ಬೆಂಗಳೂರು: ಕತ್ತು ಕೊಯ್ದು ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ರಾಮಮೂರ್ತಿನಗರದ ಮುತ್ತು ಮಾರಿಯಮ್ಮ ದೇವಸ್ಥಾನದ ಬಳಿ ನಡೆದಿದೆ. ಲಾವಣ್ಯ(37) ಹತ್ಯೆಯಾದ ಮಹಿಳೆ.
ಕೊಲೆಯಾದ ಲಾವಣ್ಯಳ ಗಂಡ ವಾಸುವಿಗೆ ತಂಗಿಯ ಗಂಡನಾಗಿದ್ದ ವಿಜಯ್ ಕುಮಾರ್ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಘಟನೆ ಸಂಬಂಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಏರಿಯಾದ ಜನರಲ್ಲಿ ಆತಂಕ ಮನೆ ಮಾಡಿದೆ.
ಕೊಲೆಗೆ ಕಾರಣ:
ಆರೋಪಿ ವಿಜಯ್ ಕುಮಾರ್ ತನ್ನ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಹೀಗಾಗಿ ಬಸವನಗುಡಿ ಮಹಿಳಾ ಠಾಣೆಯಲ್ಲಿ ವಿಜಯ್ ಕುಮಾರ್ ವಿರುದ್ಧ ದೂರು ದಾಖಲಾಗಿತ್ತು. ರಾಜಿ ಮಾಡಿಕೊಳ್ಳಲು ಲಾವಣ್ಯ ಹಾಗೂ ಆಕೆಯ ಪತಿ ವಾಸುಗೆ ಆರೋಪಿ ವಿಜಯ್ ಪೀಡಿಸುತ್ತಿದ್ದ. ಈ ಬಗ್ಗೆ ಮಾತನಾಡಲು ಇಂದು ಲಾವಣ್ಯ ಮನೆಗೆ ಬಂದಿದ್ದಾನೆ. ಈ ವೇಳೆ ಲಾವಣ್ಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಬಳಿಕ ತಾನು ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಸದ್ಯ ಆರೋಪಿ ವಿಜಯ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಲಾವಣ್ಯ ಮೃತಪಟ್ಟಿದ್ದಾರೆ.
Published On - 3:29 pm, Sun, 15 November 20