3 ವರ್ಷದ ಹಿಂದೆ ನಡೆದ ಆ ದುರ್ಘಟನೆಯೇ ತಾಯಿಯ ಹತ್ಯೆಗೆ ಮೂಲವಾಯಿತಾ!?

ಬೆಂಗಳೂರು: ನಗರದ ಕೆ ಆರ್​ ಪುರಂನಲ್ಲಿ ನಸುಕಿನ ವೇಳೆ ಹೆತ್ತಮ್ಮನನ್ನು ಸಾಯಿಸಿ, ಪ್ರಿಯತಮನ ಜೊತೆ ಜಾಲಿ ರೈಡ್​ಗಾಗಿ ಅಂಡಮಾನ್​ಗೆ ಎಸ್ಕೇಪ್​ ಆಗಿದ್ದ ಅಮೃತಾ- ಶ್ರೀಧರ್​ ಪ್ರಕರಣಕ್ಕೆ ಟ್ವಿಸ್ಟ್​ಗೆ ಸಿಕ್ಕಿದೆ. ಅಂಡಮಾನ್​ನಲ್ಲಿ ಬೈಕ್​ ರೈಡ್​ನಲ್ಲಿದ್ದ ಅಮೃತಾ- ಶ್ರೀಧರ್ ಇಬ್ಬರನ್ನೂ ಕೆ ಆರ್​ ಪುರಂ ಇನ್ಸ್​ಪೆಕ್ಟರ್​ ಅಂಬರೀಷ್​ ತಂಡ ಕರೆದುತರುವಾಗ ವಿಮಾನ ಪ್ರಯಾಣದುದ್ದಕ್ಕೂ ಇಬ್ಬರೂ ಹಲವಾರು ವಿಷಯಗಳನ್ನು ಪೊಲೀಸರೊಂದಿಗೆ ಹಂಚಿಕೊಂಡಿದ್ದಾರೆ. ತನ್ನ ಹೆತ್ತಮ್ಮ ನಿರ್ಮಲಾರನ್ನು ಸಾಯಿಸಿದ್ದು ತಾನೇ ಎಂದು ಇದೇ ಸಂದರ್ಭದಲ್ಲಿ ಆರೋಪಿ ಅಮೃತಾ ಚಂದ್ರಶೇಖರ್​ ಒಪ್ಪಿಕೊಂಡಿದ್ದಾಳೆ. ಆಕೆಯ ಪ್ರಿಯಕರ […]

3 ವರ್ಷದ ಹಿಂದೆ ನಡೆದ ಆ ದುರ್ಘಟನೆಯೇ ತಾಯಿಯ ಹತ್ಯೆಗೆ ಮೂಲವಾಯಿತಾ!?
ಸಾಧು ಶ್ರೀನಾಥ್​

Updated on: Feb 06, 2020 | 6:26 PM

ಬೆಂಗಳೂರು: ನಗರದ ಕೆ ಆರ್​ ಪುರಂನಲ್ಲಿ ನಸುಕಿನ ವೇಳೆ ಹೆತ್ತಮ್ಮನನ್ನು ಸಾಯಿಸಿ, ಪ್ರಿಯತಮನ ಜೊತೆ ಜಾಲಿ ರೈಡ್​ಗಾಗಿ ಅಂಡಮಾನ್​ಗೆ ಎಸ್ಕೇಪ್​ ಆಗಿದ್ದ ಅಮೃತಾ- ಶ್ರೀಧರ್​ ಪ್ರಕರಣಕ್ಕೆ ಟ್ವಿಸ್ಟ್​ಗೆ ಸಿಕ್ಕಿದೆ. ಅಂಡಮಾನ್​ನಲ್ಲಿ ಬೈಕ್​ ರೈಡ್​ನಲ್ಲಿದ್ದ ಅಮೃತಾ- ಶ್ರೀಧರ್ ಇಬ್ಬರನ್ನೂ ಕೆ ಆರ್​ ಪುರಂ ಇನ್ಸ್​ಪೆಕ್ಟರ್​ ಅಂಬರೀಷ್​ ತಂಡ ಕರೆದುತರುವಾಗ ವಿಮಾನ ಪ್ರಯಾಣದುದ್ದಕ್ಕೂ ಇಬ್ಬರೂ ಹಲವಾರು ವಿಷಯಗಳನ್ನು ಪೊಲೀಸರೊಂದಿಗೆ ಹಂಚಿಕೊಂಡಿದ್ದಾರೆ.

ತನ್ನ ಹೆತ್ತಮ್ಮ ನಿರ್ಮಲಾರನ್ನು ಸಾಯಿಸಿದ್ದು ತಾನೇ ಎಂದು ಇದೇ ಸಂದರ್ಭದಲ್ಲಿ ಆರೋಪಿ ಅಮೃತಾ ಚಂದ್ರಶೇಖರ್​ ಒಪ್ಪಿಕೊಂಡಿದ್ದಾಳೆ. ಆಕೆಯ ಪ್ರಿಯಕರ ಶ್ರೀಧರ್ ಸಹ ಪ್ರಕರಣದಲ್ಲಿ ಭಾಗಿಯಾಗಿರುವುದು ಖಚಿತಪಟ್ಟಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಆದರೂ ಪ್ರಕರಣದ ಸಂಪೂರ್ಣ ವಿವರ, ವಿವಿಧ ಆಯಾಮಗಳು ಬಯಲಿಗೆ ಬರಬೇಕಿವೆ ಎಂದೂ ಪೊಲೀಸರು ಹೇಳಿದ್ದಾರೆ.

ಮೂರು ವರ್ಷಗಳ ಹಿಂದೆ ಏನಾಗಿತ್ತೆಂದ್ರೆ..

2017ರಲ್ಲಿ ಹೊಸಕೋಟೆ ಬಳಿ ಕಾರು ಅಪಘಾತವೊಂದು ನಡೆದಿತ್ತು. ವೇಗವಾಗಿ ಕಾರ್ ಚಲಾಯಿಸಿ ಮೇಲಿನ ಇಬ್ಬರೂ ಆರೋಪಿಗಳು ಆ ಕೃತ್ಯ ಎಸಗಿದ್ದರು. ಪ್ರಕರಣವೊಂದರಲ್ಲಿ ಮೂವರು ಮೃತಪಟ್ಟು, ಒಬ್ಬರಿಗೆ ಗಂಭೀರ ಗಾಯವಾಗಿತ್ತು. ಪ್ರಕರಣದಲ್ಲಿ ಕಾರು ಸಂಪೂರ್ಣವಾಗಿ ಜಖಂ ಆಗಿತ್ತು. ಅಪಘಾತ ಪ್ರಕರಣ ಮತ್ತು ಕಾರಿಗಾಗಿ ಲಕ್ಷಾಂತರ ರೂ. ಖರ್ಚು ತಗುಲಿತ್ತು. ಈ ಖರ್ಚಿಗಾಗಿ ಅಮೃತಾ ₹15 ಲಕ್ಷ ಸಾಲ ಮಾಡಿಕೊಂಡಿದ್ರಂತೆ. ಆ ಪ್ರಕರಣದಿಂದಾಗಿಯೇ ಅಮ್ಮನನ್ನು ಸಾಯಿಸುವ ಪ್ರಮೇಯ ಬಂತು ಎಂದು ಅಮೃತಾ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾಳೆ.

Published On - 4:24 pm, Thu, 6 February 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us