಿಗಳ ಕೃತ್ಯಕ್ಕೆ ಧಗಧಗನೆ ಹೊತ್ತಿ ಉರಿದ ಅರಣ್ಯ ಪ್ರದೇಶ

ಹಾವೇರಿ: ಹಾನಗಲ್ ತಾಲೂಕಿನ ಶಿವಪುರ ಬಳಿ 15ಕ್ಕೂ ಹೆಚ್ಚು ಎಕರೆಯಲ್ಲಿದ್ದ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ. ತೇಗ, ಅಕೇಶಿಯಾ ಸೇರಿದಂತೆ ಬೀಟೆ ಮರಗಳು ಸುಟ್ಟು ಭಸ್ಮವಾಗಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಬೆಂಕಿ ಹಚ್ಚಿದ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಕ್ರಮಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:28 am, Sat, 4 March 23