Crime News: ಬೆಂಗಳೂರಿನ ಸೂಪರ್ ಮಾರ್ಕೆಟ್​ನಲ್ಲಿ ಕಳವು, ಮೈಸೂರಿನಲ್ಲಿ ಗಾಂಜಾ ಕಳ್ಳರ ಬಂಧನ

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಜೆ.ಪಿ.ನಗರ 7ನೇ ಹಂತದ ಆರ್​ಬಿಐ ಲೇಔಟ್​ನಲ್ಲಿರುವ ಎವರ್ ಫೈನ್ ಸೂಪರ್ ಮಾರ್ಕೆಟ್​ನ ಕಬ್ಬಿಣದ ಬಾಗಿಲು ಮೀಟಿ ನುಗ್ಗಿರುವ ಕಳ್ಳರು ₹ 60 ಸಾವಿರ ನಗದು ಕದ್ದು ಪರಾರಿಯಾಗಿದ್ದಾರೆ.

Crime News: ಬೆಂಗಳೂರಿನ ಸೂಪರ್ ಮಾರ್ಕೆಟ್​ನಲ್ಲಿ ಕಳವು, ಮೈಸೂರಿನಲ್ಲಿ ಗಾಂಜಾ ಕಳ್ಳರ ಬಂಧನ
ಬೆಂಗಳೂರು ಜೆಪಿ ನಗರದಲ್ಲಿ ಸೂಪರ್ ಮಾರ್ಕೆಟ್ ಕಳ್ಳರು
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:May 03, 2022 | 8:12 AM

ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಜೆ.ಪಿ.ನಗರ 7ನೇ ಹಂತದ ಆರ್​ಬಿಐ ಲೇಔಟ್​ನಲ್ಲಿರುವ ಎವರ್ ಫೈನ್ ಸೂಪರ್ ಮಾರ್ಕೆಟ್​ನ ಕಬ್ಬಿಣದ ಬಾಗಿಲು ಮೀಟಿ ನುಗ್ಗಿರುವ ಕಳ್ಳರು ₹ 60 ಸಾವಿರ ನಗದು ಕದ್ದು ಪರಾರಿಯಾಗಿದ್ದಾರೆ. ಸೂಪರ್ ಮಾರ್ಕೆಟ್​ಗೆ ಮೇ 2ರ ನಸುಕಿನ 2.45ಕ್ಕೆ ಹೈಫೈ ಕಾರಿನಲ್ಲಿ ಬಂದ ಕಳ್ಳರು ಬೀಗ ಎಂಥದ್ದು ಎಂದು ಪರಿಶೀಲಿಸಿದರು. ನಂತರ ಮತ್ತೊಮ್ಮೆ 3.30ಕ್ಕೆ ಬಂದ ಕಳ್ಳರು ದೊಡ್ಡ ಮರದ ತುಂಡು ತೆಗೆದುಕೊಂಡು ಬಂದು ಷಟರ್ ಹಿಡಿದು ಮರದ ತುಂಡು ಹಾಕಿ ಮೀಟಿದರು. ಓರ್ವ ಷಟರ್ ಮೇಲೆ ಎಳೆದು ಹಿಡಿದುಕೊಂಡರೆ ಮತ್ತೊಬ್ಬಾತ ಸೂಪರ್ ಮಾರ್ಕೆಟ್ ಒಳಗೆ ನುಗ್ಗಿದ. ಒಳಹೋದವನು ಕ್ಯಾಶ್ ಕೌಂಟರ್​ನಲ್ಲಿದ್ದ ₹ 60 ಸಾವಿರ ನಗದು ಕದ್ದು ಪರಾರಿಯಾದ. ಈ ವೇಳೆ ಷಟರ್ ಮೀಟಲು ಬಳಸಿದ್ದ ಮರದ ತುಂಡನ್ನೂ ಅಲ್ಲಿಯೇ ಬಿಟ್ಟು ಓಡಿಹೋಗಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಕೋಣನಕುಂಟೆ ಪೊಲೀಸರು ಭೇಟಿ, ಪರಿಶೀಲಿಸಿದರು.

ಗಾಂಜಾ ಮಾರಾಟ: ಆರೋಪಿಗಳ ಬಂಧನ

ಮೈಸೂರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಉದಯಗಿರಿ ಠಾಣೆ ಪೊಲೀಸರು ಬಂಧಿಸಿದರು. ಅಜ್ಮಲ್ ಖಾನ್, ಸೈಯದ್ ಆಸಿಫ್, ವಾಹಿದ್ ಪಾಷಾ ಬಂಧಿತರು. ಬಂಧಿತರಿಂದ 1 ಕೆಜಿ 750 ಗ್ರಾಂ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾರ್​ನಲ್ಲಿ ವ್ಯಕ್ತಿ ಮೇಲೆ ಹಲ್ಲೆ

ಹಳೇ ದ್ವೇಷದ ಹಿನ್ನೆಲೆಯಲ್ಲಿ ಬಾರ್​ನಲ್ಲಿ ವ್ಯಕ್ತಿ ಮೇಲೆ ಹಲ್ಲೆ ನಡೆದಿರುವ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕು ಬನ್ನೂರಿನಲ್ಲಿ ನಡೆದಿದೆ. ದಯಾನಂದ್ ಹಲ್ಲೆಗೆ ಒಳಗಾದವರು. ಗುರು, ಚಂದ್ರು ಸೇರಿದಂತೆ ಹಲವರು ಲಾಂಗ್, ಬಿಯರ್ ಬಾಟಲಿಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ದೃಶ್ಯವು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗಾಯಗೊಂಡಿರುವ ದಯಾನಂದ್ ಅವರಿಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Bengaluru Crime News: ಪ್ರಿಯಕರನಿಗಾಗಿ ಗಂಡನನ್ನು ಕೊಂದು, ದರೋಡೆಯ ಕತೆ ಕಟ್ಟಿದ ಮಹಿಳೆ

ಇದನ್ನೂ ಓದಿ: Crime News: ಬೈಕ್​ಗೆ ಟಿಪ್ಪರ್ ಡಿಕ್ಕಿ ಮಹಿಳೆ ಸ್ಥಳದಲ್ಲೇ ದುರ್ಮರಣ: ಟಿಪ್ಪರ್​​ ಚಾಲಕ ಪರಾರಿ

Published On - 8:12 am, Tue, 3 May 22

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್