ಕರ್ನಾಟಕ ಪೊಲೀಸ್ ಇತಿಹಾಸದಲ್ಲೇ ಮೊದಲ ಕೇಸ್, ಪತ್ತೆಯಾದ ವಸ್ತು ಏನೆಂಬುದು ಮೊದಲಿಗೆ ಪೊಲೀಸರಿಗೇ ಗೊತ್ತಾಗಿಲ್ಲಾ!

| Updated By: ಸಾಧು ಶ್ರೀನಾಥ್​

Updated on: Jun 10, 2021 | 5:14 PM

KG Halli police seize Ambergris: ಡ್ರಗ್ಸ್ ಬಗ್ಗೆ ಮಾಹಿತಿ ಕಲೆ ಹಾಕುತಿದ್ದ ಕೆಜಿ ಹಳ್ಳಿ ಪೊಲೀಸರಿಗೆ ತಂಡವೊಂದು ಡ್ರಗ್ಸ್ ಮಾರಾಟ ಮಾಡುತ್ತಿರುವ ಸುಳಿವು ಸಿಕ್ಕಿದೆ. ಮಾಹಿತಿ ಆಧರಿಸಿ ದಾಳಿ ನಡೆಸಿದ್ದ ಪೊಲೀಸರಿಗೆ 6.7 kg ಅಂಬರ್ಗೀಸ್ ಪತ್ತೆಯಾಗಿದೆ. ಆದರೆ ಪೊಲೀಸರಿಗೆ ಮೊದಲು ಪತ್ತೆಯಾಗಿರೊ ವಸ್ತು (ಅಂಬರ್ಗೀಸ್) ಏನು ಎಂಬುದೆ ಗೊತ್ತಾಗಿಲ್ಲಾ. ಅರೋಪಿಗಳು ಅಂತಾರಾಷ್ಟ್ರೀಯವಾಗಿ ಅದರ ಮಾರುಕಟ್ಟೆ ಮೌಲ್ಯ ಒಂದು ಕೆಜಿಗೆ ಒಂದು ಕೋಟಿ ರೂಪಾಯಿ ಎಂದು ಹೇಳಿದ್ದರು.

ಕರ್ನಾಟಕ ಪೊಲೀಸ್ ಇತಿಹಾಸದಲ್ಲೇ ಮೊದಲ ಕೇಸ್, ಪತ್ತೆಯಾದ ವಸ್ತು ಏನೆಂಬುದು ಮೊದಲಿಗೆ ಪೊಲೀಸರಿಗೇ ಗೊತ್ತಾಗಿಲ್ಲಾ!
ಅಂಬರ್​ಗ್ರೀಸ್ ಮಾರಾಟ ಮಾಡುತಿದ್ದ ಅರೋಪಿಗಳ ಬಂಧನ
Follow us on

ಬೆಂಗಳೂರು: ಬೆಂಗಳೂರು ಸಿಟಿ ಪೊಲೀಸರು ನೂತನ ದಾಖಲೆ ನಿರ್ಮಿಸಿದ್ದಾರೆ. ಆಕ್ಚುಯಲಿ, ಕರ್ನಾಟಕ ಪೊಲೀಸ್ ಇತಿಹಾಸದಲ್ಲಿಯೇ ಇಂತಹದ್ದು ಮೊದಲ ಕೇಸ್. ಆ ಸಾಹಸ ಮಾಡಿರುವುದು ಕಾಡುಗೊಂಡನಹಳ್ಳಿಯ ಪೊಲೀಸರು. ಮೊದಲಿಗೆ ಒಂದಿಬ್ಬರು ಖದೀಮರನ್ನು ಬಂಧಿಸಿದ ಕೆಜಿ ಹಳ್ಳಿ ಪೊಲೀಸರು ಅದೆಂತಹುದೋ ಔಷಧೀಯ ವಸ್ತುವೊಂದನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಅದು ಏನು, ಯಾತಕ್ಕಾಗಿ ಬಳಸುತ್ತಾರೆ? ಅದರ ಮೌಲ್ಯ ಎಷ್ಟು? ಈ ಬಂಧಿತ ಖದೀಮರಿಗೆ ಎಲ್ಲಿಂದ ಬಂತು? ಎಂಬುದು ಗೊತ್ತೇ ಆಗಿಲ್ಲ. ಏಕೆಂದ್ರೆ ಪೊಲೀಸರು ಮೊದಲ ಬಾರಿಗೆ ಅಂತಹ ಸರಕನ್ನು ವಶಪಡಿಸಿಕೊಂಡಿದ್ದರು. ಇನ್ನು ಆ ಸರಕಿನ ಜಾಲವನ್ನು ಬೆನ್ನತ್ತಿ ಹೋದಾಗ ಪೊಲೀಸರಿಗೆ ಪಾತಕ ಲೋಕದಲ್ಲಿ ಬೇರೆಯದ್ದೇ ಲೋಕ ಪರಿಚಯವಾಗಿದೆ! ರೋಚಕ ಪ್ರಕರಣ ವಿವರ ಇಲ್ಲಿದೆ ಓದಿ…

