ಪತ್ನಿಯ ಕೊಂದು ಆಕೆಯ ರುಂಡವನ್ನು ಕೈಯಲ್ಲಿ ಹಿಡಿದು ಊರೂರು ಸುತ್ತುತ್ತಿದ್ದ ವ್ಯಕ್ತಿಯ ಬಂಧನ
ವ್ಯಕ್ತಿಯೊಬ್ಬ ಪತ್ನಿಯನ್ನು ಕೊಲೆ ಮಾಡಿ ಆಕೆಯ ರುಂಡ ಹಿಡಿದು ಊರೆಲ್ಲಾ ಓಡಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ. ರಕ್ತಸಿಕ್ತ ಚೀಲದೊಂದಿಗೆ ಓಡಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪತ್ನಿಯನ್ನು ಕೊಲೆ ಮಾಡಿ, ಆಕೆಯ ತಲೆಯನ್ನು ಕೈಯಲ್ಲಿ ಹಿಡಿದು ಊರೂರು ಸುತ್ತುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಮಾಧೇಪುರದ ಶ್ರೀನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪೊಖಾರಿಯಾದಲ್ಲಿ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ಆಕೆಯನ್ನು ಕೊಲೆ ಮಾಡಿದ್ದಾನೆ.
ಆಕೆಯ ರುಂಡವನ್ನು ಕೈಯಲ್ಲಿ ಹಿಡಿದು ಸುತ್ತಾಡುತ್ತಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ, ವ್ಯಕ್ತಿಯೊಬ್ಬ ತನ್ನ ಪತ್ನಿ ಪೂಜಾದೇವಿಯನ್ನು ಹರಿತವಾದ ಚಾಕುವಿನಿಂದ ಕತ್ತು ಸೀಳಿ ಕೊಲೆಗೈದಿದ್ದಾನೆ ಎನ್ನುವ ಮಾಹಿತಿ ನಮಗೆ ಸಿಕ್ಕಿತ್ತು ಎಂದು ಡಿಎಸ್ಪಿ ಮನೋಜ್ ಮೋಹನ್ ತಿಳಿಸಿದ್ದಾರೆ.
ಪೊಲೀಸರು ತಕ್ಷಣ ಕ್ರಮ ಕೈಗೊಂಡು ಘಟನೆಯ ಪ್ರಮುಖ ಆರೋಪಿ ಅರ್ಜುನ್ ಶರ್ಮಾನನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸದರ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ, ಘಟನೆಗೆ ಬಳಸಿದ್ದ ಆಯುಧ ಹಾಗೂ ಪೆಟ್ಟಿಗೆಯನ್ನು ವಶಪಡಿಸಿಕೊಳ್ಳಲಾಗಿದೆ.
ಮತ್ತಷ್ಟು ಓದಿ: ವರದಕ್ಷಿಣೆ ಕೊಡಲಿಲ್ಲವೆಂದು ಪತ್ನಿಯನ್ನು ಹೊಡೆದು ಹತ್ಯೆ ಮಾಡಿದ ಪತಿ
ಆರೋಪಿ ಅರ್ಜುನ್ ಕೈಯಲ್ಲಿ ಬ್ಯಾಗ್ ಹಿಡಿದು ಪೊಲೀಸ್ ಠಾಣೆಗೆ ಬರುತ್ತಿದ್ದ ಎಂದು ನಜೀರ್ ತಿಳಿಸಿದ್ದಾನೆ. ಚೀಲದಿಂದ ರಕ್ತ ಸೋರುತ್ತಿತ್ತು. ಅಷ್ಟರಲ್ಲಿ ಒಬ್ಬ ಪೋಲೀಸ್ ಅವನನ್ನು ತಡೆದಿದ್ದರು, ಆಗ ಬ್ಯಾಗ್ ನಲ್ಲಿ ತುಂಡರಿಸಿದ ತಲೆಯನ್ನು ನೋಡಿ ಎಲ್ಲರೂ ಬೆಚ್ಚಿಬಿದ್ದರು. ಇದಾದ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಪತ್ನಿಯನ್ನು ಏಕೆ ಕೊಂದಿದ್ದೀರಿ ಎಂದು ಪ್ರಶ್ನಿಸಿದಾಗ ಆಕೆಗೆ ಬೇರೊಬ್ಬ ವ್ಯಕ್ತಿಯ ಜತೆ ಅಕ್ರಮ ಸಂಬಂಧವಿತ್ತು ಎಂದು ಹೇಳಿದ್ದಾನೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:47 am, Tue, 17 September 24