ಅಕ್ರಮವಾಗಿ ಗರ್ಭಪಾತದ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದ ಇ-ಕಾಮರ್ಸ್​ ಸಂಸ್ಥೆಯೊಂದರ ವಿರುದ್ಧ ಪ್ರಕರಣ ದಾಖಲು

| Updated By: Lakshmi Hegde

Updated on: May 02, 2022 | 6:19 PM

ಗರ್ಭಪಾತವೇ ಅಪರಾಧ. ಆಸ್ಪತ್ರೆಗಳಲ್ಲಿ ಕೂಡ ಗರ್ಭಪಾತ ಮಾಡುವಂತಿಲ್ಲ. ಮೆಡಿಕಲ್ ಟರ್ಮಿನೇಶನ್​ ಆಫ್​ ಪ್ರೆಗ್ನೆನ್ಸಿ ಕಾಯ್ದೆ 2002 ಮತ್ತು 2003 ರ ನಿಯಮಗಳ ಅನುಸಾರ, ಗರ್ಭಪಾತದ ಮಾತ್ರೆಗಳು ಕೇವಲ ಆಸ್ಪತ್ರೆಗಳಲ್ಲಿ ಮಾತ್ರ ಇರಬೇಕು.

ಅಕ್ರಮವಾಗಿ ಗರ್ಭಪಾತದ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದ ಇ-ಕಾಮರ್ಸ್​ ಸಂಸ್ಥೆಯೊಂದರ ವಿರುದ್ಧ ಪ್ರಕರಣ ದಾಖಲು
ಸಾಂಕೇತಿಕ ಚಿತ್ರ
Follow us on

ಯಾವುದೇ ಮಾನ್ಯ ದಾಖಲೆಗಳು ಇಲ್ಲದೆ, ಗರ್ಭಪಾತದ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದ ಇ-ಕಾಮರ್ಸ್​ ಸಂಸ್ಥೆಯೊಂದರ ವಿರುದ್ಧ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.  ಇ-ಕಾಮರ್ಸ್​ ಸಂಸ್ಥೆ ಹೀಗೆ ಅಕ್ರಮವಾಗಿ ಅಬಾರ್ಶನ್​ ಕಿಟ್​​ನ್ನು ಮಾರಾಟ ಮಾಡುತ್ತಿದೆ ಎಂಬ ಮಾಹಿತಿ ಬೇರೆ ಮೂಲದಿಂದ ಸಿಕ್ಕಿತ್ತು. ಅದು ಸತ್ಯವೋ, ಕಂಪನಿ ಮಾರಾಟ ಮಾಡುತ್ತಿರುವುದು ನಿಜವಾ ಎಂದು ಪರಿಶೀಲನೆ ನಡೆಸಲು ನಾವೇ ಖುದ್ದಾಗಿ ಒಂದು ಕಿಟ್​ಗೆ ಆರ್ಡರ್ ಮಾಡಿದ್ದೆವು.  ಇದರಿಂದಾಗಿ ಗರ್ಭಪಾತ ಮಾತ್ರೆಗಳನ್ನು ಮಾರಾಟ ಮಾಡುತ್ತಿರುವುದು ದೃಢಪಟ್ಟಿದೆ ಎಂದು ಎಫ್​ಡಿಎ ಸಹಾಯಕ ಆಯುಕ್ತ ಗಣೇಶ್ ರೋಕಡೆ ತಿಳಿಸಿದ್ದಾರೆ.  

ಅಂದಹಾಗೇ, ಈ ಗರ್ಭಪಾತಕ್ಕೆ ಸಂಬಂಧಪಟ್ಟು ಸಂಸ್ಥೆ ಮಾರಾಟ ಮಾಡುವ ಕಿಟ್​​ಗೆ ಹಣ ಪಡೆಯುತ್ತದೆಯೇ ಹೊರತು ಅದಕ್ಕೆ ಬಿಲ್ ಮಾಡುವುದಿಲ್ಲ. ಅಂದರೆ ಈ ಇ ಕಾಮರ್ಸ್​ ವೇದಿಕೆಯಲ್ಲಿ ನೋಂದಣಿ ಮಾಡಿಕೊಂಡಿರುವ ನಿರ್ಧಿಷ್ಟ ಮಾರಾಟಗಾರರು ಒಡಿಶಾದ ಔಷಧಿ ಅಂಗಡಿಯೊಂದರ ದಾಖಲೆಯನ್ನು ಬಳಸುತ್ತಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ ಎಂದು ಗಣೇಶ್ ಹೇಳಿದ್ದಾರೆ.

ಗರ್ಭಪಾತವೇ ಅಪರಾಧ. ಆಸ್ಪತ್ರೆಗಳಲ್ಲಿ ಕೂಡ ಗರ್ಭಪಾತ ಮಾಡುವಂತಿಲ್ಲ. ಮೆಡಿಕಲ್ ಟರ್ಮಿನೇಶನ್​ ಆಫ್​ ಪ್ರೆಗ್ನೆನ್ಸಿ ಕಾಯ್ದೆ 2002 ಮತ್ತು 2003 ರ ನಿಯಮಗಳ ಅನುಸಾರ, ಗರ್ಭಪಾತದ ಮಾತ್ರೆಗಳು ಕೇವಲ ಆಸ್ಪತ್ರೆಗಳಲ್ಲಿ ಮಾತ್ರ ಇರಬೇಕು. ಅದೂ ಕೂಡ ತರಬೇತಿ ಪಡೆದ ತಜ್ಞರು ಮಾತ್ರ ಅದರ ಮೇಲ್ವಿಚಾರಣೆ ವಹಿಸಿಕೊಳ್ಳಬೇಕು. ಸದ್ಯ ಇ -ಕಾಮರ್ಸ್ ಸಂಸ್ಥೆ ಮತ್ತು ಅಬಾರ್ಶನ್​ ಕಿಟ್​ ಮಾರುತ್ತಿದ್ದ ಮಾರಾಟಗಾರರ ವಿರುದ್ಧ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: Parashuram Jayanti 2022: ಪರಶುರಾಮನ ಬಗ್ಗೆ 10 ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ..!