ಈ ಅಪರೂಪದ ಪ್ರಕರಣದ ಸಾರ ಹೇಳಬೇಕೆಂದ್ರೆ ಬೆಂಗಳೂರು ಪೊಲೀಸ್​ ಕಮೀಷನರ್​ ಕಮಲ್​ ಪಂತ್​ ಅವರು ಟ್ವೀಟ್​ ಮಾಡಿ ಹೇಳಿದಂತೆ ಸುಗಂಧ ದ್ರವ್ಯ ಮತ್ತು ಔಷಧ ತಯಾರಿಕೆಯಲ್ಲಿ ಬಳಸುವ ಅಂಬರ್​ಗ್ರೀಸ್​​ ಎಂಬ ತಿಮಿಂಗಿಲ ಮೂಲದಿಂದ ಪಡೆಯುವ ವಸ್ತುವನ್ನು ಅಕ್ರಮವಾಗಿ ಸಾಗಿಸಲು ಯತ್ನಿಸುತ್ತಿದ್ದ 4 ಆರೋಪಿಗಳನ್ನು ಬಂಧಿಸಿ 8 ಕೋಟಿ ರೂ. ಮೌಲ್ಯದ 6.7 ಕೆಜಿ ಅಂಬರ್​ಗ್ರೀಸ್ ವಶಪಡಿಸಿಕೊಂಡು, ನಾಲ್ವರ ವಿರುದ್ಧ ವನ್ಯಜೀವಿ ಕಾಯ್ದೆ ಹಾಗೂ IPC 420 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. KG Halli Police Station team nabbed four persons and seized 6.7 KG Ambergris (floating gold/whale vomit) worth Rs 8 crore. Ambergris (amber grease) is a solid waxy substance originating in the intestine of the sperm whale.

ಇನ್ನು ಅಂಬರ್​ಗ್ರೀಸ್ ಮಾರಾಟ ಮಾಡುತಿದ್ದ ಅರೋಪಿಗಳ ಬಂಧನ ಪ್ರಕರಣದ ರೋಚಕ ಕತೆ ಇಲ್ಲಿದೆ…

ಅಂಬರ್​ಗ್ರೀಸ್ ಮಾರಾಟ ಮಾಡುತಿದ್ದ ಅರೋಪಿಗಳ ಬಂಧನ ಪ್ರಕರಣದ ರೋಚಕ ಕತೆ

ಡ್ರಗ್ಸ್ ಬಗ್ಗೆ ಮಾಹಿತಿ ಕಲೆ ಹಾಕುತಿದ್ದ ಕೆಜಿ ಹಳ್ಳಿ ಪೊಲೀಸರಿಗೆ ತಂಡವೊಂದು ಡ್ರಗ್ಸ್ ಮಾರಾಟ ಮಾಡುತ್ತಿರುವ ಸುಳಿವು ಸಿಕ್ಕಿದೆ. ಮಾಹಿತಿ ಆಧರಿಸಿ ದಾಳಿ ನಡೆಸಿದ್ದ ಪೊಲೀಸರಿಗೆ 6.7 kg ಅಂಬರ್ಗೀಸ್ ಪತ್ತೆಯಾಗಿದೆ. ಆದರೆ ಪೊಲೀಸರಿಗೆ ಮೊದಲು ಪತ್ತೆಯಾಗಿರೊ ವಸ್ತು (ಅಂಬರ್ಗೀಸ್) ಏನು ಎಂಬುದೆ ಗೊತ್ತಾಗಿಲ್ಲಾ. ಅರೋಪಿಗಳು ಅಂತಾರಾಷ್ಟ್ರೀಯವಾಗಿ ಅದರ ಮಾರುಕಟ್ಟೆ ಮೌಲ್ಯ ಒಂದು ಕೆಜಿಗೆ ಒಂದು ಕೋಟಿ ರೂಪಾಯಿ ಎಂದು ಹೇಳಿದ್ದರು.

ಬೆಂಗಳೂರಿನಲ್ಲೇ ಇರುವ ಎಫ್ಎಸ್ಎಲ್ ಅಧಿಕಾರಿಗಳನ್ನು ಕರೆಯಿಸಿ, ಪರಿಶೀಲನೆ

ಮೊದಲಿಗೆ ಪೊಲೀಸರು ಡ್ರಗ್ಸ್ ಖರೀದಿದಾರರಂತೆ ಆರೋಪಿಗಳ ಜೊತೆ ಮಾತನಾಡಿದ್ದರು. ಆಗ 22 ಲಕ್ಷ ರೂಪಾಯಿಗೆ ಕೊಡುವುದಾಗಿ ಆರೋಪಿಗಳು ಹೇಳಿದ್ದರು. ನಂತ್ರ ದಾಳಿ ಮಾಡಿ, ನಾಲ್ವರನ್ನೂ ವಶಕ್ಕೆ ಪಡೆದು ತಮ್ಮದೇ ಧಾಟಿಯಲ್ಲಿ ವಿಚಾರಣೆ ನಡೆಸಿದ್ದಾರೆ ಪೊಲೀಸರು. ವಿಚಾರಣೆ ವೇಳೆ ಇದು ಡ್ರಗ್ಸ್ ಅಲ್ಲಾ ಅಂಬರ್​ಗ್ರೀಸ್ ಎಂಬುದಾಗಿ ತಿಳಿದುಬಂದಿದೆ. ನಂತ್ರ ಬೆಂಗಳೂರಿನಲ್ಲೇ ಇರುವ ಎಫ್ಎಸ್ಎಲ್ ಅಧಿಕಾರಿಗಳನ್ನೂ ಕರೆಯಿಸಿ, ಪರಿಶೀಲನೆ ನಡೆಸಿದ್ದಾರೆ. ಅಲ್ಲಿಗೂ ಖಚಿತ ಮಾಹಿತಿ ದೊರಕದೇ ಹೋದಾಗ ಅಹಮದಾಬಾದ್ ಎಫ್ಎಸ್ಎಲ್ ಕೇಂದ್ರದ ಸಹಾಯ ಪಡೆದು ಟೆಸ್ಟ್ ಮಾಡಲಾಗಿದೆ. ಟೆಸ್ಟ್ ಮಾಡಿದಾಗ ಅಂಬರ್ಗೀಸ್ ಎಂಬುದು ಪತ್ತೆ ತಿಳಿದುಬಂದಿದೆ.

ಅಂಬರ್ಗೀಸ್ ಗೆ ಅರಬ್ ಮತ್ತು ಐರೋಪ್ಯ ದೇಶದಲ್ಲಿ ಭಾರಿ ಬೇಡಿಕೆ ಇದೆ. ಔಷಧ ಹಾಗೂ ಸುಗಂಧ ದ್ರವ್ಯ ತಯಾರಿಕೆಗೆ ಇದನ್ನ ಬಳಸಲಾಗುತ್ತೆ. ಅಂಬರ್ಗೀಸ್ ಸುಗಂಧ ದ್ರವ್ಯಕ್ಕೆ ಲಕ್ಷಾಂತರ ರೂಪಾಯಿ ಮೌಲ್ಯವಿದೆ!

ಅಷ್ಟಕ್ಕು ಅಂಬರ್ಗೀಸ್ ಎಂದರೇನು…?

ಅಂಬರ್ಗೀಸ್ ಗೆ ಭಾರಿ ಬೇಡಿಕೆ ಇದೆ. ಔಷಧ ಹಾಗೂ ಸುಗಂಧ ದ್ರವ್ಯ ತಯಾರಿಕೆಗೆ ಇದನ್ನ ಬಳಸಲಾಗುತ್ತೆ. ಅಂಬರ್ಗೀಸ್ ಸುಗಂಧ ದ್ರವ್ಯಕ್ಕೆ ಲಕ್ಷಾಂತರ ರೂಪಾಯಿ ಮೌಲ್ಯವಿದೆ!

ಅಂಬರ್ಗೀಸ್ ಅಥವಾ ಸ್ಪರ್ಮ್ ವೇಲ್ ಪ್ರಭೇದದ ತಿಮಿಂಗಿಲಗಳು (Amber Greece, Sperm Wale) ಮಾತ್ರ ಇಂತಹ ದ್ರವವನ್ನ ಹೊರ ಹಾಕುತ್ತದೆ. ಸ್ಪರ್ಮ್ ವೇಲ್ ತಿಮಿಂಗಿಲಗಳು ಕಾಟ್ಲಾ ಫಿಶ್, ಸ್ಕ್ಬಿಡ್ ಫಿಶ್ ಗಳನ್ನ ಮಾತ್ರ ಬೇಟೆಯಾಡಿ‌ ತಿನ್ನುತ್ತವೆ. ತಿಂಗಳಾನುಗಟ್ಟಲೆ ಮೀನುಗಳ ಮುಳ್ಳುಗಳು ಜೀರ್ಣವಾಗೋದಿಲ್ಲ. ಹಲವು ತಿಂಗಳು ಹೊಟ್ಟೆಯಲ್ಲಿರೋದ್ರಿಂದ ರಾಸಾಯನಿಕ‌ ಪ್ರಕ್ರಿಯೆಗೆ ಒಳಪಡುತ್ತದೆ. ನಂತರ ಅದು ಮೇಣದಂತೆ ರಚನೆಯಾಗುತ್ತದೆ. ಈ ಸಂದರ್ಭದಲ್ಲಿ ಅದು ಸುಗಂಧಿತವಾಗಿ ಪರಿವರ್ತನೆಯಾಗುತ್ತದೆ. ಇದರಿಂದ ಸ್ಪರ್ಮ್ ತಿಮಿಂಗಿಲಗಳು ಹೊಟ್ಟೆಯಲ್ಲಿ ಕಿರಿಕಿರಿ ಅನುಭವಿಸುತ್ತಿದ್ದಂತೆ ಇಡೀ ಮೇಣದ ವಸ್ತುವನ್ನ ವಾಂತಿ‌ ಮಾಡುವ ಮೂಲಕ‌ ಹೊರ ಹಾಕುತ್ತದೆ! ಈ ವಾಂತಿಯು ಹಗುರವಾಗಿರುತ್ತದೆ. ಹಾಗಾಗಿ ಆದು ಸಮುದ್ರದಲ್ಲಿ ತೇಲಾಡುತ್ತದೆ. ಇಂತಹ ವಸ್ತುವನ್ನ ಸೈಂಟಿಫಿಕ್ ಆಗಿ ಅಂಬರ್​ಗ್ರೀಸ್ ಎಂದು ಕರೆಯಲಾಗುತ್ತದೆ. ಕಾನೂನು ಪ್ರಕಾರ ಇದನ್ನು ಮಾರಾಟ ಮಾಡುವಂತಿಲ್ಲ. ಸಂಶೋಧನೆಗಾಗಿ ಮಾತ್ರ ಬಳಸಬಹುದು.

ಕೋಲಾರದಿಂದ ಬೆಂಗಳೂರಿಗೆ ಬಂದಿತ್ತು ಅಂಬರ್​ಗ್ರೀಸ್!

ಆರೋಪಿಗಳು ಕೋಲಾರದ ಸಲ್ಮಾನ್ ಎಂಬಾತನಿಂದ ಈ ಅಂಬರ್​ಗ್ರೀಸ್ ಅನ್ನು ಪಡೆದಿದ್ದಾಗಿ ಮಾಹಿತಿ ಸಿಕ್ಕಿದೆ. ಪೊಲೀಸರು ಈಗ ಕೋಲಾರದ ಸಲ್ಮಾನ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸಲ್ಮಾನ್ ಈ ಹಿಂದೆಯೂ ಮಾರಾಟ ಮಾಡಲು ಯತ್ನಿಸಿದ್ದ ಎಂಬ ಮಾಹಿತಿಯೂ ಇದೆ. ಅದ್ರೆ ಅವನಿಗೆ ಮಾರಾಟ ಮಾಡಲು ಸಾಧ್ಯವಾಗಿರಲಿಲ್ಲಾ. ಆಗ ಬೆಂಗಳೂರಿನಲ್ಲಿರುವ ತಜ್ಮುಲ್, ರಫಿ, ನಾಸಿರ್ ಮತ್ತು ಸಲೀಂನನ್ನು ಸಂಪರ್ಕ ಮಾಡಿದ್ದ. ಮಾರಾಟ ಮಾಡಿದ ಬಳಿಕ ಹಣ ಕೊಡಿ ಎಂದೂ ಸಲ್ಮಾನ್ ಹೇಳಿದ್ದನಂತೆ.

ಈಗ ಬಂಧನದಲ್ಲಿರುವ ಅರೋಪಿಗಳಾದ ತಜ್ಮುಲ್, ರಫಿ, ನಾಸಿರ್ ಮತ್ತು ಸಲೀಂ ಕಳೆದ ಹತ್ತು ದಿನಗಳಿಂದ ಮಾರಾಟಕ್ಕೆ ಯತ್ನಿಸುತ್ತಿದ್ದರು. ಇನ್ನು ಸಲ್ಮಾನ್ ಗೆ ಇದು ಎಲ್ಲಿಂದ ಸಿಕ್ಕಿರಬಹುದು ಅಂದ್ರೆ ಕರಾವಳಿ ಭಾಗದಿಂದ ಆತನಿಗೆ ಅಂಬರ್ಗೀಸ್ ಬಂದಿರಬಹುದು ಎಂಬ ಮಾಹಿತಿಯಿದೆ. ಕೆಜಿ ಹಳ್ಳಿ ಪೊಲೀಸರು ಇದೀಗ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

(bengauru East Division Kg halli ps nab four persons and seize 6.7 Kg Ambergris from sperm whale worth rs 8 crore)

Published On - 4:19 pm, Thu, 10 June 21